ತಮಿಳುನಾಡಲ್ಲಿ ಹಾವು ಹಿಡೀತಿದ್ದವರಿಗೆ 'ಪುಂಗಿ' ಊದಿದ ಅಮೆರಿಕ

Posted By:
Subscribe to Oneindia Kannada

ವಾಷಿಂಗ್ಟನ್, ಜನವರಿ 27: ಬರ್ಮೀಸ್ ಹೆಬ್ಬಾವುಗಳ ಉಪಟಳದಿಂದ ಬೇಸ್ತುಬಿದ್ದಿದ್ದ ಫ್ಲೋರಿಡಾದ ಸರ್ಕಾರ, ಈ ಸಮಸ್ಯೆಯ ಪರಿಹಾರಕ್ಕಾಗಿ ತಮಿಳುನಾಡಿನ ಇಬ್ಬರು ಹಾವು ಹಿಡಿಯುವವರ ಮೊರೆ ಹೋಗಿದೆ. ಈ ಹಿನ್ನೆಲೆಯಲ್ಲಿ, ತಮಿಳುನಾಡಿನ ಇಬ್ಬರು ಹಾವು ಹಿಡಿಯುವವರನ್ನು ಅಲ್ಲಿಗೆ ಕರೆಸಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ಅವರಿಗೆ ಲಕ್ಷಗಟ್ಟಲೆ ಸಂಭಾವನೆಯನ್ನೂ ನೀಡಲಾಗಿದೆ!

ಭಾರತದಲ್ಲಿ ಗುಡ್ಡಗಾಡುಗಳಲ್ಲಿ ಹಾವುಗಳ ಉಪಟಳ ಹೆಚ್ಚಿದ್ದು, ಅಲ್ಲಿನ ಹಾವು ಹಿಡಿಯುವವರು ಹೆಚ್ಚು ನಿಷ್ಣಾತರಾಗಿರುತ್ತಾರೆಂಬ ನಂಬಿಕೆಯ ಮೇಲೆ ಫ್ಲೋರಿಡಾ ಸರ್ಕಾರ ಈ ಸೇವೆಯನ್ನು ಪಡೆಯಲು ನಿರ್ಧರಿಸಿದೆ.

Snake Hunters From Tamil Nadu Recruited By US To Catch Pythons

ತಮಿಳುನಾಡಿಗರೇ ಏಕೆ?
ತಮಿಳುನಾಡಿನಲ್ಲಿರುವ ಇರುಳ ಬುಡಕಟ್ಟು ಜನಾಂಗದವರು ಹೆಬ್ಬಾವುಗಳನ್ನು ಹಿಡಿಯುವಲ್ಲಿ ಎತ್ತಿದ ಕೈ ಎಂಬ ಹೆಗ್ಗಳಿಕೆಯನ್ನು ಪಡೆದಿದ್ದಾರೆ. ಆದ್ದರಿಂದಲೇ ಈ ಜನಾಂಗವರನ್ನು ಸಂಪರ್ಕಿಸಿ ಅವರಲ್ಲಿ ಮಾಸಿ ಸದಿಯ್ಯಾನ್ ಹಾಗೂ ವೈದಿವೇಲ್ ಗೋಪಾಲ್ ಎಂಬಿಬ್ಬರನ್ನು ಫ್ಲೋರಿಡಾ ಸರ್ಕಾರ ಹಂಗಾಮಿಯಾಗಿ ತನ್ನಲ್ಲಿ ಕೆಲಸಕ್ಕೆ ಸೇರ್ಪಡೆಗೊಳಿಸಿಕೊಂಡಿದೆ. ಈಗಾಗಲೇ ಮಾಸಿ ಹಾಗೂ ಗೋಪಾಲ್ ಇಬ್ಬರೂ ಫ್ಲೋರಿಡಾಕ್ಕೆ ತೆರಳಿ ತಮ್ಮ ಕೆಲಸ ಆರಂಭಿಸಿದ್ದಾರೆ.

ಅಂದಹಾಗೆ, ಅವರಿಗೆ ನೀಡಲಾಗಿರುವ ಸಂಬಳದ ಬಗ್ಗೆ ನಿಖರ ಮಾಹಿತಿ ಸಿಕ್ಕಿಲ್ಲವಾದರೂ, ಈವರೆಗೆ ಇವರಿಗೆ ಸುಮಾರು 47 ಲಕ್ಷ ಪೇಮೆಂಟ್ ಆಗಿಯೆಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
For the battle against Burmese pythons, the state of Florida has turned to recruit two experienced snake catchers from India.
Please Wait while comments are loading...