ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಧ್ಯಪ್ರದೇಶದಲ್ಲಿ ಕಂದಕಕ್ಕೆ ಉರುಳಿದ ಬಸ್, 6 ಮಂದಿ ಸಾವು

ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 28ಕ್ಕೂ ಹೆಚ್ಚು ಯಾತ್ರಿಗಳು ಗಾಯಗೊಂಡಿದ್ದಾರೆ. ದೇಶದ ವಿವಿಧೆಡೆ ಸಂಭವಿಸಿದ ಅಪಘಾತಗಳ ವರದಿ ಇಲ್ಲಿದೆ

By Mahesh
|
Google Oneindia Kannada News

ನವದೆಹಲಿ, ಮೇ 21: ಮಧ್ಯಪ್ರದೇಶದ ದಿಂಡೋರಿ ಜಿಲ್ಲೆಯಲ್ಲಿ ಭಾನುವಾರ ಮುಂಜಾನೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 6 ಮಂದಿ ಸಾವನ್ನಪ್ಪಿದ್ದು, 28ಕ್ಕೂ ಹೆಚ್ಚು ಯಾತ್ರಿಗಳು ಗಾಯಗೊಂಡಿದ್ದಾರೆ. ದೇಶದ ವಿವಿಧೆಡೆ ಸಂಭವಿಸಿದ ಅಪಘಾತಗಳ ವರದಿ ಇಲ್ಲಿದೆ

ಅಮರ್‌ಕಾಂತಕ್‌ ನಲ್ಲಿ ನಡೆದ ನರ್ಮದಾ ಸೇವಾ ಯಾತ್ರೆಯಲ್ಲಿ ಪಾಲ್ಗೊಂಡು ತಮ್ಮಮ್ಮ ಊರುಗಳಿಗೆ ತೆರಳುತ್ತಿದ್ದ ಯಾತ್ರಿಗಳೇ ಹೆಚ್ಚಾಗಿ ಈ ಬಸ್ ನ ಪ್ರಯಾಣಿಕರಾಗಿದ್ದರು. ಸುಮಾರು 40 ಜನ ಯಾತ್ರಿಗಳು ಬಸ್ ನಲ್ಲಿದ್ದರು. ಅಮರ್‌ಕಾಂತಕ್‌ ನಿಂದ ಜಬಲ್ಪುರ್‌‌ ಕಡೆಗೆ ಬಸ್‌ ತೆರಳುವಾಗದ ದಿಂಡೋರಿ ಜಿಲ್ಲೆಯಲ್ಲಿ ತಡರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಬಸ್‌ ಕಂದಕಕ್ಕೆ ಉರುಳಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿದ್ದಾರೆ.

Six killed as bus falls into gorge near Dindori Madhya Pradesh and all accident updates

ಸುಮಾರು 28ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಈ ಪೈಕಿ 7 ಜನರ ಪರಿಸ್ಥಿತಿ ಗಂಭೀರವಾಗಿದೆ. ಈ ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರವನ್ನು ಸಚಿವ ಓಂಪ್ರಕಾಶ್ ಧುರ್ವೆ ಘೋಷಿಸಿದ್ದಾರೆ.

ಮೇ 1 5ರಂದು ನರ್ಮದಾ ಸೇವಾ ಯಾತ್ರೆಗೆ ಯಾತ್ರಿಗಳನ್ನು ಕರೆದೊಯ್ಯುತ್ತಿದ್ದ ಬಸ್‌ ಅಪಘಾತಕ್ಕೀಡಾಗುತ್ತಿರುವುದು ಈ ತಿಂಗಳಿನಲ್ಲಿ ಎರಡನೇ ಬಾರಿಯಾಗಿದೆ. ಮೇ 15ರಂದು ಬಸ್ ಪಲ್ಟಿಯಾಗಿ ಮೂವರು ಸಾವನ್ನಪ್ಪಿದ್ದರು. 40ಕ್ಕೂ ಹೆಚ್ಚು ಯಾತ್ರಿಗಳು ಗಾಯಗೊಂಡಿದ್ದರು.

English summary
Six people have been reported killed while over 20 were injured when a bus carrying them fell into a gorge near Jogitikaria village about five kilometres from the Dindori district head quarters in Madhya Pradesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X