ನವದೆಹಲಿ: ಏಮ್ಸ್ ಆಸ್ಪತ್ರೆ ಆವರಣದಲ್ಲಿ ಪ್ಲಾಸ್ಟಿಕ್ ಬಳಕೆ ಅವಕಾಶ ಇಲ್ಲ
ಬೆಂಗಳೂರು, ಡಿಸೆಂಬರ್ 21: ರಾಷ್ಟ್ರ ರಾಜಧಾನಿ ದೆಹಲಿಯ ಏಮ್ಸ್ ಆಸ್ಪತ್ರೆ ಆವರಣಕ್ಕೆ ಇನ್ನು ಮುಂದೆ ಒಂದು ಭಾರಿ (ಏಕ) ಬಳಕೆಯಾಗುವ ಪ್ಲಾಸ್ಟಿಕ್‌ಗಳನ್ನು ತರುವಂತಿಲ್ಲ. ಹೀಗೆಂದು ಬುಧವಾರ ಆದೇಶ ಹೊರಡಿಸಲಾಗಿದೆ.
ಆಸ್ಪತ್ರೆ ಆವರಣದಲ್ಲಿ ಏಕಬಳಕೆ ಪ್ಲಾಸ್ಟಿಕ್ ನಿಷೇಧಿಸಿ ಬುಧವಾರ ದೆಹಲಿಯ ಏಮ್ಸ್ ಆಡಳಿತ ಮಂಡಳಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳಿಗೆ ಅನುಸಾರ ಆದೇಶ ಹೊರಡಿಸಿದೆ. ಡಾ. ಶ್ರೀನಿವಾಸ್ ಅವರು ಹೊರಡಿಸಿದ ಕಚೇರಿ ಮೆಮೊ ಪ್ರಕಾರ, ಏಕ-ಬಳಕೆಯ ಪ್ಲಾಸ್ಟಿಕ್ (ಎಸ್‌ಯುಪಿ) ಬಳಕೆ ಜೊತೆಗೆ ಎಸ್‌ಯುಪಿ ವಸ್ತುಗಳನ್ನು ನಿಷೇಧಿಸಲು ಏಮ್ಸ್ ತಿಳಿಸಿದೆ.
ರಾಷ್ಟ್ರೀಯ ಪ್ಲಾಸ್ಟಿಕ್ ತ್ಯಾಜ್ಯದ ಉತ್ಪಾದನೆಯನ್ನು ಕಡಿಮೆ ಮಾಡಬೇಕಿದೆ. ಏಕ-ಬಳಕೆಯ ಪ್ಲಾಸ್ಟಿಕ್ ಅನ್ನು ನಿಷೇಧಿಸುವ ಮುಖೇನ ತ್ಯಾಜ್ಯ ನಿರ್ವಹಣೆಯ ಮೂಲಸೌಕರ್ಯವನ್ನು ಬಲಪಡಿಸಬೇಕಿದೆ. ಭಾರತದ ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯು 2015ರ ನಂತರ ಎರಡು ಪಟ್ಟು ಅಂದರೆ ವಾರ್ಷಿಕವಾಗಿ ಶೇ. 21.8ರಷ್ಟು ಹೆಚ್ಚಳವಾಗಿದೆ. ಭಾರತವು ವಾರ್ಷಿಕವಾಗಿ 3.5 ಮಿಲಿಯನ್ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಿಸುತ್ತದೆ ಎಂದು ಸಂಶೋಧನೆಗಳ ವರದಿಯೊಂದು ತಿಳಿಸಿದೆ.

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ (ತಿದ್ದುಪಡಿ) ನಿಯಮಗಳು, 2021 ರ ಅನುಷ್ಠಾನವು ಜುಲೈ 1, 2022 ರಂದು, ಭಾರತ ಸರ್ಕಾರವು ಏಕ-ಬಳಕೆಯ ಪ್ಲಾಸ್ಟಿಕ್ (SUP) ವಸ್ತುಗಳ ಉತ್ಪಾದನೆ, ಆಮದು, ದಾಸ್ತಾನು, ಮಾರಾಟ, ವಿತರಣೆ ಮತ್ತು ಬಳಕೆಯನ್ನು ನಿಷೇಧಿಸಲು ಪ್ರಯತ್ನಿಸಿದೆ.

ಏಕಬಳಕೆ ಪ್ಲಾಸ್ಟಿಕ್‌ನಿಂದ ತ್ಯಾಜ್ಯ ಅಧಿಕ
ಈ ಏಕಬಳಕೆಯ ಪ್ಲಾಸ್ಟಿಕ್‌ಗಳು ಕಡಿಮೆ ಉಪಯುಕ್ತತೆ ಹೊಂದಿದ್ದು, ಹೆಚ್ಚಿನ ತ್ಯಾಜ್ಯ ಉತ್ಪಾದನೆಗೆ ಕಾರಣವಾಗಿವೆ. ನಿಯಮದ ಪ್ರಕಾರ 50 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ನಿಷೇಧಿಸಲಾಗಿದೆ. ಅನೇಕ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಗುರುತಿಸಲಾದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ಸಹ ನಿಷೇಧಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ನಿಯಮ (2016) ಗಳಿಗೆ ತಿದ್ದುಪಡಿ ತರಲು ಸಚಿವಾಲಯ 2021ರ ಮಾರ್ಚ್ನಲ್ಲಿ ಕರಡು ಅಧಿಸೂಚನೆ ಹೊರಡಿಸಿತ್ತು. 12 ವಿಧದ ಏಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳು ಈ ಅಧಿಸೂಚನೆ ವ್ಯಾಪ್ತಿಗೆ ಬರುತ್ತವೆ ಎನ್ನಲಾಗಿದೆ.












Click it and Unblock the Notifications