ಹಿಂದು ಪಾಕಿಸ್ತಾನ, ಮುಸ್ಲಿಂ ಪಾಕಿಸ್ತಾನ: ಟ್ವಿಟ್ಟರ್ ಗಲಾಟೆ ನೋಡಿ!
ನವದೆಹಲಿ, ಜುಲೈ 12: 'ಮುಂಬರುವ 2019 ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಅದು ಭಾರತವನ್ನು 'ಹಿಂದು ಪಾಕಿಸ್ತಾನ'ವನ್ನಾಗಿ ಮಾಡಲಿದೆ' ಎಂಬ ಕಾಂಗ್ರೆಸ್ ಮುಖಂಡ ಶಶಿ ತರೂರ್ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
'ಹಾಗಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಸ್ಲಿಂ ಪಾಕಿಸ್ತಾನವನ್ನು ನಿರ್ಮಾಣ ಮಾಡುತ್ತದೆಯೇ?' ಎಂದು ಟ್ವಿಟ್ಟಿಗರು ಪ್ರಶ್ನಿಸಿದ್ದಾರೆ!
ಕೇರಳದ ತಿರುವನಂತಪುರಂನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಶಶಿ ತರೂರ್, 'ಬಿಜೆಪಿ ಗೆದ್ದರೆ ಅದೇ ಹೊಸ ಸಂವಿಧಾನ ಬರೆಯುತ್ತದೆ. ಪಾಕಿಸ್ತಾನದಂತೆ ಇಲ್ಲೂ ಅಲ್ಪಸಂಖ್ಯಾತರಿಗೆ ಬೆಲೆ ಇಲ್ಲದಂತಾಗುತ್ತದೆ. ಹಿಂದು ರಾಷ್ಟ್ರ ಎಂಬ ಪರಿಕಲ್ಪನೆಯೇ ಅಲ್ಪಸಂಖ್ಯಾತರಿಂದ ಸಮಾನತೆಯನ್ನು ಕಿತ್ತುಕೊಂಡಿದೆ. ಇದರಿಂದ ಹಿಂದು ಪಾಕಿಸ್ತಾನ ನಿರ್ಮಾಣವಾಗುತ್ತದೆ' ಎಂದು ಹೇಳಿದ್ದರು.
ಅವರ ಹೇಳಿಕೆಯನ್ನು ಕಾಂಗ್ರೆಸ್ಸಿನ ಕೆಲ ನಾಯಕರು ಸಮರ್ಥಿಸಿಕೊಂಡಿದ್ದರೆ, ಮತ್ತಷ್ಟು ಜನ ವಿರೋಧಿಸಿದ್ದಾರೆ.
|
ಕಾಂಗ್ರೆಸ್ ಬಂದರೆ ಮುಸ್ಲಿಂ ಪಾಕಿಸ್ತಾನ
ಅಕಸ್ಮಾತ್ ನಮ್ಮ ದುರದೃಷ್ಟಕ್ಕೆ 2019 ಕಾಂಗ್ರೆಸ್ ಏನಾದರೂ ಅಧಿಕಾರಕ್ಕೆ ಬಂದರೆ ಅದು ಮತ್ತೊಂದು ಮುಸ್ಲಿಂ ಪಾಕಿಸ್ತಾನವನ್ನು ನಿರ್ಮಿಸಲು ತೊಡಗುತ್ತದೆ. ಇದನ್ನು ಅರಿಯಲು ಹಿಂದುಗಳಿಗೀಗ ಸಮಯ ಬಂದಿದೆ ಎಂದಿದ್ದಾರೆ ಶೆಫಾಲಿ ವೈದ್ಯ.
|
ಕಾಂಗ್ರೆಸ್ಸು ಹಿಂದುಗಳನ್ನು ಉಗ್ರರು ಎನ್ನುತ್ತಿದೆ!
'ಹಿಂದು ಮತ್ತು ಕೇಸರಿ ಭಯೋತ್ಪಾದನೆ ಎಂಬ ಹೇಳಿಕೆ ನಂತರ ಇದೀಗ ಕಾಂಗ್ರೆಸ್ ಹಿಂದು ಪಾಕಿಸ್ತಾನ ಎಂಬ ಪದವನ್ನು ಬಳಕೆ ಮಾಡುತ್ತಿದೆ. ಹಿಂದುಗಳನ್ನು ಉಗ್ರರು ಮತ್ತು ಪ್ರತ್ಯೇಕತಾವಾದಿಗಳು ಎನ್ನುವ ಕಾಂಗ್ರೆಸ್ಸಿಗರು ನಿಜವಾದ ಉಗ್ರರು ಮತ್ತು ನಕ್ಸಲರನ್ನು ಕ್ಷಮಿಸುತ್ತಿರುವುದೇಕೆ?' ಎಂದು ಡೇವಿಡ್ ಫ್ರಾಲಿ ಪ್ರಶ್ನಿಸಿದ್ದಾರೆ.
|
1947 ರಲ್ಲಿ ದೊಡ್ಡ ಪಾಕಿಸ್ತಾನವನ್ನು ಸೃಷ್ಟಿಸಿದ್ದು ಯಾರು?
