ಚಂದ್ರಯಾನ ಲ್ಯಾಂಡರ್ & ತಿರುಪತಿ ತಿಮ್ಮಪ್ಪನ ಕಿರೀಟ ಸೇಮ್ ಟು ಸೇಮ್?
ಭಾರತೀಯರಿಗೆ ಇಂದು ಹಾಲು ಕುಡಿದಷ್ಟೇ ಸಂತೋಷ, ಸಂಭ್ರಮ. ಚಂದ್ರನ ಮೇಲೆ ತನ್ನ ಲ್ಯಾಂಡರ್ ಇಳಿಸಿದ ಭಾರತದ ಸಾಧನೆಗೆ ಜಗತ್ತಿನ ಮೂಲೆ ಮೂಲೆಯಲ್ಲೂ ಜಯಘೋಷ ಮೊಳಗಿದೆ. ಆದರೆ ಈ ಸೋಷಿಯಲ್ ಮೀಡಿಯಾ ಸುಮ್ಮನೆ ಇರಬೇಕಲ್ವಾ? ಚಾನ್ಸೆ ಇಲ್ಲ. ಸೋಷಿಯಲ್ ಮೀಡಿಯಾದಲ್ಲಿ ಏನಾದರೂ ಒಂದು ಸುದ್ದಿ ಓಡಾಡುತ್ತಲೇ ಇರುತ್ತೆ. ಹೀಗೆ ಚಂದ್ರಯಾನ ಲ್ಯಾಂಡರ್ & ತಿರುಪತಿ ತಿಮ್ಮಪ್ಪನ ಕಿರೀಟಕ್ಕೆ ಹೋಲಿಕೆಯು ಶುರುವಾಗಿದೆ.
ಹೌದು, ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರ ಭಾರತದ ಸಾಧನೆಗೆ ಸಾಕ್ಷಿಯಾಗಿತ್ತು. ಇಲ್ಲಿಂದಲೇ ಭಾರತದ ಚಂದ್ರಯಾನ-3 ಲಾಂಚ್ ಆಗಿ, 3900 ಕೆಜೆ ತೂಕ ಇದ್ದ ಬಾಹ್ಯಾಕಾಶ ನೌಕೆ & ರೋವರ್‌ನ್ನ ಹೊತ್ತಿದ್ದ ರಾಕೆಟ್ ಯಶಸ್ವಿಯಾಗಿ ಭೂಮಿಯನ್ನು ದಾಟಿತ್ತು. ಹೀಗೆ ಭೂಮಿ ದಾಟಿ ಚಂದ್ರನ ಕಕ್ಷೆ ಸೇರಿದ್ದ ಚಂದ್ರಯಾನ-3 ತನ್ನ ಲ್ಯಾಂಡರ್‌ನ ಚಂದ್ರನ ಮೇಲೆ ಇಳಿಸುವಲ್ಲಿ ಸಕ್ಸಸ್ ಆಗಿದೆ.

ಆದ್ರೆ ಇಸ್ರೋ ಸಂಸ್ಥೆಯ ಚಂದ್ರಯಾನ-3 ಲಾಂಚ್ ಮಾಡುವ ಮೊದಲು, ಇಸ್ರೋ ಸಂಸ್ಥೆ ಅಧ್ಯಕ್ಷರು ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ್ದರು. ಹೀಗೆ ದೇವರಲ್ಲಿ ವಿಶೇಷ ಪ್ರಾರ್ಥನೆ ಮಾಡಿ ಬಂದು ಯೋಜನೆಗೆ ಚಾಲನೆ ನೀಡಲಾಗಿತ್ತು. ಇದೀಗ ಮತ್ತೊಮ್ಮೆ ಚಂದ್ರಯಾನ ಯೋಜನೆ ಜೊತೆಗೆ ತಿರುಪತಿ ತಿಮ್ಮಪ್ಪನ ಹೆಸರು ಬೆರೆತು ಹೋಗಿದೆ. ಹಾಗಾದರೆ ಏನದು ಚರ್ಚೆ? ಮುಂದೆ ಓದಿ.
ಲ್ಯಾಂಡರ್ & ತಿರುಪತಿ ತಿಮ್ಮಪ್ಪನ ಕಿರೀಟ
ಅಂದಹಾಗೆ ಚಂದ್ರಯಾನ-3 ಲ್ಯಾಂಡರ್ ಚಂದ್ರನ ಮೇಲೆ ಯಶಸ್ವಿಯಾಗಿ ಲ್ಯಾಂಡ್ ಆಗಿ, ಇತಿಹಾಸ ನಿರ್ಮಿಸಿದೆ. ಭಾರತ ಅಂದುಕೊಂಡಂತೆ ಈ ಯೋಜನೆಯಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ 4 ಗಣ್ಯ ರಾಷ್ಟ್ರಗಳ ಸಾಲಿಗೆ ಭಾರತ ಕೂಡ ಸೇರ್ಪಡೆಯಾಗಿದೆ. ಇಂದು ಸಂಜೆ ಸರಿಯಾಗಿ 6 ಗಂಟೆ 4 ನಿಮಿಷಕ್ಕೆ ಇಸ್ರೋ ಸಂಸ್ಥೆ ಲ್ಯಾಂಡರ್ ವಿಕ್ರಮ್ ಅನ್ನ ಚಂದ್ರನ ದಕ್ಷಿಣ ಧ್ರುವದ ಮೇಲೆ ಯಶಸ್ವಿಯಾಗಿ ಇಳಿಸಿಬಿಟ್ಟಿದೆ. ಆದರೆ ಹೀಗೆ ಲ್ಯಾಂಡ್ ಆಗುವಾಗಲೇ ಚಂದ್ರಯಾನ-3 ತಿರುಪತಿ ತಿಮ್ಮಪ್ಪನ ಕಿರೀಟದಂತೆ ಭಾಸವಾಗಿದೆ, ಇದು ದೇವರ ದಯೆ ಅಂತಿದ್ದಾರೆ ನೆಟ್ಟಿಗರು. ಈ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ.

