Election Poll: ಕಾಂಗ್ರೆಸ್ ಪಕ್ಷಕ್ಕೆ ಈ ರಾಜ್ಯದಲ್ಲಿ ಮತ್ತೆ ಅಧಿಕಾರ ಫಿಕ್ಸ್?
ಇನ್ನೇನು ಲೋಕಸಭೆ ಚುನಾವಣೆ ಹತ್ತಿರ ಬಂದೇ ಬಿಡುತ್ತೆ. ಮುಂದಿನ ವರ್ಷ ಲೋಕಸಭೆಗೆ ಚುನಾವಣೆ ನಡೆಯಲಿದೆ. ಆದರೆ ಅದಕ್ಕೂ ಮೊದಲು, ಪಂಚ ರಾಜ್ಯಗಳ ವಿಧಾನಸಭೆಗಳಿಗೆ ಎಲೆಕ್ಷನ್ ನಡೆಯಲಿದೆ. ಇದೀಗ ಇಡೀ ದೇಶ ಈ 5 ರಾಜ್ಯಗಳ ಚುನಾವಣೆ ಮೇಲೆ ಕಣ್ಣಿಟ್ಟು ಕೂತಿದೆ. ಈ 5 ರಾಜ್ಯಗಳ ಪೈಕಿ ಒಂದು ರಾಜ್ಯದ ಚುನಾವಣಾ ಸಮೀಕ್ಷೆ ಹೊರಬಿದ್ದಿದ್ದು, ಕಾಂಗ್ರೆಸ್ ಮತ್ತೊಮ್ಮೆ ಗೆಲ್ಲುವುದು ಗ್ಯಾರಂಟಿ ಅಂತಿದೆ ಸಮೀಕ್ಷೆಯ ರಿಸಲ್ಟ್.
ಅಂದಹಾಗೆ ಕಾಂಗ್ರೆಸ್ ಇದೀಗ ಮತ್ತೆ ಒಂದೊಂದೇ ರಾಜ್ಯವನ್ನ ಗೆಲ್ಲುತ್ತಾ ಹೋಗುತ್ತಿದೆ. ಈ ಪೈಕಿ ಕರ್ನಾಟಕ ವಿಧಾನಸಭೆ ಚುನಾವಣಾ ಗೆಲುವು ಕಾಂಗ್ರೆಸ್‌ಗೆ ಮತ್ತಷ್ಟು ಬಲ ತುಂಬಿದೆ. ದೇಶದಲ್ಲಿ ಇದು ಕಾಂಗ್ರೆಸ್ ನಾಯಕರಿಗೆ ಪುಟಿದೇಳುವ ಶಕ್ತಿ ತುಂಬಿದೆ. ಇದೇ ಮುಂಬರುವ ಪಂಚ ರಾಜ್ಯಗಳ ಚುನಾವಣೆಗೂ ಶಕ್ತಿ ತುಂಬುವ ಸೂಚನೆ ನೀಡುತ್ತಿದ್ದು, ಈಗ ಕಾಂಗ್ರೆಸ್ ಮತ್ತೊಂದು ರಾಜ್ಯದಲ್ಲೂ ತನ್ನ ಅಧಿಕಾರ ಉಳಿಸಿಕೊಳ್ಳುವ ಸೂಚನೆ ಸಿಕ್ಕಿದೆ. ಹಾಗಾದರೆ ಯಾವುದು ಆ ರಾಜ್ಯ? ಕಾಂಗ್ರೆಸ್ ಎಷ್ಟು ಸ್ಥಾನ ಪಡೆಯಬಹುದು?

ಕಾಂಗ್ರೆಸ್‌ಗೆ ಭರ್ಜರಿ ಗೆಲುವು ಫಿಕ್ಸ್?
ಮೊದಲೇ ಹೇಳಿದಂತೆ ಕರ್ನಾಟಕ ವಿಧಾನಸಭೆ ಗೆಲುವು ಕಾಂಗ್ರೆಸ್‌ಗೆ ಹೊಸ ಹುಮ್ಮಸ್ಸನ್ನೂ ನೀಡಿದೆ. ಈ ಸಂದರ್ಭದಲ್ಲೇ ಛತ್ತೀಸ್‌ಗಢ ಚುನಾವಣೆಯಲ್ಲಿ ಕೂಡ ಕಾಂಗ್ರೆಸ್ ಗೆಲ್ಲುವುದು ಗ್ಯಾರಂಟಿ ಅಂತಿದೆ ಇಲ್ಲೊಂದು ಸಮೀಕ್ಷೆ. ಛತ್ತೀಸ್‌ಗಢಕ್ಕೆ ಈಗಲೇ ಚುನಾವಣೆ ನಡೆದಿದ್ದೇ ಆದರೆ, ಕಾಂಗ್ರೆಸ್ 59ರಿಂದ 61 ಸ್ಥಾನ ಗೆಲ್ಲಬಹುದು ಎಂದು 'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆ ವರದಿ ತಿಳಿಸಿದೆ. ಹಾಗಾದರೆ ಬಿಜೆಪಿ ಮತ್ತು ಇತರ ಪಕ್ಷಗಳು ಛತ್ತೀಸ್‌ಗಢ ರಾಜ್ಯದ ಚುನಾವಣೆಯಲ್ಲಿ ಎಷ್ಟು ಸ್ಥಾನ ಪಡೆಯಬಹುದು? ಸಮೀಕ್ಷೆ ಹೇಳಿದ್ದೇನು?
ಒಟ್ಟು 90 ಸ್ಥಾನ ಇರುವ ಛತ್ತೀಸ್‌ಗಢ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 59ರಿಂದ 61 ಸ್ಥಾನ ಗೆಲ್ಲಬಹುದು ಅಂತಾ ಸಮೀಕ್ಷೆ ಹೇಳುತ್ತಿದ್ದರೆ, ಮತ್ತೊಂದು ಕಡೆ ಬಿಜೆಪಿಗೆ ಇಲ್ಲಿ 20ರಿಂದ 23 ಸ್ಥಾನ ಸಿಗಬಹುದು ಎನ್ನಲಾಗಿದೆ. ಹಾಗೂ ಇತರರು 4ರಿಂದ 6 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಅಂತಾ 'ಸ್ಮಾಲ್ ಬಾಕ್ಸ್ ಇಂಡಿಯಾ' ಸಮೀಕ್ಷೆ ಹೇಳಿದೆ. ಆದರೆ ಚುನಾವಣೆಗೆ ಇನ್ನೂ ಕಾಲಾವಕಾಶ ಇದ್ದು, ಗೆಲುವಿಗಾಗಿ ಬಿಜೆಪಿ ಕೂಡ ರಣತಂತ್ರವನ್ನು ರೂಪಿಸುತ್ತಿದೆ.
Its last Opinion poll of Chhattisgarh assembly 2023 ( Total - 90 )
— Small Box India (@SmallBoxIndia) October 3, 2023
Congress - 59-61 seats
BJP - 20-23seats
Others - 4-6 seats
If election held today results will be this ☝ #ChhattisgarhElection2023
ಈಗಾಗಲೇ ಇಲ್ಲಿ ಸಾಕಷ್ಟು ಬದಲಾವಣೆಗೂ ಕಮಲ ಪಾಳಯ ಮುಂದಾಗಿದೆ. ಹೀಗಾಗಿ ಈ ರಾಜ್ಯದಲ್ಲಿ ಚುನಾವಣೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾಂಗ್ರೆಸ್ ಮತ್ತೆ ಛತ್ತೀಸ್‌ಗಢದ ವಿಧಾನಸಭೆ ಚುನಾವಣೆಯಲ್ಲಿ ಗೆದ್ದರೆ ಲೋಕಸಭೆಗೆ ಮತ್ತಷ್ಟು ಬಲ ಸಿಗುವುದು ಗ್ಯಾರಂಟಿ. ಹಾಗೇ ಬಿಜೆಪಿ ನಾಯಕರು ಕೂಡ ಛತ್ತೀಸ್‌ಗಢದಲ್ಲಿ ಗೆಲುವು ಸಾಧಿಸಲು ರಣತಂತ್ರವನ್ನೇ ಹೆಣೆಯುತ್ತಿದ್ದಾರೆ. ಈ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಇಲ್ಲಿ ನೇರ ಪೈಪೋಟಿ ಇರಲಿದೆ.
