ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ ಡಿವೋರ್ಸ್ ಆದ್ರೂ ಗಂಡನ ಮನೆಯಲ್ಲೇ ವಾಸ, ಇದರ ಹಿಂದಿದೆ ನೋವಿನ ಕಥೆ
BMC Election 2026 Results: ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣಾ ಫಲಿತಾಂಶಗಳು ರಾಜಕೀಯವಾಗಿ ಭಾರಿ ಚರ್ಚೆಗೆ ಕಾರಣವಾಗಿರುವ ಈ ಸಮಯದಲ್ಲಿ, ಠಾಕ್ರೆ ಕುಟುಂಬಕ್ಕೆ ಸಂಬಂಧಿಸಿದ ಒಂದು ಅಪರೂಪದ ಹಾಗೂ ಭಾವುಕ ಸಂಗತಿ ಮತ್ತೆ ಬೆಳಕಿಗೆ ಬಂದಿದೆ. ವಿಚ್ಛೇದನವಾದರೂ 'ಮಾತೋಶ್ರೀ'ಯಲ್ಲೇ ವಾಸಿಸುತ್ತಿರುವ ಠಾಕ್ರೆ ಕುಟುಂಬದ ಸೊಸೆ ಸ್ಮಿತಾ ಠಾಕ್ರೆ (Smita Thackeray) ಅವರ ಜೀವನ ಕಥೆಯು ಜನರ ಗಮನ ಸೆಳೆಯುತ್ತಿದೆ.
25 ವರ್ಷಗಳಿಂದ ಮುಂಬೈ ಮೇಲೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಹಿಡಿತವಿತ್ತು. ಆದರೆ ಈ ಬಾರಿ ಬಿಜೆಪಿ ನೇತೃತ್ವದ ಮೈತ್ರಿಕೂಟ ಅಧಿಕಾರ ಸಾಧಿಸಿದೆ. 'ಮರಾಠಿ ಮಾನುಷ್' ಅಸ್ತ್ರ ಪ್ರಯೋಗಿಸಿ ಜನಮನ ಗೆಲ್ಲಬಹುದು ಎಂಬ ವಿಶ್ವಾಸದಲ್ಲಿ ಉದ್ಧವ್ ಠಾಕ್ರೆ ತಮ್ಮ ಸಹೋದರ ರಾಜ್ ಠಾಕ್ರೆ ಜೊತೆಗೆ 20 ವರ್ಷಗಳ ಬಳಿಕ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಆದರೆ ಈ ಸಂದೇಶ ಜನರಿಗೆ ತಲುಪಲಿಲ್ಲ ಎಂಬ ಅಭಿಪ್ರಾಯವೂ ಕೇಳಿಬಂದಿದೆ. ಪರಿಣಾಮವಾಗಿ ಇಬ್ಬರು ಸಹೋದರರೂ ಚುನಾವಣೆಯಲ್ಲಿ ಸೋಲು ಕಂಡರು ಎಂಬ ಟೀಕೆಗಳು ಕೇಳಿಬರುತ್ತಿವೆ. ಈ ರಾಜಕೀಯ ಬೆಳವಣಿಗೆಯ ನಡುವೆಯೇ, ಠಾಕ್ರೆ ಕುಟುಂಬದ ಮತ್ತೊಂದು ಕಥೆ ಚರ್ಚೆಗೆ ಬಂದಿದೆ.

