ಬೆಂಗಳೂರು, ಡಿಸೆಂಬರ್ 26: ಸೌರವ್ಯೂಹ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಬಹಳ ಅಪರೂಪಕ್ಕೆ ಎಂಬಂತೆ ಕಾಣುವ ಕಂಕಣ ಸೂರ್ಯಗ್ರಹಣ ಈಗಾಗಲೇ ಸಂಭವಿಸಿದೆ.
8:06 ಕ್ಕೆ ಸಂಭವಿಸಿದ ಕಂಕಣ ಸೂರ್ಯಗ್ರಹಣ ಚಾಲ್ತಿಯಲ್ಲಿದೆ. ಮಂಗಳೂರು, ಹುಬ್ಬಳ್ಳಿ, ಚಿತ್ರದುರ್ಗ, ಕರಾವಳಿ ಪ್ರದೇಶಗಳಲ್ಲಿ ಕಂಕಣ ಸೂರ್ಯಗ್ರಹಣದ ದರ್ಶನವಾಗಿದೆ.
ಅಪರೂಪಕ್ಕೊಮ್ಮೆ ಸಂಭವಿಸುವ ಈ ಕಂಕಂಣ ಸೂರ್ಯಗ್ರಹಣವನ್ನು ವೀಕ್ಷಿಸಲು ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವ್ಯವಸ್ಥೆಗಳನ್ನು ಮಾಡಲಾಗಿದೆ. ಸೋಲಾರ್ ಗಾಗಲ್ಸ್‌ಗಳು, ಟೆಲಿಸ್ಕೋಪ್‌ಗಳ ವ್ಯವಸ್ಥೆಗಳನ್ನು ಮಾಡಲಾಗಿದೆ.
ಬೆಳಿಗ್ಗೆ 8:6 ಕ್ಕೆ ಪ್ರಾರಂಭದ ಕಂಕಣ ಸೂರ್ಯಗ್ರಹಣ ಬೆಳಿಗ್ಗೆ 11.11 ಕ್ಕೆ ಮುಕ್ತಾಯಗೊಳ್ಳಲಿದೆ. ಬೆಳಿಗ್ಗೆ 9 ರ ಸುಮಾರು ಇದರ ಪೂರ್ಣ ದರ್ಶನವಾಗಲಿದೆ. ಇದೊಂದು ಕಂಕಣ ಸೂರ್ಯಗ್ರಹಣವಾಗಿದ್ದು, ಈ ರೀತಿಯ ಸೂರ್ಯಗ್ರಹಣ ಆಕಾಶದಲ್ಲಿ ಕಾಣುವುದು ಮುಂದೆ 2064 ನೇ ವರ್ಷದಲ್ಲಿ. ಈ ಸೂರ್ಯಗ್ರಹಣ ಭಾರತದಲ್ಲಿ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಕಾಣಿಸಿಕೊಳ್ಳಲಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಶೇ 90 ರಷ್ಟು ಕಂಡರೆ, ಉಳಿದ ಭಾಗದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಕಾಣಲಿದೆ.
Dec 26, 2019, 11:39 am IST
ಗ್ರಹಣ ನೋಡಲು ಉತ್ಸುಕರಾಗಿದ್ದ ನರೇಂದ್ರ ಮೋದಿ ಅವರಿಗೆ ಮೋಡಗಳು ನಿರಾಸೆ ಮೂಡಿಸಿವೆ. ಗ್ರಹಣದ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿರುವ ಮೋದಿ, ಎಲ್ಲ ಭಾರತೀಯರಂತೆ ನಾನೂ ಗ್ರಹಣ ನೋಡಲು ಉತ್ಸುಕನಾಗಿದ್ದೆ ಆದರೆ ಮೋಡಗಳ ಕಾರಣದಿಂದ ಗ್ರಹಣ ನೋಡಲಾಗಲಿಲ್ಲ. ಆದರೆ ಲೈವ್ ಸ್ಟ್ರೀಮಿಂಗ್ ಮೂಲಕ ದೇಶದ ಹಲವೆಡೆ ನಡೆದ ಗ್ರಹಣದ ಬಗ್ಗೆ ಮಾಹಿತಿ ಪಡೆದೆ. ಸೌರಕೌತುಕದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಕೆಲವು ಚಿತ್ರಗಳನ್ನೂ ಅಪ್‌ಲೋಡ್ ಮಾಡಿದ್ದಾರೆ.
