ಹರಿಯಾಣದ ಶಾಲೆಯ ಮಧ್ಯಾಹ್ನದ ಊಟದಲ್ಲಿ ಮರಿಹಾವು

Posted By:
Subscribe to Oneindia Kannada

ಫರೀದಾಬಾದ್, ಮೇ 12: ಹರಿಯಾಣದ ಫರೀದಾಬಾದ್ ನಲ್ಲಿರುವ ರಾಜ್ ಕೀಯ ಬಾಲಕಿಯರ ಹಿರಿಯ ಪ್ರೌಢಶಾಲೆಯಲ್ಲಿ ಶುಕ್ರವಾರ ಮಧ್ಯಾಹ್ನ ಮಕ್ಕಳಿಗೆ ವಿತರಿಸಿದ ಬಿಸಿಯೂಟದಲ್ಲಿ ಮರಿಹಾವು ಕಾಣಿಸಿಕೊಂಡಿದೆ. ಇದು ಗೊತ್ತಾದ ತಕ್ಷಣ ಮಕ್ಕಳು ಊಟ ಮಾಡುವುದನ್ನು ನಿಲ್ಲಿಸಲಾಗಿದೆ. ಆದರೆ ಅಷ್ಟರಲ್ಲಾಗಲೇ ಕೆಲವು ವಿದ್ಯಾರ್ಥಿಗಳು ಊಟ ಮಾಡಿದ್ದರು.

ಆ ವೇಳೆಗಾಗಲೇ ಕೆಲವು ವಿದ್ಯಾರ್ಥಿಗಳಿಗೆ ವಾಂತಿಯಾಗಿತ್ತು. ಪ್ರಾಂಶುಪಾಲರು ಮತ್ತು ಕೆಲ ಶಿಕ್ಷಕರು ಆಹಾರವನ್ನು ಪರಿಶೀಲಿಸುವಾಗ ಅದರಲ್ಲಿ ಮರಿಹಾವು ಕಂಡುಬಂದಿದೆ. ಆ ತಕ್ಷಣವೇ ಉಳಿದ ವಿದ್ಯಾರ್ಥಿಗಳಿಗೆ ಆಹಾರ ಸೇವಿಸದಂತೆ ಸೂಚಿಸಿದ್ದಾರೆ. ಆ ಕೂಡಲೇ ವಿದ್ಯಾರ್ಥಿಗಳಿಗೆ ನೀಡಿದ್ದ ಆಹಾರ ಹಿಂಪಡೆಯಲಾಗಿದೆ.[ಹೊಸ ಸ್ಕೂಟಿ ಜತೆ ಮಂಗಳೂರಲ್ಲಿ ವಿಷಕಾರಿ ಹಾವು ಫ್ರೀ]

Snake found in mid-day meal at Faridabad government school

ಯಾವಾಗಲೂ ಊಟದಲ್ಲಿ ಹಳಸಲು ವಾಸನೆ ಬರುತ್ತಿತ್ತು. ಆದರೆ ಈ ಬಾರಿಯ ವಿಚಾರ ಗಾಬರಿ ಮೂಡಿಸುವಂತಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಶಾಲೆಯ ಪ್ರಾಂಶುಪಾಲರಾದ ಬ್ರಜ್ ಬಾಲಾ ಈ ಬಗ್ಗೆ ಮೇಲಧಿಕಾರಿಗಳಿಗೆ ಹಾಗೂ ಆಹಾರ ಪೂರೈಸುವ ಇಸ್ಕಾನ್ ನವರಿಗೆ ತಿಳಿಸಿದ್ದಾರೆ. ಇತರ ಶಾಲೆಗಳಿಗೂ ಇದೇ ಆಹಾರವನ್ನು ಪೂರೈಸಲಾಗಿದೆ. ಎಲ್ಲ ಕಡೆಯೂ ಈ ಬಗ್ಗೆ ಮಾಹಿತಿ ರವಾನಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A baby snake, also known as a 'snakelet' was found in the food served to children in Rajkeeya Girls Senior Secondary School, Faridabad.
Please Wait while comments are loading...