ರಾಹುಲ್ ಗಾಂಧಿ ರೈಲು ಸವಾರಿ
ಅಂದಹಾಗೆ ಇತ್ತೀಚೆಗೆ ಛತ್ತೀಸ್‌ಗಢದ ಬಿಲಾಸ್‌ಪುರದಿಂದ ರಾಜಧಾನಿ ರಾಯ್‌ಪುರಕ್ಕೆ ರೈಲಿನಲ್ಲಿ ಪ್ರಯಾಣ ಮಾಡಿರುವ ರಾಹುಲ್ ಗಮನ ಸೆಳೆದಿದ್ದಾರೆ. ಪ್ರಯಾಣಿಕರ ಜೊತೆಗೆ ಸಂವಾದದಲ್ಲಿ ತೊಡಗಿದ್ದ ವಿಡಿಯೋ ರಿಲೀಸ್ ಮಾಡಿರುವ ಎಐಸಿಸಿ & ಕೆಪಿಸಿಸಿ ಈ ಕುರಿತು ಮಾಹಿತಿ ನೀಡಿದೆ. ಹಾಗೇ ರಾಹುಲ್ ಅವರು ಕೂಡ 13 ನಿಮಿಷಗಳ ವಿಡಿಯೋ ಶೇರ್ ಮಾಡಿದ್ದಾರೆ. ಚುನಾವಣೆ ಸಮಯದಲ್ಲೇ ರಾಹುಲ್ ಗಾಂಧಿ ರೈಲು ಸವಾರಿ ಗಮನ ಸೆಳೆದಿದೆ. ಹಾಗೇ ಈಗ ಸಮೀಕ್ಷೆ ವರದಿ ಕೂಡ ಕಾಂಗ್ರೆಸ್ ಗೆಲ್ಲುತ್ತದೆ ಅಂತಾ ಹೇಳುತ್ತಿದೆ.

ಸೋಷಿಯಲ್ ಮೀಡಿಯಾದಲ್ಲಿ ವೈರಲ್
ರಾಹುಲ್ ಗಾಂಧಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ, ಕಾಂಗ್ರೆಸ್ ಮತ್ತಷ್ಟು ಬಲಗೊಳಿಸಲು ಯತ್ನಿಸುತ್ತಿದ್ದಾರೆ. ಹೀಗೆ ಸೆಪ್ಟಂಬರ್ 25ಕ್ಕೆ ಛತ್ತೀಸ್‌ಗಢ ರಾಜ್ಯದ ಬಿಲಾಸ್‌ಪುರ ಜಿಲ್ಲೆಯಲ್ಲೂ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಕಾರ್ಯಕ್ರಮ ಹಿನ್ನೆಲೆ ಛತ್ತೀಸ್‌ಗಢಕ್ಕೆ ತೆರಳಿದ್ದಾಗ ರೈಲಿನಲ್ಲಿ ಪ್ರಯಾಣ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಭಾಗಿಯಾದ ನಂತರ ರಾಹುಲ್ ಗಾಂಧಿ ರೈಲಿನಲ್ಲಿ ರಾಯ್‌ಪುರಕ್ಕೆ ಹೊರಟಿದ್ದರು. ರಾಹುಲ್ ಜೊತೆ ಸಿಎಂ ಭೂಪೇಶ್ ಬಘೇಲ್, ರಾಜ್ಯ ಉಸ್ತುವಾರಿ ಕುಮಾರಿ ಸೆಲ್ಜಾ ಮತ್ತು ರಾಜ್ಯ ಘಟಕದ ಮುಖ್ಯಸ್ಥ ದೀಪಕ್ ಬೈಜ್ ಕೂಡ ಇದ್ದರು. ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದೆ.












Click it and Unblock the Notifications