Dec 26, 2019, 10:48 am IST
ಚಿತ್ರದುರ್ಗದ ಹಳ್ಳಿಗಳಲ್ಲಿ ಗ್ರಹಣ ದಿನದ ಸಂಪ್ರದಾಯವಾಗಿ, ತಟ್ಟೆಯ ಒಳಗೆ ನೀರು ಹಾಕಿ ಅದರಲ್ಲಿಯೇ ಒನಕೆಯನ್ನು ನೆಟ್ಟಗೆ ನಿಲ್ಲಿಸಲಾಗಿದೆ. ಗ್ರಹಣದ ದಿನ ಮಾತ್ರ ಹೀಗೆ ಒನಕೆಯು ತಟ್ಟೆ ಮೇಳೆ ನೆಟ್ಟಗೆ ನಿಲ್ಲುತ್ತದೆ ಎನ್ನಲಾಗುತ್ತದೆ. ಗ್ರಹಣ ಕಾಲ ಮುಗಿಯುತ್ತಿದ್ದಂತೆ ಒನಕೆ ಬೀಳುತ್ತದೆಯಂತೆ.
Dec 26, 2019, 10:34 am IST
ಚಿತ್ರದುರ್ಗದ ಮುರುಗ ಮಠದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮುರುಗ ಮಠದ ಶ್ರೀಗಳು 'ಮೂಢ ನಂಬಿಕೆಗಳನ್ನು ಮುರಿದು ಉತ್ತಮ ಆಚರಣೆಗಳನ್ನು ಆಚರಿಸೋಣ' ಎಂದರು. ಫಾದರ್ ರಾಜು, ಹರಗುರು ಚರಮೂರ್ತಿಗಳು ಇದ್ದರು. ವಿದ್ಯಾರ್ಥಿಗಳು ಗ್ರಹಣವನ್ನು ವೀಕ್ಷಿಸಿದರು. ಎಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸಿದರು.
Dec 26, 2019, 10:17 am IST
ಗ್ರಹಣದಿಂದ ಮಕ್ಕಳಿಗೆ ಕೇಡಾಗುತ್ತದೆ ಎಂಬ ನಂಬಿಕೆಯಿಂದ ಎಳೆಯ ಮಕ್ಕಳನ್ನು ತಿಪ್ಪೆಯಲ್ಲಿ ಹೂತ ಘಟನೆಗಳೂ ಸಹ ಕೆಲವು ರಾಜ್ಯದ ಕೆಲವು ಕಡೆಗಳಲ್ಲಿ ವರದಿ ಆಗಿವೆ.
Dec 26, 2019, 10:16 am IST
ಕಲಬುರಗಿಯಲ್ಲಿ ಗ್ರಹಣ ಮೂಡನಂಬಿಕೆಯಿಂದ ಮಕ್ಕಳನ್ನು ಕತ್ತಿನ ವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಗ್ರಹಣದ ದಿನ ಮಕ್ಕಳನ್ನು ಕತ್ತಿನವರೆಗೆ ಮಣ್ಣಿನಲ್ಲಿ ಹೂತಿಟ್ಟರೆ ಅಂಗವೈಕಲ್ಯ ದೂರವಾಗುತ್ತದೆ ಎಂಬ ಮೂಡನಂಬಿಕೆಯನ್ನು ಕಲುರಗಿಯಲ್ಲಿ ಕೆಲವರು ಅನುಸರಿಸಿದ್ದಾರೆ.
Dec 26, 2019, 10:05 am IST
ಕಲಬುರಗಿಯಲ್ಲಿ ಗ್ರಹಣ ಮೂಡನಂಬಿಕೆಯಿಂದ ಮಕ್ಕಳನ್ನು ಕತ್ತಿನ ವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಒಬ್ಬನೇ ಮಗನಿದ್ದರೆ ಗ್ರಹಣದ ದಿನ ಮಕ್ಕಳನ್ನು ಕತ್ತಿನವರೆಗೆ ಮಣ್ಣಿನಲ್ಲಿ ಹೂತಿಡಬೇಕು ಎಂಬ ಮೂಡನಂಬಿಕೆಯನ್ನು ಕಲುರಗಿಯಲ್ಲಿ ಕೆಲವರು ಅನುಸರಿಸಿದ್ದಾರೆ.
Dec 26, 2019, 9:59 am IST
ಮೂಡನಂಬಿಕೆ ವಿರೋಧಿ ಬಣ ಟೌನ್‌ಹಾಲ್ ಬಳಿ ಸೇರಿ ಸಾಮೂಹಿಕವಾಗಿ ತಿಂಡಿ ತಿಂದು ಸೂರ್ಯಗ್ರಹಣ ವೀಕ್ಷಿಸಿದ್ದಾರೆ.
Dec 26, 2019, 9:57 am IST
ಬೆಂಗಳೂರಿನಲ್ಲಿ ಅಲ್ಲಲಿ ಸೂರ್ಯ ಗ್ರಹಣ ಕಂಡು ಬಂದಿದೆ. ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಗ್ರಹಣ ಸರಿಯಾಗಿ ಗೋಚರವಾಗಿಲ್ಲ.
Dec 26, 2019, 9:51 am IST
ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳು ಗ್ರಹಣ ವೀಕ್ಷಿಸಿದರು. ಗ್ರಹಣದ ವೇಳೆ ತಿನ್ನಬಾರದೆಂಬ ಮೂಡನಂಭಿಕೆಯನ್ನು ಧಿಕ್ಕರಿಸಿ ಮಕ್ಕಳೆಲ್ಲರೂ ಬಿಸ್ಕತ್ತುಗಳನ್ನು ಗ್ರಹಣದ ಸಮಯದಲ್ಲಿ ಸೇವಿಸಿದರು.
Dec 26, 2019, 9:47 am IST
1962 ರಲ್ಲಿ ಇಂಥಹುದ್ದೇ ಗ್ರಹಣ ಸಂಭವಿಸಿತ್ತು. ಇಂದಿನ ನಂತರ ಮುಂದಿನ ಕಂಕಣ ಗ್ರಹಣ ಸಂಭವಿಸುವುದು 2069 ನೇ ವರ್ಷಕ್ಕೆ.
Dec 26, 2019, 9:39 am IST
ಬೆಂಗಳೂರಿನ ಶಾಲೆಯೊಂದು ಗ್ರಹಣ ಕಾರಣಕ್ಕೆ ಶಾಲೆಗೆ ರಜೆಯನ್ನೇ ನೀಡಿದೆ. ಆದರೆ ನಗರದ ಹಲವು ಶಾಲೆಗಳು ಮಕ್ಕಳು ಸೂರ್ಯ ಗ್ರಹಣ ನೋಡಲೆಂದು ವಿಶೇಷ ವ್ಯವಸ್ಥೆ ಮಾಡಿವೆ. ಸೋಲಾರ್ ಗ್ಲಾಸುಗಳನ್ನು ಮಕ್ಕಳಿಗೆ ನೀಡಿ ಸೂರ್ಯಗ್ರಹಣವನ್ನು ನೋಡುವಂತೆ ಮಾಡಿವೆ.
Dec 26, 2019, 9:28 am IST
ಗ್ರಹಣದ ಕಾರಣ ಇಂದು ಧರ್ಮಸ್ಥಳ, ಚಾಮುಂಡೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಮುಖ ದೇವಾಲಯಗಳು ಬಂದ್ ಆಗಿವೆ. ಗ್ರಹಣದ ಬಳಿಕ ದೇವಾಲಯಗಳು ತೆರೆಯಲಿದ್ದು ವಿಶೇಷ ಪೂಜೆ ನಡೆಯಲಿವೆ.
Dec 26, 2019, 9:10 am IST
ದುಬೈ ನಲ್ಲಿ ಸುಂದರ ದೃಶ್ಯಕಾವ್ಯ ಬರೆದ ಸೂರ್ಯಗ್ರಹಣ. ದುಬೈನಲ್ಲಿ ಸೂರ್ಯಗ್ರಹಣ ಪೂರ್ಣ ದರ್ಶನವಾಗಿದೆ.
2019ರ ವರ್ಷಾಂತ್ಯದಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಈ ಬಾರಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಗೋಚರಿಸಲಿದೆ. 26. 12. 2019 ಗುರುವಾರ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಧನಸ್ಸು ರಾಶಿ ಮೂಲಾ ನಕ್ಷತ್ರದಲ್ಲಿ ಗೋಚರಿಸುವುದು.
ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ರಣಜಿ ಕ್ರಿಕೆಟ್ ಪಂದ್ಯವನ್ನು ಸೂರ್ಯಗ್ರಹಣದ ಕಾರಣದಿಂದ ಮುಂದೂಡಲಾಗಿದೆ. 9 ಗಂಟೆಗೆ ಪ್ರಾರಂಭವಾಗಬೇಕಿದ್ದ ಇಂದಿನ ಆಟವನ್ನು 11 ಗಂಟೆ ನಂತರ ಪ್ರಾರಂಭ ಮಾಡಲಾಗುವುದು.
Dec 26, 2019, 8:52 am IST
ಒಡಿಸ್ಸಾದಲ್ಲಿ ಕಂಕಣ ಸೂರ್ಯ ಗ್ರಹಣ ಬಾನಿನಲ್ಲಿ ಚಿತ್ತಾರ ಮೂಡಿಸಿದೆ
ಚೆನ್ನೈ, ಕೊಚ್ಚಿ, ಅಸ್ಸಾಂ, ಕೇರಳದ ಹಲವು ಭಾಗ, ಶ್ರೀಲಂಕಾ ಮುಂತಾದೆಡೆ ಗ್ರಹಣ ಗೋಚರವಾಗುತ್ತಿದೆ.
Dec 26, 2019, 8:47 am IST
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗುತ್ತಿದೆ. ಚಿತ್ರದುರ್ಗ, ಹುಬ್ಬಳ್ಳಿ, ಕರಾವಳಿ ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಕಾರಣ ಗ್ರಹಣ ಗೋಚರವಾಗುತ್ತಿಲ್ಲ.
Dec 26, 2019, 8:45 am IST
ಭೂಮಿ ಶಿಶಿರ ಸೂರ್ಯ ನಡುವಿನ ಆಟದಲ್ಲಿ ಗೆದ್ದ ಮೇಘ, ಬೆಂಗಳೂರಲ್ಲಿ ಮೋಡ ಮುಸುಕಿ ಗ್ರಹಣ ದರ್ಶನ ಭಾಗ್ಯ ಇಲ್ಲ.
8:45 AM, 26 Dec
ಭೂಮಿ ಶಿಶಿರ ಸೂರ್ಯ ನಡುವಿನ ಆಟದಲ್ಲಿ ಗೆದ್ದ ಮೇಘ, ಬೆಂಗಳೂರಲ್ಲಿ ಮೋಡ ಮುಸುಕಿ ಗ್ರಹಣ ದರ್ಶನ ಭಾಗ್ಯ ಇಲ್ಲ.
8:47 AM, 26 Dec
ರಾಜ್ಯದ ಹಲವು ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗುತ್ತಿದೆ. ಚಿತ್ರದುರ್ಗ, ಹುಬ್ಬಳ್ಳಿ, ಕರಾವಳಿ ಜಿಲ್ಲೆಗಳಲ್ಲಿ ಗ್ರಹಣ ಗೋಚರವಾಗುತ್ತಿದೆ. ಬೆಂಗಳೂರಿನಲ್ಲಿ ಮೋಡ ಮುಸುಕಿದ ವಾತಾವರಣ ಇರುವ ಕಾರಣ ಗ್ರಹಣ ಗೋಚರವಾಗುತ್ತಿಲ್ಲ.
8:47 AM, 26 Dec
ಚೆನ್ನೈ, ಕೊಚ್ಚಿ, ಅಸ್ಸಾಂ, ಕೇರಳದ ಹಲವು ಭಾಗ, ಶ್ರೀಲಂಕಾ ಮುಂತಾದೆಡೆ ಗ್ರಹಣ ಗೋಚರವಾಗುತ್ತಿದೆ.
8:52 AM, 26 Dec
ಒಡಿಸ್ಸಾದಲ್ಲಿ ಕಂಕಣ ಸೂರ್ಯ ಗ್ರಹಣ ಬಾನಿನಲ್ಲಿ ಚಿತ್ತಾರ ಮೂಡಿಸಿದೆ
ಮೈಸೂರಿನಲ್ಲಿ ನಡೆಯುತ್ತಿರುವ ಕರ್ನಾಟಕ ಮತ್ತು ಹಿಮಾಚಲ ಪ್ರದೇಶದ ರಣಜಿ ಕ್ರಿಕೆಟ್ ಪಂದ್ಯವನ್ನು ಸೂರ್ಯಗ್ರಹಣದ ಕಾರಣದಿಂದ ಮುಂದೂಡಲಾಗಿದೆ. 9 ಗಂಟೆಗೆ ಪ್ರಾರಂಭವಾಗಬೇಕಿದ್ದ ಇಂದಿನ ಆಟವನ್ನು 11 ಗಂಟೆ ನಂತರ ಪ್ರಾರಂಭ ಮಾಡಲಾಗುವುದು.
8:58 AM, 26 Dec
ಕೇರಳದಲ್ಲಿ ಸೂರ್ಯಗ್ರಹಣದ ದೃಶ್ಯ. ಕೇರಳದ ಹಲವು ಭಾಗಗಳಲ್ಲಿ ಗ್ರಹಣದ ದರ್ಶನವಾಗಿದೆ.
2019ರ ವರ್ಷಾಂತ್ಯದಲ್ಲಿ ಸಂಭವಿಸಲಿರುವ ಸೂರ್ಯಗ್ರಹಣ ಈ ಬಾರಿ ಭಾರತದಲ್ಲಿ ಅದರಲ್ಲೂ ಕರ್ನಾಟಕದಲ್ಲಿ ಗೋಚರಿಸಲಿದೆ. 26. 12. 2019 ಗುರುವಾರ ದಿನದಂದು ಖಂಡಗ್ರಾಸ ಸೂರ್ಯಗ್ರಹಣ ಧನಸ್ಸು ರಾಶಿ ಮೂಲಾ ನಕ್ಷತ್ರದಲ್ಲಿ ಗೋಚರಿಸುವುದು.
ಗ್ರಹಣದ ಕಾರಣ ಇಂದು ಧರ್ಮಸ್ಥಳ, ಚಾಮುಂಡೇಶ್ವರಿ, ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಹಲವು ಪ್ರಮುಖ ದೇವಾಲಯಗಳು ಬಂದ್ ಆಗಿವೆ. ಗ್ರಹಣದ ಬಳಿಕ ದೇವಾಲಯಗಳು ತೆರೆಯಲಿದ್ದು ವಿಶೇಷ ಪೂಜೆ ನಡೆಯಲಿವೆ.
9:39 AM, 26 Dec
ಬೆಂಗಳೂರಿನ ಶಾಲೆಯೊಂದು ಗ್ರಹಣ ಕಾರಣಕ್ಕೆ ಶಾಲೆಗೆ ರಜೆಯನ್ನೇ ನೀಡಿದೆ. ಆದರೆ ನಗರದ ಹಲವು ಶಾಲೆಗಳು ಮಕ್ಕಳು ಸೂರ್ಯ ಗ್ರಹಣ ನೋಡಲೆಂದು ವಿಶೇಷ ವ್ಯವಸ್ಥೆ ಮಾಡಿವೆ. ಸೋಲಾರ್ ಗ್ಲಾಸುಗಳನ್ನು ಮಕ್ಕಳಿಗೆ ನೀಡಿ ಸೂರ್ಯಗ್ರಹಣವನ್ನು ನೋಡುವಂತೆ ಮಾಡಿವೆ.
9:47 AM, 26 Dec
1962 ರಲ್ಲಿ ಇಂಥಹುದ್ದೇ ಗ್ರಹಣ ಸಂಭವಿಸಿತ್ತು. ಇಂದಿನ ನಂತರ ಮುಂದಿನ ಕಂಕಣ ಗ್ರಹಣ ಸಂಭವಿಸುವುದು 2069 ನೇ ವರ್ಷಕ್ಕೆ.
9:51 AM, 26 Dec
ದೊಡ್ಡಬಳ್ಳಾಪುರದ ಸ್ವಾಮಿ ವಿವೇಕಾನಂದ ಕನ್ನಡ ಶಾಲೆಯ ಮಕ್ಕಳು ಗ್ರಹಣ ವೀಕ್ಷಿಸಿದರು. ಗ್ರಹಣದ ವೇಳೆ ತಿನ್ನಬಾರದೆಂಬ ಮೂಡನಂಭಿಕೆಯನ್ನು ಧಿಕ್ಕರಿಸಿ ಮಕ್ಕಳೆಲ್ಲರೂ ಬಿಸ್ಕತ್ತುಗಳನ್ನು ಗ್ರಹಣದ ಸಮಯದಲ್ಲಿ ಸೇವಿಸಿದರು.
9:57 AM, 26 Dec
ಬೆಂಗಳೂರಿನಲ್ಲಿ ಅಲ್ಲಲಿ ಸೂರ್ಯ ಗ್ರಹಣ ಕಂಡು ಬಂದಿದೆ. ಮೋಡ ಮುಸುಕಿದ ವಾತಾವರಣ ಇದ್ದ ಕಾರಣ ಗ್ರಹಣ ಸರಿಯಾಗಿ ಗೋಚರವಾಗಿಲ್ಲ.
9:59 AM, 26 Dec
ಮೂಡನಂಬಿಕೆ ವಿರೋಧಿ ಬಣ ಟೌನ್‌ಹಾಲ್ ಬಳಿ ಸೇರಿ ಸಾಮೂಹಿಕವಾಗಿ ತಿಂಡಿ ತಿಂದು ಸೂರ್ಯಗ್ರಹಣ ವೀಕ್ಷಿಸಿದ್ದಾರೆ.
10:05 AM, 26 Dec
ಕಲಬುರಗಿಯಲ್ಲಿ ಗ್ರಹಣ ಮೂಡನಂಬಿಕೆಯಿಂದ ಮಕ್ಕಳನ್ನು ಕತ್ತಿನ ವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಒಬ್ಬನೇ ಮಗನಿದ್ದರೆ ಗ್ರಹಣದ ದಿನ ಮಕ್ಕಳನ್ನು ಕತ್ತಿನವರೆಗೆ ಮಣ್ಣಿನಲ್ಲಿ ಹೂತಿಡಬೇಕು ಎಂಬ ಮೂಡನಂಬಿಕೆಯನ್ನು ಕಲುರಗಿಯಲ್ಲಿ ಕೆಲವರು ಅನುಸರಿಸಿದ್ದಾರೆ.
10:16 AM, 26 Dec
ಕಲಬುರಗಿಯಲ್ಲಿ ಗ್ರಹಣ ಮೂಡನಂಬಿಕೆಯಿಂದ ಮಕ್ಕಳನ್ನು ಕತ್ತಿನ ವರೆಗೆ ಮಣ್ಣಿನಲ್ಲಿ ಹೂತಿಡಲಾಗಿದೆ. ಗ್ರಹಣದ ದಿನ ಮಕ್ಕಳನ್ನು ಕತ್ತಿನವರೆಗೆ ಮಣ್ಣಿನಲ್ಲಿ ಹೂತಿಟ್ಟರೆ ಅಂಗವೈಕಲ್ಯ ದೂರವಾಗುತ್ತದೆ ಎಂಬ ಮೂಡನಂಬಿಕೆಯನ್ನು ಕಲುರಗಿಯಲ್ಲಿ ಕೆಲವರು ಅನುಸರಿಸಿದ್ದಾರೆ.
10:17 AM, 26 Dec
ಗ್ರಹಣದಿಂದ ಮಕ್ಕಳಿಗೆ ಕೇಡಾಗುತ್ತದೆ ಎಂಬ ನಂಬಿಕೆಯಿಂದ ಎಳೆಯ ಮಕ್ಕಳನ್ನು ತಿಪ್ಪೆಯಲ್ಲಿ ಹೂತ ಘಟನೆಗಳೂ ಸಹ ಕೆಲವು ರಾಜ್ಯದ ಕೆಲವು ಕಡೆಗಳಲ್ಲಿ ವರದಿ ಆಗಿವೆ.
