ರಾಹುಲ್ ಗಾಂಧಿಗೆ ಸಿಖ್ ದಂಗೆ ನೆನಪು ಮಾಡಿಸಿದ ಸ್ಮೃತಿ ಇರಾನಿ

ನವದೆಹಲಿ, ಜುಲೈ 23: ಜನಸಮೂಹ ಮಾಡಿದ ಹತ್ಯೆ ಬಗ್ಗೆ ಟ್ವೀಟ್ ಮಾಡಿ ಮೋದಿ ಸರ್ಕಾರವನ್ನು ಟೀಕಿಸಿದ ರಾಹುಲ್ ಗಾಂಧಿಗೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಿಖ್ ದಂಗೆಯ ನೆನಪು ಮಾಡಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್‌ಗೆ ಪ್ರತಿ ಟ್ವೀಟ್ ಮಾಡಿರುವ ಇರಾನಿ ಅವರು, 1984ರ ಸಿಖ್ ದಂಗೆ, ಬಾಗಲ್‌ಪುರ, ನಿಲ್ಲೆ ದಂಗೆಗಳಿಗೆ ರಾಹುಲ್ ಗಾಂಧಿ ಕುಟುಂಬದ ದ್ವೇಷ ರಾಜಕಾರಣ ಕಾರಣ ಎಂದಿದ್ದಾರೆ.

ರಾಹುಲ್ ಗಾಂಧಿಯ ರಾಜಕಾರಣವನ್ನು ರಣಹದ್ದಿನಂತಹಾ ಕ್ರೂರ ರಾಜಕಾರಣ ಎಂದು ಕರೆದಿರುವ ಸ್ಮೃತಿ ಇರಾನಿ, ಅವರ ಕುಟುಂಬ ಪ್ರಾರಂಭ ಮಾಡಿದ ದ್ವೇಷ ರಾಜಕಾರಣವನ್ನು ಮುಂದುವರೆಸಿದ್ದಾರೆ ಎಂದಿದ್ದಾರೆ.

Smriti Irani reply to Rahul Gandhi tweet about Modi administration

ಚುನಾವಣಾ ಲಾಭಕ್ಕಾಗಿ ಸಾಮಾಜಿಕ ಸ್ವಾಸ್ಥ್ಯವನ್ನು ಛಿದ್ರಗೊಳಿಸಲು ಅವರು ಪ್ರಯತ್ನಿಸದೇ ಇರುವ ಒಂದೇ ಒಂದು ಉದಾಹರಣೆಯೂ ಇಲ್ಲ ಎಂದು ಅವರು ಹೇಳಿದ್ದಾರೆ.

ರಾಜಸ್ಥಾನದ ಅಲ್ವಾರ್‌ನಲ್ಲಿ ಗೋರಕ್ಷಕರು ನಡೆಸಿದ ದಾಳಿಯಲ್ಲಿ ಒಬ್ಬ ವ್ಯಕ್ತಿ ಮೃತನಾಗಿದ್ದ ಬಗ್ಗೆ ಟ್ವೀಟ್ ಮಾಡಿದ್ದ ರಾಹುಲ್ ಅವರು, 'ಇದು ಮೋದಿಯ ಕ್ರೂಡ ಆಡಳಿತದ ಪರಿಣಾಮ' ಎಂದಿದ್ದರು. ರಾಹುಲ್ ಅವರ ಈ ಟ್ವೀಟ್‌ಗೆ ಬಿಜೆಪಿ ಸದಸ್ಯರು ಕೆಂಡಾಮಂಡಲವಾಗಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+