'ಹಿಂದು ಭಯೋತ್ಪಾದನೆ, ಕೇಸರಿ ಭಯೋತ್ಪಾದನೆ, ಭಗ್ವಾ ಆತಂಕವಾದ್... ಇದೀಗ ಹಿಂದು ಪಾಕಿಸ್ತಾನ್! 1947 ರಲ್ಲಿ ಯಾರು ದೊಡ್ಡ ಪಾಕಿಸ್ತಾನವನ್ನು ಸೃಷ್ಟಿಸಿದ್ದರೋ, ಭಾರತದಲ್ಲಿ ಸಾವಿರಕ್ಕೂ ಹೆಚ್ಚು ಮಿನಿ ಪಾಕಿಸ್ತಾನಗಳನ್ನು ಸೃಷ್ಟಿಸಿದ್ದಾರೋ ಅವರಿಗೆ ಹಿಂದು ಪಾಕಿಸ್ತಾನದಿಂದ ಭಯವಂತೆ!' ಎಂದಿದ್ದಾರೆ ಸಂಸದೆ ಶೋಭಾ ಕರಂದ್ಲಾಜೆ.
|
ಬಾಲಿಶ ಹೇಳಿಕೆ
'ಸಂಸದರೊಬ್ಬರು ನೀಡಿದ ಅತ್ಯಂತ ಬಾಲಿಶ ಹೇಳಿಕೆ ಇದು. ಒಬ್ಬ 'ಬುದ್ಧಿಜೀವಿ' ಎಂದು ಕರೆಸಿಕೊಂಡವರು ಆಡುವ ಮಾತಲ್ಲ. ಅವರಿಗೆ ನಮ್ಮ ಸಂವಿಧಾನದ ಬಗ್ಗೆ ತಿಳಿದಿರಬೇಕಿತ್ತು. ನಮ್ಮ ಸಂವಿಧಾನದ ನಿಯಮವನ್ನು ಕಾಪಾಡುತ್ತೇವೆ ಎಂದು ಸಂಸದರು ಪ್ರಮಾಣ ಮಾಡಿರುತ್ತಾರೆ!' ಎಂದಿದ್ದಾರೆ ಮೋಹನ್ ದಾಸ್ ಪೈ.
|
ಕಾಂಗ್ರೆಸ್ಸಿಗರ ಮನಸ್ಥಿತಿಗೆ ಸಾಕ್ಷಿ
ಈ ಹೇಳಿಕೆ ಸಮಕಾಲೀನ ಕಾಂಗ್ರೆಸ್ ಮನಸ್ಥಿತಿಯನ್ನು ತೋರಿಸಿಕೊಡುತ್ತದೆ. ಹಿಂದುಗಳಿಗೆ ಮಾಡಿದ ಅವಮಾನ. ಹಿಂದು ಭಯೋತ್ಪಾದನೆ ಎಂಬ ಮಾತಿನದೇ ಮುಂದಿನ ಭಾಗ ಇದು ಎಂದಿದ್ದಾರೆ ಪ್ರೊ. ರಾಕೇಶ್ ಸಿನ್ಹಾ.
|
ಕಾಂಗ್ರೆಸ್ ಬಂದ್ರೆ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇಂಡಿಯಾ
ಬಿಜೆಪಿ ಅಧಿಕಾರಕ್ಕೆ ಬಂದರೆ ಭಾರತ ಹಿಂದು ಪಾಕಿಸ್ತಾನವಾಗುತ್ತದೆ ಎಂದಿದ್ದಾರೆ, ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತವು 'ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇಂಡಿಯಾ' ಆಗುತ್ತದೆ ಎಂದು ಹೇಳಿಲ್ಲ ಎಂದಿದ್ದಾರೆ ರಿಷಿ ಬ್ಯಾಗ್ರಿ.
-
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Gold Rings: ಅಕ್ಷಯ ತೃತೀಯಕ್ಕೆ ಖರೀದಿಸಬಹುದಾದ ಆಕರ್ಷಕ ವಿನ್ಯಾಸದ 5 ಚಿನ್ನದ ಉಂಗುರಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
Gold Price Drop: ವಾರದ ಮೊದಲ ದಿನವೇ ಚಿನ್ನ-ಬೆಳ್ಳಿ ದರ ಭರ್ಜರಿ ಕುಸಿತ, ಇಂದಿನ ದರಪಟ್ಟಿ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ -
E-Khata: ಜನ ಸೇವಕ ಯೋಜನೆ: ಮನೆಯಲ್ಲೇ ಕುಳಿತು ಇ - ಖಾತಾ ಪಡೆಯಿರಿ, ಈ 5 ದಾಖಲೆಗಳಿದ್ದರೆ ಸಾಕು -
ಬ್ರೋ.. ಒಂದು ವಿಕೆಟ್ ಕಿತ್ತರೂ ನನ್ನ ಫೋಟೋ ಹಾಕಿಲ್ಲ ಯಾಕೆ?; ಆರ್ಸಿಬಿ ಮೆಂಟರ್ ಡಿಕೆಗೆ ಕೃನಾಲ್ ಪಾಂಡ್ಯ ಪ್ರಶ್ನೆ












Click it and Unblock the Notifications