ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದಾಗಿ ವಿಶ್ವದಲ್ಲಿ ಭಾರತದ ಹೆಗ್ಗುರುತು: ಕೃಷ್ಣ

ನವದೆಹಲಿಯಲ್ಲಿರುವ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಾರ್ಚ್ 22ರಂದು ಬಿಜೆಪಿಗೆ ವಿದ್ಯುಕ್ತವಾಗಿ ಸೇರಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್.ಎಂ. ಕೃಷ್ಣ.

|
Google Oneindia Kannada News

ನವದೆಹಲಿ, ಮಾರ್ಚ್ 22: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಯೋಜನೆಗಳಿಂದಾಗಿ ವಿಶ್ವ ಭೂಪಟದಲ್ಲಿ ಭಾರತವು ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು, ಇಡೀ ಪ್ರಪಂಚವೇ ಭಾರತದತ್ತ ತಿರುಗು ನೋಡುವಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ, ಬಿಜೆಪಿಯ ನೂತನ ಧುರೀಣ ಎಸ್.ಎಂ. ಕೃಷ್ಣ ತಿಳಿಸಿದ್ದಾರೆ.[ಎಸ್ಎಂ ಕೃಷ್ಣ ಅವರನ್ನು ಗೌರವಯುತವಾಗಿ ನಡೆಸಿಕೊಳ್ಳುತ್ತೇವೆ: ಅಮಿತ್ ಶಾ]

ಬುಧವಾರ (ಮಾರ್ಚ್ 22) ನವದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಬಿಜೆಪಿಗೆ ಸೇರ್ಪಡೆಗೊಂಡ ನಂತರ, ಸುದ್ದಿಗಾರರೊಂದಿಗೆ ಮಾತನಾಡಿದ ಕೃಷ್ಣ, ಮೋದಿ ಹಾಗೂ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಕೊಂಡಾಡಿದರು.[ಬಿಜೆಪಿಗೆ ಕೃಷ್ಣಾಗಮನ, ಶಿಸ್ತಿನ ರಾಜಕಾರಣಿಯ ರಾಜಕೀಯ ಹಿನ್ನೋಟ]

SM Krishna Louds Modi and Amit Shah

ಮೋದಿ ಕೈ ಬಲಪಡಿಸಲು ತಾವು ಬಿಜೆಪಿಗೆ ಸೇರಿರುವುದಾಗಿ ತಿಳಿಸಿದ ಎಸ್.ಎಂ. ಕೃಷ್ಣ, ''ಕಾಂಗ್ರೆಸ್ ನಲ್ಲಿದ್ದಾಗಲೇ ಮೋದಿಯವರ ನೋಟು ನಿಷೇಧದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದೆ. ಇಂಥ ಹಲವಾರು ಆಲೋಚನೆಗಳನ್ನು ಹೊಂದಿರುವ ಮೋದಿಯವರನ್ನು ಬೆಂಬಲಿಸಲು ನಾನು ಬಿಜೆಪಿ ಸೇರಿದ್ದೇನೆ'' ಎಂದು ಅವರು ತಿಳಿಸಿದರು.[ಎಸ್.ಎಂ. ಕೃಷ್ಣ ಅಧಿಕೃತವಾಗಿ ಬಿಜೆಪಿ ಸೇರ್ಪಡೆ]

English summary
Former Chief Minister SM Krishna who joined BJP in New Delhi on March 22, 2017, louded Prime Minister Narendra Modi and BJP National President Amit Shah. He said that, India is in devolopment path and grabbed the attension of the world only because of Narendra Modi's dream projects.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X