Video: ವ್ಯಾಪಾರಿ ರೊಟ್ಟಿಗೆ ಉಗುಳುವುದನ್ನು ಶ್ರೀರಾಮನಿಗೆ ಹೋಲಿಸಿದ ಸೋನು ಸೂದ್- ಕಂಗನಾ ಕೆಂಡಾಮಂಡಲ!
ಲಕ್ನೋ ಜುಲೈ 21: ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಈ ದೃಶ್ಯದಲ್ಲಿ ವಾಕರಿಕೆ ಬರುವಂತಹ ದೃಶ್ಯ ಕಂಡು ಬಂದಿದೆ. ವ್ಯಾಪಾರಿಯೊಬ್ಬ ರೊಟ್ಟಿಗೆ ಉಗುಳುವ ದೃಶ್ಯ ಸೆರೆಯಾಗಿದೆ. ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಬಾಲಿವುಡ್ ನಟ ಸೋನು ಸೂದ್ ಈ ವ್ಯಕ್ತಿಯನ್ನು ರಾಮ ಹಾಗೂ ಶಬರಿಗೆ ಹೋಲಿಸಿದ್ದಾರೆ. ಇದಕ್ಕೆ ಸಂಸದೆ ಕಂಗನಾ ರಣಾವತ್ ಕೆಂಡಾಮಂಡಲರಾಗಿದ್ದಾರೆ.
ವೈರಲ್ ವಿಡಿಯೋದಲ್ಲಿ ಢಾಬಾದಲ್ಲಿ ಕೆಲಸ ಮಾಡುವ ಹುಡುಗ ಹಿಟ್ಟಿನಲ್ಲಿ ಉಗುಳಿದ ನಂತರ ರೊಟ್ಟಿಗಳನ್ನು ಬೇಯಿಸುತ್ತಿರುವುದನ್ನು ಕಾಣಬಹುದು. ಬಳಿಕ ಈ ಢಾಬಾವನ್ನು ಮುಚ್ಚಬೇಕು ಹುಡುಗನ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಡ ಹೇರಲಾಗಿದೆ. ವಿವಿಧ ರೀತಿ ಕಾಮೆಂಟ್‌ಗಳನ್ನು ಮಾಡುವ ಮೂಲಕ ಜನ ಟೀಕಿಸುತ್ತಿದ್ದಾರೆ.

ಅದೇ ಸಮಯದಲ್ಲಿ ನಟ ಸೋನು ಸೂದ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸುವ ಮೂಲಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸೋನು ಸೂದ್ ಹೇಳಿಕೆಗೆ ಜನ ಛೀಮಾರಿ ಹಾಕತೊಡಗಿದ್ದಾರೆ. ಮುಸ್ಲಿಂ ವ್ಯಾಪಾರಿಯೊಬ್ಬ ರೊಟ್ಟಿ ತಯಾರಿಸುವ ವೇಳೆ ಉಗುಳುವ ಕ್ರಮವನ್ನು ರಾಮ, ಶಬರಿಗೆ ಹೋಲಿಕೆ ಮಾಡಿ ಬಾಲಿವುಡ್ ನಟ ಸೋನು ಸೂದ್ ಸಮರ್ಥಿಸಿಕೊಂಡು ಭಾರೀ ಟೀಕೆಗೆ ಗುರಿಯಾಗಿದ್ದಾರೆ.
हमारे श्री राम जी ने शबरी के झूठे बेर खाए थे तो मैं क्यों नहीं खा सकता
— sonu sood (@SonuSood) July 20, 2024
हिंसा को अहिंसा से पराजित किया जा सकता है मेरे भाई🤍
बस मानवता बरकरार रहनी चाहिए ।
जय श्री राम🚩 https://t.co/uljActwMrR
ಉತ್ತರ ಪ್ರದೇಶದಲ್ಲಿ ಕನ್ವರ್ ಯಾತ್ರೆ ಸಾಗುವ ಮಾರ್ಗದುದ್ದಕ್ಕೂ ಇರುವ ಅಂಗಡಿಗಳ ಮಾಲೀಕರು ತಮ್ಮ ಹೆಸರಿನ ಬೋರ್ಡ್‌ಗಳನ್ನು ಪ್ರದರ್ಶಿಸಬೇಕು ಎಂಬ ಪೊಲೀಸರ ಆದೇಶಕ್ಕೆ ಸೋನು ಸೂದ್ ಖಾರವಾಗಿ ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ಟಾಂಗ್ ಕೊಡಲು ಕೆಲವರು ಮುಸ್ಲಿಂ ವ್ಯಾಪಾರಿಗೆ ಸಂಬಂಧಿಸಿದ ವೀಡಿಯೋವನ್ನು ನೆಟ್ಟಿಗರು ಹರಿಬಿಟ್ಟದ್ದರು. 'ಹಿಟ್ಟಿನ ಮೇಲೆ ಉಗುಳಿ ತಯಾರಿಸುವ ರೊಟ್ಟಯನ್ನು ಸೋನು ಸೂದ್ ಅವರಿಗೆ ಪಾರ್ಸೆಲ್ ಕಳುಹಿಸಬೇಕು. ಆದ್ದರಿಂದ ಸಹೋದರತ್ವವು ಹಾಗೆಯೇ ಉಳಿಯುತ್ತದೆ' ಎಂದು ನೆಟ್ಟಿಗರು ಟಾಂಗ್ ಕೊಟ್ಟಿದ್ದರು.
हमारे श्री राम जी ने शबरी के झूठे बेर खाए थे तो मैं क्यों नहीं खा सकता
— sonu sood (@SonuSood) July 20, 2024
हिंसा को अहिंसा से पराजित किया जा सकता है मेरे भाई🤍
बस मानवता बरकरार रहनी चाहिए ।
जय श्री राम🚩 https://t.co/uljActwMrR
ಇದಕ್ಕೆ ಪ್ರತ್ಯುತ್ತರ ನೀಡಿರುವ ಸೋನು ಸೂದ್, 'ನಮ್ಮ ಶ್ರೀರಾಮ ಅವರು ಶಬರಿಯ ಎಂಜಲು ಹಣ್ಣುಗಳನ್ನು ತಿಂದಿದ್ದಾರೆ. ಹಾಗಾದರೆ ನಾನು ರೊಟ್ಟಿಗಳನ್ನು ಏಕೆ ತಿನ್ನಬಾರದು? ಅಹಿಂಸೆಯಿಂದ ಹಿಂಸೆಯನ್ನು ಸೋಲಿಸಬಹುದು ನನ್ನ ಸಹೋದರ. ಮಾನವೀಯತೆ ಹಾಗೇ ಉಳಿಯಬೇಕು. ಜೈ ಶ್ರೀರಾಮ' ಎಂದು ಹೇಳಿದ್ದಾರೆ.
ಇದಕ್ಕೆ ನೆಟ್ಟಗರು ಆಕ್ರೋಶಗೊಂಡಿರುವುದು ಮಾತ್ರವಲ್ಲದೆ ಸಂಸದೆ ಕಂಗನಾ ಕೂಡ ಕಿಡಿ ಕಾರಿದ್ದಾರೆ. 'ಸೋನು ಅವರು ದೇವರು ಮತ್ತು ಧರ್ಮದ ಬಗ್ಗೆ ಅವರ ವೈಯಕ್ತಿಕ ಸಂಶೋಧನೆಗಳ ಆಧಾರದ ಮೇಲೆ ತಮ್ಮದೇ ಆದ ರಾಮಾಯಣವನ್ನು ನಿರ್ದೇಶಿಸುತ್ತಾರೆ' ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications