ರಾಜಸ್ತಾನ ಸೋಲಾರ್ ಪಾರ್ಕ್ ನಲ್ಲಿ ಯೂನಿಟ್ ವಿದ್ಯುತ್ ಗೆ ಜಸ್ಟ್ ರು.2.62

ಸೌರ ವಿದ್ಯುತ್ ಉತ್ಪಾದನೆಯಲ್ಲಿ ಮಹತ್ವದ ಸಾಧನೆಯೊಂದು ಆಗಿದೆ. ಒಂದು ಯೂನಿಟ್ ವಿದ್ಯುತ್ ಉತ್ಪಾದನೆಗೆ ರಾಜಸ್ತಾನದ ಭದ್ಲಾದಲ್ಲಿ ಮೂರು ರುಪಾಯಿಗೂ ಕಡಿಮೆ ವೆಚ್ಚ ತಗುಲುತ್ತದೆ. ಈ ಸಾಧನೆ ಬಗ್ಗೆ ಸಚಿವ ಪಿಯೂಶ್ ಗೋಯಲ್ ಟ್ವೀಟ್ ಮಾಡಿದ್ದಾರೆ

ನವದೆಹಲಿ, ಮೇ 10: ಸೌರಶಕ್ತಿ ಮೂಲಕ ವಿದ್ಯುತ್ ಉತ್ಪಾದನೆ ಮತ್ತಷ್ಟು ಅಗ್ಗವಾಗಲಿದೆ. ರಾಜಸ್ತಾನದ ಭದ್ಲಾದಲ್ಲಿ 250 ಮೆಗವಾಟ್ ಸಾಮರ್ಥ್ಯದ ಸೌರವಿದ್ಯುತ್ ಕೇಂದ್ರ ಆರಂಭಿಸಿದ್ದು, ಯೂನಿಟ್ ಗೆ ರು. 2.75 ತಗುಲುತ್ತದೆ ಅಂದಾಜಿಸಲಾಗಿದೆ. ಕಲ್ಲಿದ್ದಲು ಮೂಲಕ ಉತ್ಪಾದನೆ ಆಗುವ ವಿದ್ಯುತ್ ಗಿಂತ ಇದು ತೀರಾ ಕಡಿಮೆ. ಎನ್ ಟಿಪಿಸಿ ಲಿಮಿಟೆಡ್ ಕಲ್ಲಿದ್ದಲು ಮೂಲಕ ಉತ್ಪಾದನೆ ಮಾಡುವ ವಿದ್ಯುತ್ ಯೂನಿಟ್ ಗೆ ರು. 3.20 ಆಗುತ್ತದೆ.

ಸರಕಾರಿ ಸ್ವಾಮ್ಯದ ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಫ್ ಇಂಡಿಯಾ (ಎಸ್ ಇಸಿಐ) 750 ಮೆಗಾವಾಟ್ ಸಾಮರ್ಥ್ಯದ ಸೌರವಿದ್ಯುತ್ ನ ಎರಡು ಪಾರ್ಕ್ ಗಳನ್ನು ನಡೆಸುತ್ತಿದ್ದು, ಈ ಪೈಕಿ 250 ಮೆಗವಾಟ್ ಗೆ ಅದಾನಿ ರಿನೀವಬಲ್ ಎನರ್ಜಿ ಪಾರ್ಕ್ ಪ್ರತಿ ಯೂನಿಟ್ ಗೆ ರು. 3.01 ಬಿಡ್ ದರ ನಿಗದಿ ಮಾಡಿದೆ.['ಒಂದು ವರ್ಷದಲ್ಲಿ ತುಮಕೂರು ಸೌರ ವಿದ್ಯುತ್ ಘಟಕ ಪೂರ್ಣ']

ಮೊದಲಿಗೆ ಯೂನಿಟ್ ಗೆ ರು. 3.01 ಬೇಸ್ ಪ್ರೈಸ್ ಸಾಧಿಸಿದ್ದೇವೆ. ಹದಿನಾಲ್ಕು ಬಿಡ್ಡರ್ಸ್ ನ 250 ಮೆಗವಾಟ್ ಸಾಮರ್ಥ್ಯಕ್ಕೆ ಅಂತಿಮಗೊಳಿಸಲಾಗಿದೆ. ಈಗಾಗಲೇ ಯೂನಿಟ್ ಗೆ ರು. 2.75ಕ್ಕಿಂತ ಕಡಿಮೆಗೆ ಬೆಲೆ ಬಂದಾಗಿದೆ. ಅಂತಿಮವಾಗಿ ಬೆಲೆ ಎಲ್ಲಿಗೆ ನಿಲ್ಲುತ್ತದೆ ಅಂತ ನೋಡಬೇಕು ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.[ಕಾವೇರಿ ನದಿ ಕಾಲುವೆಗಳ ಮೇಲೆ ಸೌರ ಫಲಕ ಸ್ಥಾಪನೆ]

Solar power tariff set to fall below Rs2.75 per unit in Rajasthan solar auction

ಈ ಮಧ್ಯೆ ಸಚಿವ ಪಿಯೂಶ್ ಗೋಯಲ್ ಈ ಬಗ್ಗೆ ಟ್ವೀಟ್ ಮಾಡಿದ್ದು, ನರೇಂದ್ರ ಮೋದಿ ಅವರ ಗುರಿಯೆಡೆಗೆ ಮತ್ತೊಂದು ಹೆಜ್ಜೆ ಇಟ್ಟಿದ್ದೇವೆ. ಭದ್ಲಾ ಸೋಲಾರ್ ಪಾರ್ಕ್ ನಲ್ಲಿ ಒಂದು ಯೂನಿಟ್ ವಿದ್ಯುತ್ ಉತ್ಪಾದನೆ ರು.2.62ಕ್ಕೆ ತಗುಲುತ್ತದೆ ಎಂದು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+