'ಮುಳುಗುತ್ತಿದೆ ಜೋಶಿಮಠ': ಸಾಮಾಜಿಕ ಜಾಲತಾಣದಲ್ಲಿ ಆತಂಕಕಾರಿ ದೃಶ್ಯಗಳು ವೈರಲ್

ಭೂಗರ್ಭದಿಂದ ನೀರು ಹರಿಯುತ್ತಿರುವ ಕಾರಣ ಉತ್ತರಾಖಂಡದ ಪವಿತ್ರ ಪಟ್ಟಣ ಜೋಶಿಮಠವು ಕುಸಿಯುವ ಅಂಚಿನಲ್ಲಿದ್ದು, ಸುಮಾರು 561 ಮನೆಗಳು ಭಾರೀ ಪ್ರಮಾಣದಲ್ಲಿ ಬಿರುಕು ಬಿಟ್ಟಿವೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಫೋಟೋಗಳು ಮತ್ತು ವಿಡಿಯೊಗಳು ಜೋಶಿಮಠ ಪಟ್ಟಣ ಅತ್ಯಂತ ದುರ್ಬಲ ಸ್ಥಿತಿಯಲ್ಲಿ ಇರುವುದನ್ನು ತೋರಿಸಿವೆ.

ಅನೇಕ ಜನರು ತಾವು ನಿರ್ಮಿಸಿದ ತಮ್ಮ ಮನೆಗಳನ್ನು ಮತ್ತು ಅವರ ಕನಸಿನ ಗೂಡುಗಳನ್ನು ಕಳೆದುಕೊಳ್ಳುವ ಆತಂಕದಲ್ಲಿ ಇದ್ದಾರೆ. ಮಾತ್ರವಲ್ಲದೆ ಅನೇಕರು ತಮ್ಮ ಒಡೆದ ಮನೆಗಳಲ್ಲಿ ಪ್ರಾಣವನ್ನು ಪಣಕ್ಕಿಟ್ಟು ವಾಸಿಸುತ್ತಿದ್ದಾರೆ. ಹಲವಾರು ಕುಟುಂಬಗಳು ತಮ್ಮ ಮನೆಗಳಿಂದ ಬೇರೆ ಬೇರೆ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಆತಂಕದಲ್ಲಿ ಜನ ಜೀವನ

ಆತಂಕದಲ್ಲಿ ಜನ ಜೀವನ

ಜೋಶಿಮಠದ ಮನೆಗಳಲ್ಲಿ ಬಿರುಕು ಪ್ರತಿ ಗಂಟೆಗೆ ಹೆಚ್ಚುತ್ತಿದ್ದು ಆತಂಕದಲ್ಲೇ ಜನ ಜೀವನ ದೂಡುತ್ತಿದ್ದಾರೆ. "ಈಗ ಸಿಂಘಧಾರ್ ಮತ್ತು ಮಾರ್ವಾಡಿಯಲ್ಲಿ ಬಿರುಕುಗಳನ್ನು ಹೆಚ್ಚಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಸಿಂಘಧರ್ ಜೈನ್ ಪ್ರದೇಶದ ಬಳಿಯ ಬದರಿನಾಥ್ ಎನ್‌ಎಚ್ ಮತ್ತು ಮಾರ್ವಾಡಿಯ ಜೆಪಿ ಕಂಪನಿ ಗೇಟ್, ಅರಣ್ಯ ಇಲಾಖೆ ಚೆಕ್ ಪೋಸ್ಟ್ ಬಳಿ ನಿರಂತರವಾಗಿ ಮನೆಗಳು ಬಿರುಕು ಬಿಡುತ್ತಿದೆ. ಪ್ರತಿ ಗಂಟೆಗೆ ಈ ಬಿರುಕು ಹೆಚ್ಚುತ್ತಿದ್ದು, ಇದು ಆತಂಕಕಾರಿಯಾಗಿದೆ' ಎಂದು ಜೋಶಿಮಠ ಪುರಸಭೆ ಅಧ್ಯಕ್ಷ ಶೈಲೇಂದ್ರ ಪವಾರ್ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.

ಬದರಿನಾಥ ಹೆದ್ದಾರಿ ತಡೆದು ಪ್ರತಿಭಟನೆ

ಜೋಶಿಮಠದ ಮಾರ್ವಾಡಿ ವಾರ್ಡ್‌ನ ಜೆಪಿ ಕಾಲೋನಿಯಲ್ಲಿಯೂ ಭೂಗರ್ಭದಿಂದ ನೀರು ಹರಿದಿರುವ ಪ್ರಕರಣಗಳನ್ನು ಜಿಲ್ಲಾ ವಿಪತ್ತು ನಿರ್ವಹಣಾ ಇಲಾಖೆ ವರದಿ ಮಾಡಿದೆ. ಸುನೀಲ್ ವಾರ್ಡ್‌ನ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಬಿರುಕುಗಳು ಹೆಚ್ಚುತ್ತಿದ್ದು, ಇದರಿಂದ ಜನರು ನಡೆದಾಡಲು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. ಜೋಶಿಮಠದಲ್ಲಿ ಭೂಮಿ ಮುಳುಗಡೆ ಮುಂದುವರಿದ ನಂತರ, ಜಿಲ್ಲಾ ಮ್ಯಾಜಿಸ್ಟ್ರೇಟ್ ಚಮೋಲಿ ಅವರು ಜಂಟಿ ಮ್ಯಾಜಿಸ್ಟ್ರೇಟ್ ದೀಪಕ್ ಸೈನಿ ಅವರನ್ನು ಜೋಶಿಮಠಕ್ಕೆ ನಿಯೋಜಿಸಿದ್ದಾರೆ.