ತಿರುಪತಿ ಭೇಟಿ ಬಗ್ಗೆ ಚರ್ಚೆ ನಡೆದಿತ್ತು
ಇನ್ನು ಇಸ್ರೋ ಅಧ್ಯಕ್ಷರು ಚಂದ್ರಯಾನ-3 ರಾಕೆಟ್ ಲಾಂಚ್ ಮಾಡುವ ಮೊದಲು ಹೀಗೆ ತಿರುಪತಿಗೆ ಭೇಟಿ ನೀಡಿದ್ದ ವಿಚಾರ ಸಾಕಷ್ಟು ಸದ್ದು ಮಾಡಿತ್ತು. ಆಸ್ತಿಕರು ಇದು ಸೂಕ್ತ ಕ್ರಮ, ದೇವರ ದಯೆ ಇಲ್ಲದೆ ಯೋಜನೆ ಯಶಸ್ವಿ ಆಗದು ಎಂದಿದ್ದರು. ಆದರೆ ನಾಸ್ತಿಕರು ಇಸ್ರೋ ಅಧ್ಯಕ್ಷರ ಈ ಕ್ರಮಕ್ಕೆ ಆಕ್ಷೇಪ ಹೊರಹಾಕಿದ್ದರು. ಹೀಗೆ ಎಲ್ಲಾ ಚರ್ಚೆಗಳ ಮಧ್ಯೆ ಚಂದ್ರಯಾನ-3 ರಾಕೆಟ್ ಲಾಂಚ್ ಆಗಿ, ಇಂದು ಹೊಸ ಇತಿಹಾಸ ಬರೆದಿದೆ. ಆದರೆ ಇದೇ ಸಂದರ್ಭದಲ್ಲಿ ತಿರುಪತಿ ತಿಮ್ಮಪ್ಪನ ಕಿರೀಟಕ್ಕೆ ಭಾರತದ ಚಂದ್ರಯಾನ-3 ಲ್ಯಾಂಡರ್‌ನ ಜೊತೆಗೆ ಹೋಲಿಕೆ ಮಾಡಲಾಗುತ್ತಿದೆ.
ಜಗತ್ತಿಗೇ ತನ್ನ ಶಕ್ತಿ ತೋರಿಸಿದ ಭಾರತ
ಇಸ್ರೋ ಈ ಮೂಲಕ ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡರ್ ಇಳಿಸಿದ ಜಗತ್ತಿನ ಮೊದಲ ದೇಶವಾಗಿ ಭಾರತಕ್ಕೆ ಹೆಮ್ಮೆ ತಂದು ಕೊಟ್ಟಿದೆ. ಸೂರ್ಯನ ಬೆಳಕನ್ನೇ ಕಾಣದ ಚಂದ್ರನ ದಕ್ಷಿಣ ಧ್ರುವದ ಮೇಲೆ ಇಡೀ ಜಗತ್ತು ಕಣ್ಣಿಟ್ಟು ಕೂತಿತ್ತು. ಆದರೆ ಹೀಗೆ ಚಂದ್ರನ ದಕ್ಷಿಣ ಧ್ರುವಕ್ಕೆ ಹೋಗಿ ಅಧ್ಯಯನ ಮಾಡಲು ನಡೆಸಿದ ಪ್ರಯತ್ನಗಳು ವಿಫಲವಾಗಿದ್ದವು. ಇಸ್ರೋ ಮಾತ್ರ ಯಾವುದೇ ಭಯವಿಲ್ಲದೆ ಚಂದ್ರನ ದಕ್ಷಿಣ ಧ್ರುವಕ್ಕೆ ನುಗ್ಗಿ ತನ್ನ ಲ್ಯಾಂಡರ್ ಅನ್ನ ಯಶಸ್ವಿಯಾಗಿ ಇಳಿಸಿದೆ.
ಚಂದ್ರನ ಮೇಲೆ ಲ್ಯಾಂಡರ್ ಇಳಿಸುವ ಮೂಲಕ ಬಾಹ್ಯಾಕಾಶ ಲೋಕಕ್ಕೆ ಭಾರತವೆ ದೊರೆ ಎಂಬುದನ್ನು ಇಸ್ರೋ ಸಂಸ್ಥೆ ಮತ್ತೆ ಜಗತ್ತಿಗೇ ಸಾರಿ ಹೇಳಿದೆ. ಇದರ ಜೊತೆ ಸೋಷಿಯಲ್ ಮೀಡಿಯಾ ತುಂಬಾ ಚಂದ್ರಯಾನ-3 ಬಗ್ಗೆಯೇ ಚರ್ಚೆ ಶುರುವಾಗಿವೆ. ಇಷ್ಟೆಲ್ಲಾ ಚರ್ಚೆ ನಡುವೆ ಇಸ್ರೋ ಮಾತ್ರ ತನ್ನ ಮುಂದಿನ ಹಂತಕ್ಕೆ ಸಿದ್ಧತೆ ನಡೆಸಿದೆ. ರೋವರ್ ಹೊರಗಡೆ ತಂದು, ಚಂದ್ರನ ಮೇಲೆ ಸೂಕ್ತ ಅಧ್ಯಯನಕ್ಕೆ ಮುಂದಾಗಿದೆ.












Click it and Unblock the Notifications