South Bullet Train: ಬೆಂಗಳೂರು–ಚೆನ್ನೈ, ಹೈದರಾಬಾದ್ ಬುಲೆಟ್ ರೈಲು: ಕನ್ನಡಿಗರು - ತಮಿಳಿಗರಿಂದ ವಿರೋಧ, ಕಾರಣವೇನು ?
ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಪರಿಚಯಿಸಲು ಉದ್ದೇಶಿಸಿರುವ ಪ್ರಮುಖ ಯೋಜನೆ ಬುಲೆಟ್ ಟ್ರೈನ್ ಯೋಜನೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯು ಕೇವಲ ಆಂಧ್ರಪ್ರದೇಶ ಹಾಗೂ ಅನ್ಯ ರಾಜ್ಯಗಳ ಜನರಿಗೆ ಲಾಭವಾಗಲಿದೆ. ಕನ್ನಡಿಗರ ಮೂಗಿಗೆ ತುಪ್ಪ ಸವರು ಯೋಜನೆ ಇದಾಗಿದೆ ಎಂದು ಕನ್ನಡಿಗರು ತಮ್ಮ ಅಸಾಮಾಧಾನ ಹೊರ ಹಾಕಿದ್ದಾರೆ.
ಇನ್ಮುಂದೆ ಬೆಂಗಳೂರು - ಚೆನ್ನೈ ಕೇವಲ 73 ನಿಮಿಷಗಳಲ್ಲಿ ಮತ್ತು ಬೆಂಗಳೂರು-ಹೈದರಾಬಾದ್ 2 ಗಂಟೆ 10 ನಿಮಿಷಗಳಲ್ಲಿ ತುಲುಪಬಹುದಾಗಿದೆ. ದಕ್ಷಿಣ ಭಾರತದಾದ್ಯಂತ ಸಂಪರ್ಕವನ್ನು ಸುಧಾರಿಸುವ ಉದ್ದೇಶದಿಂದ ಬೆಂಗಳೂರು, ಹೈದರಾಬಾದ್, ಅಮರಾವತಿ ಮತ್ತು ಚೆನ್ನೈ ಪ್ರಮುಖ ನಗರಗಳನ್ನು ಸಂಪರ್ಕಿಸುವ ದಕ್ಷಿಣ ಬುಲೆಟ್ ರೈಲು ಕಾರಿಡಾರ್ ಯೋಜನೆಗೆ ಅನುನೋದನೆ ನೀಡಲಾಗಿದೆ. ಈ ಕಾರಿಡಾರ್ ಈ ಪ್ರಮುಖ ಆರ್ಥಿಕ ಮತ್ತು ತಂತ್ರಜ್ಞಾನ ಕೇಂದ್ರಗಳನ್ನು ಹತ್ತಿರ ತರುತ್ತದೆ, ಸಮಗ್ರ ಆರ್ಥಿಕ ಪ್ರದೇಶವನ್ನು ಸೃಷ್ಟಿಸುತ್ತದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ಅವರು ಹೇಳಿದ್ದಾರೆ. ಆದರೆ, ಈ ಯೋಜನೆಯಿಂದ ಬೆಂಗಳೂರು ಹಾಗೂ ಕರ್ನಾಟಕಕ್ಕೆ ಹೆಚ್ಚಿನ ಲಾಭವಿಲ್ಲ ಎಂದು ಕನ್ನಡಿಗರು ಅಭಿಪ್ರಾಯಪಟ್ಟಿದ್ದಾರೆ.

