'ಸ್ತ್ರೀದ್ವೇಷ ಗೂಂಡಾಗಳಿಗೆ ಹೊಸ ಭಾಷಣಕಾರನ ಅಗತ್ಯವಿದೆ' ರೈ ಹೇಳಿಕೆಗೆ ಸ್ಮೃತಿ ತಿರುಗೇಟು
ಅಮೇಥಿ ಡಿಸೆಂಬರ್ 19: ಬಿಜೆಪಿ ನಾಯಕಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅಮೇಥಿಗೆ ಬೆಡಗು ಭಿನ್ನಾಣ ಪ್ರದರ್ಶನಕ್ಕೆ ಬರುತ್ತಾರೆ ಎಂದು ಕಾಂಗ್ರೆಸ್ ನಾಯಕ ಅಜಯ್ ರೈ ಹೇಳಿಕೆಗೆ ಸ್ಮೃತಿ ಇರಾನಿ ತಿರುಗೇಟು ನೀಡಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಅಮೇಥಿಯಿಂದ ರಾಹುಲ್ ಗಾಂಧಿ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಕಾಂಗ್ರೆಸ್ ನಾಯಕ ಅಜಯ್ ರೈ ಅವರು, 'ಅಮೇಥಿ ಗಾಂಧಿ ಕುಟುಂಬದ ಕ್ಷೇತ್ರವಾಗಿದೆ. ರಾಹುಲ್ ಅವರು ಅಲ್ಲಿಂದ ಲೋಕಸಭೆ ಸಂಸದರಾಗಿದ್ದರು. ರಾಜೀವ್ ಗಾಂಧಿ ಮತ್ತು ಸಂಜಯ್ ಗಾಂಧಿ ಅವರು ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಸ್ಮೃತಿ ಇರಾನಿ ಅಮೇಥಿಯನ್ನು ಪ್ರತಿನಿಧಿಸುತ್ತಿದ್ದಾರೆ. ಆದರೆ ಇಲ್ಲಿನ ಬಹುತೇಕ ಕಾರ್ಖಾನೆಗಳು ಮುಚ್ಚುವ ಹಂತದಲ್ಲಿವೆ. ಸ್ಮೃತಿ ಇರಾನಿ ತಮ್ಮ ಬೆಡಗು ಬಿನ್ನಾಣವನ್ನು ಪ್ರದರ್ಶಸಲು ಮಾತ್ರ ಅಮೇಥಿಗೆ ಬಂದು ಹೋಗುತ್ತಾರೆ' ಎಂದು ಹೇಳಿದರು.
ಅಜಯ್ ರೈ ಅವರ ಹೇಳಿಕೆಯನ್ನು ಬಿಜೆಪಿ ಖಂಡಿಸಿದೆ. 'ದೇಶಕ್ಕೆ ಮಹಿಳಾ ಪ್ರಧಾನಿಯನ್ನು ನೀಡಿದ ಪಕ್ಷದ ನಾಯಕರೊಬ್ಬರು ಇಂಥ ಹೇಳಿಕೆ ನೀಡಿರುವುದು ನಾಚಿಕೆಗೇಡಿನ ಸಂಗತಿ' ಎಂದು ಉತ್ತರಪ್ರದೇಶ ಬಿಜೆಪಿ ವಕ್ತಾರ ಆನಂದ್ ದುಬೆ ಹೇಳಿದ್ದಾರೆ.

ಸ್ಮೃತಿ ಇರಾನಿ ಪ್ರತಿಕ್ರಿಯೆ ಏನು?
ಕಾಂಗ್ರೆಸ್ ನಾಯಕರ ಈ ಹೇಳಿಕೆಗೆ ಬಿಜೆಪಿಯಿಂದ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸ್ಮೃತಿ ಇರಾನಿ 'ಸ್ತ್ರೀದ್ವೇಷ ಗೂಂಡಾಗಳಿಗೆ ಹೊಸ ಭಾಷಣಕಾರನ ಅಗತ್ಯವಿದೆ' ಎಂದು ಪ್ರತಿಕ್ರಿಯಿಸಿದ್ದಾರೆ. 'ರಾಹುಲ್ ಗಾಂದಿ ಅವರೇ 2024 ರಲ್ಲಿ ನಿಮ್ಮ ಪ್ರಾಂತೀಯ ನಾಯಕರಿಂದ ಅಸಭ್ಯ ಮಾತುಗಳ ಮೂಲಕ ಅಮೇಥಿಯಿಂದ ಸ್ಪರ್ಧಿಸುವುದಾಗಿ ಘೋಷಿಸಿದ್ದೀರಿ. ಇಂತಹ ಮಾತುಗಳಿಂದ ನೀವು ಅಮೇಥಿಯಿಂದ ಸ್ಪರ್ಧಿಸುತ್ತೀರಾ? ಜನ ನಿಮ್ಮನ್ನು ಎರಡನೇ ಸೀಟಿಗೆ ಓಡುವುದಿಲ್ಲವೇ? ನೀವು ಮತ್ತು ಸೋನಿಯಾ ಗಾಂಧಿ ಅವರು ನಿಮ್ಮ ಸ್ತ್ರೀದ್ವೇಷದ ಗೂಂಡಾಗಳಿಗೆ ಹೊಸ ಭಾಷಣಕಾರರನ್ನು ಹುಡುಕಬೇಕು' ಎಂದು ಸ್ಮೃತಿ ಇರಾನಿ ಟ್ವೀಟ್ ಮಾಡಿದ್ದಾರೆ.
ಯುಪಿ ಬಿಜೆಪಿ ವಕ್ತಾರ ಆನಂದ್ ದುಬೆ ಕೂಡ ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ಟೀಕಿಸಿದ್ದಾರೆ. ರಾಷ್ಟ್ರಕ್ಕೆ ಮಹಿಳಾ ಪ್ರಧಾನಿಯನ್ನು ನೀಡಿದ ಪಕ್ಷದ ನಾಯಕನ ಇಂತಹ ಹೇಳಿಕೆಯು ಖಂಡಿತವಾಗಿಯೂ 'ನಾಚಿಕೆಗೇಡಿನ ಸಂಗತಿಯಾಗಿದೆ' ಎಂದು ಯುಪಿ ಬಿಜೆಪಿ ವಕ್ತಾರ ಆನಂದ್ ದುಬೆ ಲಕ್ನೋದಲ್ಲಿ ಹೇಳಿದ್ದಾರೆ. ಕಾಂಗ್ರೆಸ್ ನಾಯಕರು ಯಾವಾಗಲೂ 'ಮಹಿಳಾ ವಿರೋಧಿ' ಭಾಷೆ ಬಳಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.












Click it and Unblock the Notifications