ರವಿಗ್ರಾಮದಲ್ಲಿ 153, ಗಾಂಧಿನಗರದಲ್ಲಿ 127, ಮನೋಹರಬಾಗ್‌ನಲ್ಲಿ 71, ಸಿಂಗ್‌ಧಾರ್‌ನಲ್ಲಿ 52, ಪರ್ಸಾರಿಯಲ್ಲಿ 50, ಮೇಲ್ಬಜಾರ್‌ನಲ್ಲಿ 29, ಸುನೀಲ್‌ನಲ್ಲಿ 27, ಮಾರ್ವಾಡಿಯಲ್ಲಿ 28 ಮತ್ತು ಕೆಳಗಡೆ 24 ಸೇರಿದಂತೆ ಪಟ್ಟಣದ ವಿವಿಧ ಪ್ರದೇಶಗಳಲ್ಲಿ 560 ಕ್ಕೂ ಹೆಚ್ಚು ಮನೆಗಳು ಬಿರುಕು ಬಿಟ್ಟಿವೆ. ಜೋಶಿಮಠ್ ಪಟ್ಟಣದಲ್ಲಿ ಭೀತಿ ಆವರಿಸಿದ್ದು, ಹಲವರು ಬದರಿನಾಥ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ್ದಾರೆ.

'ಮುಳುಗುತ್ತಿದೆ ಜೋಶಿಮಠ'

'ಮುಳುಗುತ್ತಿದೆ ಜೋಶಿಮಠ'

ಉತ್ತರಾಖಂಡ್‌ನ ಚಮೋಲಿ ಜಿಲ್ಲೆಯಲ್ಲಿ 6,000 ಅಡಿ ಎತ್ತರದಲ್ಲಿರುವ ಜೋಶಿಮಠ, ಬದರಿನಾಥ್ ಮತ್ತು ಹೇಮಕುಂಡ್ ಸಾಹಿಬ್‌ಗೆ ಹೋಗುವ ಮಾರ್ಗದಲ್ಲಿ, ಹೆಚ್ಚಿನ ಅಪಾಯದ ಭೂಕುಸಿತ ಬಿರುಕನ್ನು ಉಂಟು ಮಾಡಿದೆ. ಹೆಚ್ಚಿನ ಅಪಾಯದ 'ಝೋನ್-ವಿ' ಯಲ್ಲಿ ತಜ್ಞರ ತಂಡವನ್ನು ಸಹ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮನೆಗಳಿಗೆ ಆಗಿರುವ ಹಾನಿಯ ಪ್ರಮಾಣ ಭಿನ್ನವಾಗಿದ್ದು, ಇಲ್ಲಿಯವರೆಗೆ ಹೆಚ್ಚು ಹಾನಿಗೊಳಗಾದ ಮನೆಗಳ 29 ಕುಟುಂಬಗಳನ್ನು ಪಟ್ಟಣದಿಂದ ತಾತ್ಕಾಲಿಕವಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿ ಎನ್‌ಕೆ ಜೋಶಿ ತಿಳಿಸಿದ್ದಾರೆ. ಅಗತ್ಯವಿದ್ದರೆ ಇನ್ನಷ್ಟು ಕುಟುಂಬಗಳನ್ನು ಸ್ಥಳಾಂತರಿಸಬಹುದು ಎಂದು ಹೇಳಿದ್ದಾರೆ.

ಮನೆ ಕುಸಿಯುವ ಅಪಾಯ

ಜೋಶಿಮಠದಲ್ಲಿ ಚಳಿಗಾಲ ಮತ್ತು ಭೂಕುಸಿತದಿಂದ ಮನೆ ಕುಸಿಯುವ ಅಪಾಯ ಈಗ ದೊಡ್ಡ ಆತಂಕವಾಗಿದೆ. ಜೋಶಿಮಠ ಪಟ್ಟಣದ ಒಂಬತ್ತು ವಾರ್ಡ್‌ಗಳು ಭೂಕುಸಿತದಿಂದ ಭಾರಿ ಹಾನಿಗೊಳಗಾಗಿವೆ. ನಗರ ಪ್ರದೇಶದ ಮನೆಗಳ ಗೋಡೆಗಳು ಮತ್ತು ಮಹಡಿಗಳಲ್ಲಿನ ಬಿರುಕುಗಳು ದಿನದಿಂದ ದಿನಕ್ಕೆ ಆಳವಾಗುತ್ತಿದ್ದು, ಜನರಲ್ಲಿ ಎಚ್ಚರಿಕೆಯ ಗಂಟೆಯಾಗಿವೆ. ಭೂ ಕುಸಿತದಿಂದಾಗಿ ಆ ಪ್ರದೇಶದ ಮನೆಗಳಲ್ಲಿ ದೊಡ್ಡ ಬಿರುಕುಗಳು ಕಾಣಿಸಿಕೊಂಡವು, ಇದನ್ನು ಒಂದು ಪ್ರದೇಶದಲ್ಲಿ ಭೂಮಿ ಲಂಬವಾಗಿ ಮುಳುಗುವುದು ಎಂದು ಕರೆಯಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+