ವಿಚ್ಛೇದನವಾದರೂ 'ಮಾತೋಶ್ರೀ'ಯಲ್ಲೇ ಸ್ಮಿತಾ
ಶಿವಸೇನೆ ಸಂಸ್ಥಾಪಕ ಬಾಳಾಸಾಹೇಬ್ ಠಾಕ್ರೆ ಅವರಿಗೆ ಮೂವರು ಪುತ್ರರು ಇದ್ದರು. ಹಿರಿಯ ಪುತ್ರ ಬಿಂದುಮಾಧವ ಠಾಕ್ರೆ ದುರ್ಘಟನೆಯಲ್ಲಿ ನಿಧನರಾದರು. ಎರಡನೇ ಪುತ್ರ ಜಯದೇವ ಠಾಕ್ರೆ ಬಾಳಾಸಾಹೇಬರ ಆಲೋಚನೆಗಳಿಗೆ ಸಂಪೂರ್ಣ ವಿರುದ್ಧವಾಗಿದ್ದ ಕಾರಣ ತಂದೆ-ಮಗನ ನಡುವೆ ಸದಾ ವೈಮನಸ್ಸು ಇತ್ತು ಎನ್ನಲಾಗಿದೆ. ಅಲ್ಲದೆ ಜಯದೇವ ಮೂರು ಮದುವೆಯಾಗಿದ್ದರು. ಜಯದೇವ ಅವರ ಮೊದಲ ವಿವಾಹ ಜಯಶ್ರೀ ಕಾಲೇಕರ್ ಅವರೊಂದಿಗೆ ನಡೆದಿತ್ತು. ಆದರೆ ಕೆಲವೇ ದಿನಗಳಲ್ಲಿ ವಿಚ್ಛೇದನವಾಗಿದ್ದು, ಇದರಿಂದ ಬಾಳಾಸಾಹೇಬ್ ಮತ್ತು ಜಯದೇವರ ನಡುವಿನ ಅಂತರ ಇನ್ನಷ್ಟು ಹೆಚ್ಚಾಯಿತು.
ಎರಡನೇ ಪತ್ನಿ ಸ್ಮಿತಾ ಠಾಕ್ರೆ
ನಂತರ ಜಯದೇವ ಅವರು ಮುಂಬೈನ ಮಧ್ಯಮ ವರ್ಗದ ಕುಟುಂಬದಲ್ಲಿ ಬೆಳೆದ ಸ್ಮಿತಾ ಠಾಕ್ರೆ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಸ್ಮಿತಾ ಅವರ ಸೌಮ್ಯ ಸ್ವಭಾವ, ಸಂಸ್ಕಾರ ಮತ್ತು ನಡತೆಯಿಂದ ಅವರು ಶೀಘ್ರದಲ್ಲೇ ಠಾಕ್ರೆ ಕುಟುಂಬದ ಎಲ್ಲರ ಪ್ರೀತಿಗೆ ಪಾತ್ರರಾದರು. ಇವರಿಗೆ ಇಬ್ಬರು ಪುತ್ರರು ಜನಿಸಿದರು. ಆದರೆ ಕೆಲ ವರ್ಷಗಳ ಬಳಿಕ ಜಯದೇವ ಅವರು ಸ್ಮಿತಾ ಅವರನ್ನು ಕೂಡ ತೊರೆಯುವ ನಿರ್ಧಾರ ತೆಗೆದುಕೊಂಡರು. ಈ ಬಾರಿ ಬಾಳಾಸಾಹೇಬ್ ಠಾಕ್ರೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದರು. "ಇದು ನಡೆಯಲು ಬಿಡುವುದಿಲ್ಲ" ಎಂದು ಸ್ಪಷ್ಟವಾಗಿ ಹೇಳಿದರೂ ಜಯದೇವ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಇದರಿಂದ ಕೋಪಗೊಂಡ ಬಾಳಾಸಾಹೇಬ್, ಜಯದೇವ ಅವರನ್ನು 'ಮಾತೋಶ್ರೀ'ಯಿಂದಲೇ ಹೊರಹಾಕಿ, ಸ್ಮಿತಾ ಮತ್ತು ಅವರ ಮಕ್ಕಳಿಗೆ ಅಲ್ಲೇ ವಾಸಿಸುವ ಹಕ್ಕು ನೀಡಿದರು.