10:34 AM, 26 Dec
ಚಿತ್ರದುರ್ಗದ ಮುರುಗ ಮಠದ ಆವರಣದಲ್ಲಿ ಸೂರ್ಯಗ್ರಹಣ ವೀಕ್ಷಣೆ ಹಾಗೂ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಮುರುಗ ಮಠದ ಶ್ರೀಗಳು 'ಮೂಢ ನಂಬಿಕೆಗಳನ್ನು ಮುರಿದು ಉತ್ತಮ ಆಚರಣೆಗಳನ್ನು ಆಚರಿಸೋಣ' ಎಂದರು. ಫಾದರ್ ರಾಜು, ಹರಗುರು ಚರಮೂರ್ತಿಗಳು ಇದ್ದರು. ವಿದ್ಯಾರ್ಥಿಗಳು ಗ್ರಹಣವನ್ನು ವೀಕ್ಷಿಸಿದರು. ಎಲ್ಲರೂ ಒಟ್ಟಾಗಿ ಪ್ರಸಾದ ಸ್ವೀಕರಿಸಿದರು.
10:48 AM, 26 Dec
ಚಿತ್ರದುರ್ಗದ ಹಳ್ಳಿಗಳಲ್ಲಿ ಗ್ರಹಣ ದಿನದ ಸಂಪ್ರದಾಯವಾಗಿ, ತಟ್ಟೆಯ ಒಳಗೆ ನೀರು ಹಾಕಿ ಅದರಲ್ಲಿಯೇ ಒನಕೆಯನ್ನು ನೆಟ್ಟಗೆ ನಿಲ್ಲಿಸಲಾಗಿದೆ. ಗ್ರಹಣದ ದಿನ ಮಾತ್ರ ಹೀಗೆ ಒನಕೆಯು ತಟ್ಟೆ ಮೇಳೆ ನೆಟ್ಟಗೆ ನಿಲ್ಲುತ್ತದೆ ಎನ್ನಲಾಗುತ್ತದೆ. ಗ್ರಹಣ ಕಾಲ ಮುಗಿಯುತ್ತಿದ್ದಂತೆ ಒನಕೆ ಬೀಳುತ್ತದೆಯಂತೆ.
11:39 AM, 26 Dec
ಗ್ರಹಣ ನೋಡಲು ಉತ್ಸುಕರಾಗಿದ್ದ ನರೇಂದ್ರ ಮೋದಿ ಅವರಿಗೆ ಮೋಡಗಳು ನಿರಾಸೆ ಮೂಡಿಸಿವೆ. ಗ್ರಹಣದ ಬಗ್ಗೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿರುವ ಮೋದಿ, ಎಲ್ಲ ಭಾರತೀಯರಂತೆ ನಾನೂ ಗ್ರಹಣ ನೋಡಲು ಉತ್ಸುಕನಾಗಿದ್ದೆ ಆದರೆ ಮೋಡಗಳ ಕಾರಣದಿಂದ ಗ್ರಹಣ ನೋಡಲಾಗಲಿಲ್ಲ. ಆದರೆ ಲೈವ್ ಸ್ಟ್ರೀಮಿಂಗ್ ಮೂಲಕ ದೇಶದ ಹಲವೆಡೆ ನಡೆದ ಗ್ರಹಣದ ಬಗ್ಗೆ ಮಾಹಿತಿ ಪಡೆದೆ. ಸೌರಕೌತುಕದ ಬಗ್ಗೆ ತಜ್ಞರಿಂದ ಮಾಹಿತಿ ಪಡೆದುಕೊಂಡೆ ಎಂದು ಬರೆದುಕೊಂಡಿದ್ದಾರೆ. ಕೆಲವು ಚಿತ್ರಗಳನ್ನೂ ಅಪ್‌ಲೋಡ್ ಮಾಡಿದ್ದಾರೆ.
The annular solar eclipse, the last one of 2019, has begun. The last solar eclipse of 2019 took over the skies around 8 am Thursday morning. The December 26 solar eclipse will be visible most prominently from South India.