'ಸುಂದರ ಮಹಿಳೆ' ಎಂದ ಭಾರ್ತಿಗೆ ಹೆಂಡತಿ ಲಿಪಿಕಾ ತಿರುಗೇಟು

ನವದೆಹಲಿ, ಆ. 04: ನವದೆಹಲಿಯ ಮಾಜಿ ಸಚಿವ ಸೋಮನಾಥ್ ಭಾರ್ತಿ ಅವರ 'ಸುಂದರ ಮಹಿಳೆ' ಹೇಳಿಕೆ ವಿವಾದ ಧೂಳೆಬ್ಬಿಸಿದ್ದು ಅವರ ಪತ್ನಿ ಇದಕ್ಕೆ ತಿರುಗೇಟು ನೀಡಿದ್ದಾರೆ.

'ನಾನೇನು ರೂಪವತಿಯಲ್ಲ, ಸುಂದರಿಯಲ್ಲ ಹಾಗಾಗಿಯೇ ನನ್ನ ಮೇಲೆ ದೌರ್ಜನ್ಯವೆಸಗಿರಬಹುದು ಎಂದು ಹೇಳಿರುವ ಭಾರ್ತಿ ಪತ್ನಿ ಲಿಪಿಕಾ ಮಿತ್ರಾ ವ್ಯಂಗದ ಮೂಲಕ ತಕ್ಕ ಉತ್ತರವನ್ನೇ ನೀಡಿದ್ದಾರೆ.

Somnath Bharti's controversy: Bharti Wife Lipika boomerang

ಭಾರ್ತಿ ಅವರಿಗೆ ನನ್ನ ರಕ್ಷಣೆ ಬಗ್ಗೆ ಯೋಚನೆಯಿಲ್ಲ. ಆದರೆ, 'ಸುಂದರ ಮಹಿಳೆ'ಯರ ರಕ್ಷಣೆ ಚಿಂತೆ ಸದಾ ಕಾಡುತ್ತಿರುತ್ತದೆ. ಮಹಿಳೆಯರ ಭದ್ರತೆಯಲ್ಲಿಯೂ ಎರಡು ಬಗೆ ಇದೆ ಎಂಬುದು ನನಗೆ ಈಗಲೇ ತಿಳಿದಿದ್ದು ಎಂದು ಹೇಳಿದ್ದಾರೆ. ಸೋಮನಾಥ್ ಭಾರ್ತಿ ಅವರ ಮೇಲೆ ಅವರ ಹೆಂಡತಿ ಲಿಪಿಕಾ ದೆಹಲಿ ಮಹಿಳಾ ಆಯೋಗಕ್ಕೆ ಹಲ್ಲೆ, ಮಾನಸಿಕ ಹಿಂಸೆ ದೂರು ನೀಡಿದ್ದರು. ಆಯೋಗ ಭಾರ್ತಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗೆ ಹಾಜರಾಗಲು ತಿಳಿಸಿತ್ತು.

ದೆಹಲಿಯ ಪೊಲೀಸ್ ವ್ಯವಸ್ಥೆಯನ್ನು ಸರ್ಕಾರ ತನ್ನ ಸುಪರ್ದಿಗೆ ತೆಗೆದುಕೊಂಡರೆ, 'ಸುಂದರ ಮಹಿಳೆ'ಯರೂ (ಬ್ಯೂಟಿಫುಲ್ ವುಮೆನ್) ಮಧ್ಯರಾತ್ರಿ ನಂತರ ದಿಲ್ಲಿಯಲ್ಲಿ ಯಾವುದೇ ಭಯವಿಲ್ಲದೆ ಓಡಾಡಬಹುದು,' ಎಂದು ಹೇಳಿಕೆ ಭಾರ್ತಿ ಹೇಳಿಕೆ ನೀಡಿದ್ದರು. ಇದಕ್ಕೆ ಎಲ್ಲೆಡೆಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಮಹಿಳಾ ಪರ ಸಂಘಟನೆಗಳು ಪ್ರತಿಭಟನೆಯನ್ನು ನಡೆಸಿದ್ದವು.

ನಾನು ಹೇಳಿದ್ದು ಒಂದು, ನೀವು ಅರ್ಥ ಮಾಡಿಕೊಂಡಿರುವುದೇ ಒಂದು, ಆಭರಣಗಳನ್ನು ಧರಿಸಿಯೂ ನಿರ್ಭೀತಿಯಿಂದ ಓಡಾಡಲು ಸಾಧ್ಯಮಾಡಿಕೊಡಬೇಕು ಎಂದು ಹೇಳಿದ್ದೆ ಎಂದು ಭಾರ್ತಿ ಸ್ಪಷ್ಟನೆ ನೀಡಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+