Sonam Wangchuk: ಕೇಂದ್ರ ಸರ್ಕಾರದ ಈ ಕ್ರಮವನ್ನು ಮೆಚ್ಚಿಕೊಂಡ ಸೋನಮ್ ವಾಂಗ್ಚುಕ್‌

Sonam Wangchuk: ವಿಜ್ಞಾನಿ ಹಾಗೂ ಸಾಮಾಜಿಕ ಹೋರಾಟಗಾರ ಸೋನಮ್ ವಾಂಗ್ಚುಕ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಪೋಸ್ಟ್‌ವೊಂದು ಇದೀಗ ವೈರಲ್ ಆಗಿದೆ. ದೇಶದಾದ್ಯಂತ ನಡೆದ ಜೆನ್‌ಜೀ ಹೋರಾಟದಲ್ಲಿ ವಾಂಗ್ಚುಕ್ ಅವರು ಮುಂಚೂಣಿಯಲ್ಲಿದ್ದರು. ಲಕ್ಷಾಂತರ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯನ್ನು ವಿರೋಧಿಸಿ, ಸೋನಮ್ ವಾಂಗ್ಚುಕ್ ಅವರು ಸುದೀರ್ಘ 21 ದಿನಗಳ ಕಾಲ ಉಪವಾಸ ಸತ್ಯಾಗ್ರಹ ಮಾಡಿದ್ದರು.

ಜುಲೈ 23ರ ರಾತ್ರಿ ಉಪವಾಸ ಸತ್ಯಾಗ್ರಹವನ್ನು ಅಂತ್ಯಗೊಳಿಸಿದ್ದ ಸೋನಮ್ ಅವರು ಗುರುಗ್ರಾಮ್‌ನ ಮೇದಾಂತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದೆಹಲಿಯಿಂದ ಹೊರಟ ಒಂದು ದಿನದ ಬಳಿಕ ಲಡಾಖ್‌ಗೆ ತೆರಳುವ ಮೊದಲು ವಂದೇ ಭಾರತ್ ರೈಲಿನಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ತೆರಳಿದ್ದಾರೆ. ಇದೀಗ ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಸೋನಮ್ ಅವರು ವಂದೇ ಭಾರತ್ ರೈಲಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋವೊಂದನ್ನು ಮಾಡಿದ್ದಾರೆ. ಈ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರ ಸಂಪೂರ್ಣ ವಿವರ ಈ ಲೇಖನದಲ್ಲಿದೆ.

Sonam Wangchuk

ಸೋನಮ್ ವಾಂಗ್ಚುಕ್ ಅವರು ವಂದೇ ಭಾರತ್ ರೈಲು ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಗುರುವಾರ ಬೆಳಿಗ್ಗೆ ಸೋನಮ್ ಅವರು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ವಿಶೇಷ ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಭಾರತೀಯ ರೈಲ್ವೆಯನ್ನು ಹೊಗಳಿದ್ದಾರೆ ಮತ್ತು ಭಾರತ ಸರ್ಕಾರದ ಕಾರ್ಯವೈಖರಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.

ಈ ವಿಡಿಯೋದಲ್ಲಿ ಸೋನಮ್ ವಾಂಗ್ಚುಕ್ ಅವರು ರೈಲು ಪ್ರಯಾಣವೇ ತಮ್ಮ ನೆಚ್ಚಿನ ಪ್ರಯಾಣ ವಿಧಾನ ಎಂದಿದ್ದಾರೆ. ದೆಹಲಿಯಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ವಂದೇ ಭಾರತ್ ರೈಲು ಸೇವೆಯನ್ನೂ ಅವರು ಮೆಚ್ಚಿಕೊಂಡಿದ್ದಾರೆ. "ನನಗೂ ಚೆನಾಬ್ ಸೇತುವೆಯನ್ನು ನೋಡಬೇಕೆಂಬ ಆಸೆಯಿತ್ತು. ಅದನ್ನು ನೋಡಿದ್ದು ತುಂಬಾ ಸುಂದರ ಅನುಭವ. ಭಾರತೀಯ ರೈಲ್ವೆ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ" ಎಂದು ವಿಡಿಯೋದಲ್ಲಿ ಹೇಳಿದ್ದಾರೆ. ವಿಶ್ರಾಂತಿಗಾಗಿ ಕಾಶ್ಮೀರದಲ್ಲಿ ಒಂದು ರಾತ್ರಿ ತಂಗಿದ ಬಳಿಕ ಅವರು ಲಡಾಖ್‌ಗೆ ತೆರಳಿದ್ದಾಗಿ ಹೇಳಿದ್ದಾರೆ.