ಆಸ್ತಿ ಹಕ್ಕು ಸಹ ಸ್ಮಿತಾ ಮತ್ತು ಮೊಮ್ಮಕ್ಕಳಿಗೆ
ಬಾಳಾಸಾಹೇಬ್ ಜಯದೇವ ಅವರಿಗೆ ಯಾವುದೇ ಪಾಲು ನೀಡದೇ, ಸ್ಮಿತಾ ಠಾಕ್ರೆ ಹಾಗೂ ಮೊಮ್ಮಕ್ಕಳಿಗೆ ಆಸ್ತಿ ಹಂಚಿಕೆ ಮಾಡಿದರು. ಸ್ಮಿತಾ ಜೊತೆಗಿನ ವಿವಾಹ ಮುರಿದ ಬಳಿಕ ಜಯದೇವ ಅವರು ಮೂರನೇ ವಿವಾಹವನ್ನು ಅನುರಾಧಾ ಅವರೊಂದಿಗೆ ಮಾಡಿಕೊಂಡರು. ಆದರೆ ಠಾಕ್ರೆ ಕುಟುಂಬ ಈ ಸಂಬಂಧವನ್ನು ಎಂದಿಗೂ ಒಪ್ಪಿಕೊಂಡಿಲ್ಲ. 2012ರಲ್ಲಿ ಬಾಳಾಸಾಹೇಬ್ ನಿಧನರಾದ ನಂತರ, ಜಯದೇವ ಪಾಲು ಕೇಳಿ ಕೋರ್ಟ್ ಮೆಟ್ಟಿಲೇರಿದರು. ಈ ವೇಳೆ ಅವರು ಸ್ಮಿತಾ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, "ಜಯದೇವ ಮಾನಸಿಕವಾಗಿ ಸಮತೋಲನದಲ್ಲಿಲ್ಲ, ಅದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ" ಎಂದು ಕೋರ್ಟ್‌ನಲ್ಲಿ ಹೇಳಿದ್ದಾರೆ ಎನ್ನಲಾಗಿದೆ.
ಇಂದು ಸ್ಮಿತಾ ಠಾಕ್ರೆ 'ಮಾತೋಶ್ರೀ'ಯಲ್ಲೇ ವಾಸಿಸುತ್ತಿದ್ದರೂ, ರಾಜಕೀಯವಾಗಿ ಅವರು ಬಿಜೆಪಿ ಮತ್ತು ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬೆಂಬಲ ನೀಡುತ್ತಿದ್ದಾರೆ. ಅವರು ಪೇಜ್-3 ಸಾಮಾಜಿಕ ಜೀವನದಲ್ಲೂ ಸಕ್ರಿಯರಾಗಿದ್ದು, ಮುಕ್ತಿ ಫೌಂಡೇಶನ್‌ನ ಅಧ್ಯಕ್ಷೆ, ಸಮಾಜಸೇವಕಿ ಹಾಗೂ ಹಿಂದಿ-ಮರಾಠಿ ಸಿನಿಮಾ ಮತ್ತು ಟಿವಿ ಕ್ಷೇತ್ರಗಳಲ್ಲಿ ಸಕ್ರಿಯ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ವಿಚ್ಛೇದನವಾದರೂ ಮಾತೋಶ್ರೀ ತೊರೆಯದ ಸ್ಮಿತಾ ಠಾಕ್ರೆ ಕಥೆಯು, ಠಾಕ್ರೆ ಕುಟುಂಬದ ಒಳಗಿನ ನೋವು, ಸಂಘರ್ಷ ಮತ್ತು ಮೌಲ್ಯಗಳ ಸಂಕೀರ್ಣ ಚಿತ್ರಣದೊಂದಿಗೆ ಇದು ರಾಜಕೀಯಕ್ಕಿಂತಲೂ ಮೀರಿದ ಒಂದು ಕಥೆಯಾಗಿ ಇಂದು ಮತ್ತೆ ಚರ್ಚೆಗೆ ಬಂದಿದೆ.
-
ಕನ್ನಡಿಗರಿಗಿಂತ ಕೇರಳದವರೇ ಅದೃಷ್ಟವಂತರು: ವಯನಾಡಿಗೆ ಸಿದ್ದರಾಮಯ್ಯರಿಂದ 10 ಕೊಟಿ ರೂ ಅನುದಾನ: ಆಕ್ರೋಶ -
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕಡೆ ಭರ್ಜರಿ ಬಹುಮತದೊಂದಿಗೆ ಕಾಂಗ್ರೆಸ್ ಗೆಲುವು ಎಂದ ಡಿ.ಕೆ.ಶಿವಕುಮಾರ್ -
ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಬ್ಬರ: ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮ್ಮುಖದಲ್ಲಿ ಸಮರ್ಥ್ ಶಾಮನೂರು ನಾಮಪತ್ರ ಸಲ್ಲಿಕೆ -
ಇಡೀ ಸರ್ಕಾರವೇ ಉಮೇಶ್ ಮೇಟಿ ಜೊತೆಗಿದೆ: ಬಾಗಲಕೋಟೆಯಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಡಿ.ಕೆ.ಶಿವಕುಮಾರ್ ಅಭಯ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications