ಸಾಮಾಜಿಕ ಮಾಧ್ಯಮ ಟೂಲ್‌ಕಿಟ್ ಪ್ರಕರಣ: ಜಾಮೀನು ಷರತ್ತನ್ನು ಮಾರ್ಪಡಿಸುವಂತೆ ದಿಶಾ ರವಿ ಒತ್ತಾಯ

ನವದೆಹಲಿ, ಆಗಸ್ಟ್ 21: 2021 ರಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸುವ ಟೂಲ್‌ಕಿಟ್ ಅನ್ನು ಹಂಚಿಕೊಳ್ಳುವಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಪ್ರಕರಣ ಎದುರಿಸುತ್ತಿರುವ ಹವಾಮಾನ ಕಾರ್ಯಕರ್ತೆ ದಿಶಾ ರವಿ, ವಿದೇಶಕ್ಕೆ ಪ್ರಯಾಣಿಸುವ ಮೊದಲು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಪಡೆಯುವ ಜಾಮೀನು ಷರತ್ತನ್ನು ಮಾರ್ಪಡಿಸುವಂತೆ ಸೋಮವಾರ ದೆಹಲಿ ಹೈಕೋರ್ಟ್‌ಗೆ ಒತ್ತಾಯಿಸಿದ್ದಾರೆ.

ಈ ಅರ್ಜಿಯು ನ್ಯಾಯಮೂರ್ತಿ ಸ್ವರಣಾ ಕಾಂತ ಶರ್ಮಾ ಅವರ ಮುಂದೆ ವಿಚಾರಣೆಗೆ ಬಂದಿತು, ಅವರು ರವಿ ಮತ್ತು ಪೊಲೀಸ್ ಪರ ವಕೀಲರ ಸಲ್ಲಿಕೆಗಳನ್ನು ಆಲಿಸಿದ ನಂತರ, ಸಂಜೆ ಆದೇಶವನ್ನು ಹೊರಡಿಸಲಾಗುವುದು ಎಂದು ಹೇಳಿದರು.

Social media toolkit case: Disha Ravi seeks modification of bail condition

ಕೇಂದ್ರದ ಮೂರು ಕೃಷಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್‌ಕಿಟ್ ಅನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಕ್ಕಾಗಿ ಫೆಬ್ರವರಿ 13, 2021 ರಂದು ರವಿ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಇಲ್ಲಿನ ವಿಚಾರಣಾ ನ್ಯಾಯಾಲಯದಿಂದ ಫೆಬ್ರವರಿ 23, 2021 ರಂದು ಜಾಮೀನು ನೀಡಲಾಯಿತು.

ಜಾಮೀನು ನೀಡುವಾಗ ವಿಚಾರಣಾ ನ್ಯಾಯಾಲಯ ಆಕೆಗೆ ಹಲವು ಷರತ್ತುಗಳನ್ನು ವಿಧಿಸಿದ್ದು, ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ದೇಶ ತೊರೆಯುವಂತಿಲ್ಲ ಎಂದು ಹೇಳಿದೆ. ಆದರೆ ಈಗ ರವಿ ಅವರು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ, ವಿದೇಶಕ್ಕೆ ಪ್ರಯಾಣಿಸಲು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ತೆಗೆದುಕೊಳ್ಳಬೇಕು ಎಂಬ ಜಾಮೀನು ಷರತ್ತನ್ನು ಮಾರ್ಪಡಿಸುವಂತೆ ಕೋರಿದ್ದಾರೆ.

ವಿದೇಶಕ್ಕೆ ತೆರಳುವ ಮೊದಲು ವಿಚಾರಣಾ ನ್ಯಾಯಾಲಯಕ್ಕೆ ತಿಳಿಸುವ ಮಟ್ಟಿಗೆ ಷರತ್ತನ್ನು ಮಾರ್ಪಡಿಸುವಂತೆ ಆಕೆಯ ವಕೀಲರು ಹೈಕೋರ್ಟ್‌ಗೆ ಒತ್ತಾಯಿಸಿದರು. "ನಾನು ಆಗಾಗ್ಗೆ ಮತ್ತು ಸಣ್ಣ ನೋಟೀಸ್‌ನಲ್ಲಿ ವಿದೇಶಕ್ಕೆ ಪ್ರಯಾಣಿಸಬೇಕಾಗಿದೆ. ಜಾಮೀನು ಆದೇಶವನ್ನು ಜಾರಿಗೊಳಿಸಿದ ನಂತರ ನಾನು ಈಗಾಗಲೇ ಮೂರು ಬಾರಿ ವಿದೇಶಕ್ಕೆ ಪ್ರಯಾಣಿಸಿದ್ದೇನೆ. ನನ್ನ ವಿರುದ್ಧ LOC ಸಹ ಹೊರಡಿಸಲಾಗಿದೆ, ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ತೆಗೆದುಕೊಳ್ಳುವ ಜಾಮೀನು ಷರತ್ತು ನನಗೆ ಅನಾನುಕೂಲತೆಯನ್ನು ಉಂಟುಮಾಡುತ್ತಿದೆ. ನಾನು ಯಾವುದೇ ಜಾಮೀನು ಷರತ್ತುಗಳನ್ನು ಉಲ್ಲಂಘಿಸಿಲ್ಲ'' ಎಂದು ರವಿ ಪರ ವಕೀಲರು ಆಕೆಯ ಪರವಾಗಿ ವಾದ ಮಂಡಿಸಿದರು.

ಆದರೆ, ರಾಜ್ಯದ ಪರ ವಕೀಲರು ಮನವಿಯನ್ನು ವಿರೋಧಿಸಿದರು, ಕೇವಲ ಪರಿಸ್ಥಿತಿಯು ಆಕೆಗೆ ಅನಾನುಕೂಲವಾಗಿದೆ ಎಂದು ಕಂಡುಬಂದರೆ, ಇದು ಮಾರ್ಪಾಡು ಮಾಡಲು ಕಾರಣವಾಗುವುದಿಲ್ಲ ಎಂದು ಹೇಳಿದರು. ಜಾಮೀನು ಷರತ್ತನ್ನು ಮಾರ್ಪಡಿಸುವ ತನ್ನ ಮನವಿಯನ್ನು ವಜಾಗೊಳಿಸಿರುವ ವಿಚಾರಣಾ ನ್ಯಾಯಾಲಯದ ಆಗಸ್ಟ್ 9 ರ ಆದೇಶವನ್ನು ರವಿ ಪ್ರಶ್ನಿಸಿದ್ದಾರೆ.

ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರು, "ತನಿಖೆ ನಡೆಸುತ್ತಿರುವ ಅಪರಾಧಗಳು ಹಲವಾರು ವಿದೇಶಗಳಲ್ಲಿ ನೆಲೆಸಿರುವ ಶಂಕಿತ ವ್ಯಕ್ತಿಗಳನ್ನು ಒಳಗೊಂಡಿವೆ ಎಂದು ತನಿಖಾ ಸಂಸ್ಥೆ ವಿವರಿಸಿದೆ. ತನಿಖಾ ಸಂಸ್ಥೆಯು ಈ ಶಂಕಿತರಿಗೆ ಸಂಬಂಧಿಸಿದಂತೆ ಸಂಬಂಧಿತ ಏಜೆನ್ಸಿಗಳಿಂದ ಮತ್ತು ಮಧ್ಯವರ್ತಿಗಳಿಂದ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸುವ ಪ್ರಕ್ರಿಯೆಯಲ್ಲಿದೆ. ಆದ್ದರಿಂದ ಈ ಹಂತದಲ್ಲಿ ಷರತ್ತಿನ ಮಾರ್ಪಾಡು (ಕೋರುವಂತೆ) ತನಿಖೆಗೆ ಹಾನಿಕರ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ" ಎಂದು ಹೇಳಿದರು. ರವಿಯನ್ನು ದೆಹಲಿ ಪೊಲೀಸರ ಸೈಬರ್ ಸೆಲ್ ತಂಡವು ಫೆಬ್ರವರಿ 13, 2021 ರಂದು ಬೆಂಗಳೂರಿನಲ್ಲಿ ಬಂಧಿಸಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+