Sonam Wangchuk: ವಿದ್ಯಾರ್ಥಿಗಳ ವಿಚಾರದಲ್ಲಿ ಭರವಸೆ ಉಳಿಸಿಕೊಳ್ಳಲಿ

ಇನ್ನು ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರವು ನೀಡಿರುವ ಭರವಸೆಯನ್ನು ಉಳಿಸಿಕೊಳ್ಳಲಿ ಎಂದು ಸೋನಮ್ ವಾಂಗ್ಚುಕ್ ಅವರು ಹೇಳಿದ್ದಾರೆ. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿಚಾರದಲ್ಲಿ ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಎಂಬ ನಿಮ್ಮ ಭರವಸೆಯನ್ನು ಕೇಂದ್ರ ಸರ್ಕಾರವು ಉಳಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ. ದೇಶಾದ್ಯಂತ ಪ್ರತಿಭಟನೆಗಳಲ್ಲಿ ಭಾಗವಹಿಸಿದವರ ವಿರುದ್ಧ ಯಾವುದೇ ಎಫ್‌ಐಆರ್ ದಾಖಲಿಸುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕೇಂದ್ರ ಬಿಜೆಪಿ ಸರ್ಕಾರವು ನೀಡಿದ್ದ ಭರವಸೆಯನ್ನು ಪಾಲಿಸುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಸಂಸತ್ತಿನಲ್ಲಿ ಪರೀಕ್ಷೆಗಳ ಸುಧಾರಣೆಗಾಗಿ ಮಸೂದೆಯನ್ನು ಪರಿಚಯಿಸಲಾಗಿದೆ ಎನ್ನುವ ವಿಷಯವನ್ನು ಕೇಳಿ ನನಗೆ ಸಂತೋಷವಾಗಿದೆ. ಪರೀಕ್ಷೆಗಳಲ್ಲಿ ಮಾತ್ರವಲ್ಲದೆ ಇಡೀ ಶಿಕ್ಷಣ ವ್ಯವಸ್ಥೆಯಲ್ಲಿಯೂ ಈ ಸುಧಾರಣೆಯನ್ನು ಪರಿಚಯಿಸಲಾಗುವುದು ಎಂದು ನಾನು ಭಾವಿಸಿದ್ದೇನೆ. ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಲಿಖಿತವಾಗಿ ಮತ್ತು ನಂತರ ಕಾಕ್ರೋಚ್ ಜನತಾ ಪಕ್ಷ ಮತ್ತು ನನ್ನೊಂದಿಗೆ ಒಪ್ಪಿಕೊಂಡ ಸರ್ಕಾರವು ಅದನ್ನು ಪಾಲಿಸಬೇಕು ಮತ್ತು ವಿಶೇಷವಾಗಿ ಯುವ ಪೀಳಿಗೆಯೊಂದಿಗೆ ನಂಬಿಕೆಯ ವಾತಾವರಣವನ್ನು ನಿರ್ಮಿಸಲು ಪ್ರಯತ್ನಿಸಬೇಕು ಎಂದು ನಾನು ಮನವಿ ಮಾಡುತ್ತೇನೆ ಎಂದೂ ಅವರು ಹೇಳಿದ್ದಾರೆ.

Sonam Wangchuk: ಸೋನಮ್ ವಾಂಗ್ಚುಕ್ ವಿಶೇಷ ಮನೆ

ಇನ್ನು ಸೋನಮ್ ವಾಂಗ್ಚುಕ್ ಅವರ ಮನೆಯು ವಿಶೇಷವಾಗಿ ಹಾಗೂ ಪರಿಸರ ಸ್ನೇಹಿ ಅಂಶಗಳನ್ನು ಒಳಗೊಂಡಿದೆ. ಸೋನಮ್ ವಾಂಗ್‌ಚುಕ್ ಅವರ ಲಡಾಖ್‌ನ ಮನೆ ಪರಿಸರ ಸ್ನೇಹಿ ವಿನ್ಯಾಸದ ಕಾರಣಕ್ಕೆ ಖ್ಯಾತಿ ಪಡೆದುಕೊಂಡಿದೆ. ಮನೆಯ ಗೋಡೆಗಳನ್ನು ಸಿಮೆಂಟ್‌ನಿಂದ ನಿರ್ಮಿಸುವ ಬದಲು ಮಣ್ಣಿನಿಂದಲೇ ನಿರ್ಮಿಸಲಾಗಿದೆ. ಮರದ ಮೇಲ್ಛಾವಣಿ ನೈಸರ್ಗಿಕ ಉಷ್ಣ ನಿರೋಧಕವಾಗಿ ಕೆಲಸ ಮಾಡುತ್ತವೆ. ಅಲ್ಲದೆ ಚಳಿಗಾಲದಲ್ಲಿ ಸೂರ್ಯನ ಶಾಖವನ್ನು ಬಳಸಿಕೊಂಡು ಮನೆಯನ್ನು ಬೆಚ್ಚಗಿರಿಸುತ್ತದೆ. ಅಡುಗೆಮನೆಯ ವಿನ್ಯಾಸ ಸರಳವಾಗಿದ್ದು, ನೀರಿಲ್ಲದ ಶೌಚ ವ್ಯವಸ್ಥೆಯ ಮೂಲಕ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತನೆ ಮಾಡುವ ವ್ಯವಸ್ಥೆಯೂ ಸಹ ಇಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+