ಇದು ಆಂಧ್ರಪ್ರದೇಶ ಮೆಟ್ರೋ ರೈಲು ಯೋಜನೆ. ಹೈದರಾಬಾದ್ ನೆಪ ಹೇಳಿ ಅವರು ಬಹುತೇಕ ಇಡೀ ರಾಜ್ಯವನ್ನೇ ಆವರಿಸಿಕೊಂಡಿದ್ದಾರೆ ಎಂದು ಕನ್ನಡಿಗರು ಹೇಳಿದ್ದಾರೆ. ಇದು ಕುತೂಹಲಕಾರಿಯಾಗಿದೆ. ಆದರೆ ಬೆಂಗಳೂರಿನಲ್ಲಿ ಉಪನಗರ ರೈಲು ಯೋಜನೆಯ ಕಾಮಗಾರಿ ವೇಗವಾಗಿ ಸಾಗುತ್ತಿಲ್ಲ. ಮೆಟ್ರೋದ ಎಲ್ಲ ಮಾರ್ಗಗಳ ಕಾಮಗಾರಿಯೂ ವಿಳಂಬವಾಗುತ್ತಿದೆ. ಹೀಗೆಯೇ ಮುಂದುವರಿದರೆ ವೈಟ್‌ಫೀಲ್ಡ್ ಅಥವಾ ಎಲೆಕ್ಟ್ರಾನಿಕ್ ಸಿಟಿ ತಲುಪುವುದಕ್ಕಿಂತ ಚೆನ್ನೈ ತಲುಪುವುದೇ ಬೇಗ ಆಗಬಹುದು ಎಂದು ಕೆಲವರು ವ್ಯಂಗ್ಯವಾಡಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಅವರು ಈ ಯೋಜನೆಯ ವಿವರವನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕನ್ನಡಿಗರು, ಯಾಕೆ ಸಂಸದ ತೇಜಸ್ವಿ ಸೂರ್ಯ ಅವರು, ಬೆಂಗಳೂರಿನಿಂದ ಹುಬ್ಬಳ್ಳಿಗೆ ಅಥವಾ ಬೆಂಗಳೂರಿನಿಂದ ಮುಂಬೈಗೆ ಅಭಿವೃದ್ಧಿ ಹೊಂದುವುದನ್ನು ವಿರೋಧಿಸುತ್ತಿದ್ದಾರೆ, ಇದು ಇಡೀ ಕರ್ನಾಟಕಕ್ಕೆ ಪ್ರಯೋಜನವನ್ನು ನೀಡುತ್ತದೆ. ಈ ಬುಲೆಟ್ ರೈಲಿನಿಂದ ಕರ್ನಾಟಕಕ್ಕೆ ಯಾವುದೇ ಪ್ರಯೋಜನವಿಲ್ಲ. ಕರ್ನಾಟಕದ ನಮ್ಮ ಸಂಸದರು ಎಂದಿಗೂ ಕರ್ನಾಟಕದ ಬಗ್ಗೆ ಗಮನಹರಿಸುವುದಿಲ್ಲ ಮತ್ತು ಯಾವಾಗಲೂ ಇತರ ರಾಜ್ಯಗಳನ್ನು ಪ್ರೀತಿಸುತ್ತಾರೆ ಎಂಬುದು ದುರದೃಷ್ಟಕರ ಎಂದು ಹೇಳಿದ್ದಾರೆ.
ಬೆಂಗಳೂರು- ಮೈಸೂರು, ಬೆಂಗಳೂರು- ಮಂಗಳೂರು, ಬೆಂಗಳೂರು - ಬೆಳಗಾವಿ, ಬೆಂಗಳೂರು- ಕಲಬುರಗಿ ಮೂಲಕ ಬಳ್ಳಾರಿ - ರಾಯಚೂರು ಈ ಮಾರ್ಗಗಳ ಅವಶ್ಯಕತೆ ನಮಗಿದೆ. ಆದರೆ, ಚೆನ್ನೈ ಅಥವಾ ಹೈದರಾಬಾದ್ ಮಾರ್ಗಗಳ ಅಭಿವೃದ್ಧಿ ನಮಗೆ ಬೇಕಾಗಿಲ್ಲ ಎಂದಿದ್ದಾರೆ. ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಷ ಇರುವುದರಿಂದಲೇ ಅಲ್ಲಿನ ಜನರಿಗೆ ಲಾಭವಾಗುತ್ತಿದೆ. ಪ್ರಮುಖ ಯೋಜನೆಗಳು ಆಂಧ್ರಪ್ರದೇಶದ ಪಾಲಾಗುತ್ತಿದೆ. ಕರ್ನಾಟಕಕ್ಕೂ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.
South Bullet Train: ತಮಿಳಿಗರಿಂದಲೂ ವಿರೋಧ
ಇನ್ನು ಪ್ರಸ್ತಾವಿತ ಈ ಯೋಜನೆಗೆ ತಮಿಳಿಗರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಬುಲೆಟ್ ಟ್ರೈನ್ ಯೋಜನೆಯಿಂದ ತಮಿಳುನಾಡಿಗೆ ಹೆಚ್ಚಿನ ಲಾಭವಿಲ್ಲ. ತಮಿಳುನಾಡಿನ ಪ್ರಮುಖ ನಗರಗಳನ್ನು ಈ ಬುಲೆಟ್ ಟ್ರೈನ್ ಸಂಪರ್ಕಿಸುವುದೇ ಇಲ್ಲ ಎಂದಿದ್ದಾರೆ.
This is bullet train for others and bullshit train for Karnataka. @CMofKarnataka should not provide land for this. https://t.co/OdsYH57Tmf
— PLE Karnataka (@PLEKarnataka) November 2, 2026


Click it and Unblock the Notifications
