Birth Certificate: ಜನನ ಪ್ರಮಾಣ ಪತ್ರದಲ್ಲಿ ಮಹತ್ವದ ಬದಲಾವಣೆ: RGI ಸೂಚನೆ ಏನು, ಇಲ್ಲಿದೆ ಮಾಹಿತಿ!
Birth Certificate: ಜನನ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಹತ್ವದ ಆದೇಶವೊಂದನ್ನು ಮಾಡಿದೆ. ಇದು ದೇಶದ ಜನನ ಪ್ರಮಾಣ ಪತ್ರ ಪ್ರಕ್ರಿಯೆಯಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ ಎಂದೇ ಹೇಳಲಾಗುತ್ತಿದೆ. ಭಾರತದ ರಿಜಿಸ್ಟ್ರಾರ್ ಜನರಲ್ (RGI) ಈ ನಿರ್ದೇಶನ ನೀಡಲಾಗಿದೆ. ಜನನ ಪ್ರಮಾಣ ಪತ್ರವು ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದೀಗ ಈ ದಾಖಲೆಗಳನ್ನು ಅತ್ಯಂತ ಬೇಗ ನೀಡಬೇಕು ಎನ್ನುವ ನಿಟ್ಟಿನಲ್ಲಿ ವಿಶೇಷ ಸೂಚನೆ ನೀಡಲಾಗಿದೆ.
ದೇಶದ ಎಲ್ಲಾ ರಾಜ್ಯಗಳಲ್ಲೂ ನವಜಾತ ಶಿಶು ಹಾಗೂ ತಾಯಂದಿರು ಆಸ್ಪತ್ರೆಗಳಿಂದ ಹಾಗೂ ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ (ಬಿಡುಗಡೆಯಾಗುವ) ಮೊದಲು ಜನನ ಪ್ರಮಾಣಪತ್ರವನ್ನು ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಇದು ಮಹತ್ವದ ಸೂಚನೆಯಾಗಿದೆ. ಜನನ ನೋಂದಣಿ ಪ್ರಕ್ರಿಯೆ ಪೂರ್ಣಗೊಂಡ ಕೂಡಲೇ ಏಳು ದಿನಗಳ ನಂತರ ಎಲೆಕ್ಟ್ರಾನಿಕ್ ಅಥವಾ ಇತರ ಸ್ವರೂಪದಲ್ಲಿ ರಿಜಿಸ್ಟ್ರಾರ್ ಜನನ ಪ್ರಮಾಣಪತ್ರವನ್ನು ನೀಡಬೇಕು ಕೊಡಬೇಕು ಎಂದು ಆರ್‌ಜಿಐ ನಿಂದ ಸೂಚನೆ ನೀಡಲಾಗಿದೆ.

ಇನ್ನು ಈಚೆಗೆ ಜನನ ಪ್ರಮಾಣಪತ್ರದಲ್ಲಿ ಒಮ್ಮೆ ನಮೂದಿಸಿದ ಹೆಸರನ್ನು ಮತ್ತೆ ಬದಲಾವಣೆ ಮಾಡುವುದಕ್ಕೆ ಅವಕಾಶ ಕಲ್ಪಿಸುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ಮಾಡಲಾಗಿತ್ತು. ಜನನ ನೋಂದಣಿ ಪ್ರಕ್ರಿಯೆಯನ್ನು ಸುಗಮ ಹಾಗೂ ಬಳಕೆದಾರ ಸ್ನೇಹಿಯನ್ನಾಗಿ ಮಾಡುವ ಉದ್ದೇಶದಿಂದ ಕೊಲವೊಂದು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ. ಜನನ ಮತ್ತು ಮರಣಗಳ ನೋಂದಣಿ ಕಾಯ್ದೆ 1969ಕ್ಕೆ ತಿದ್ದುಪಡಿ ತರಲಾಗಿದೆ.
ರಾಜ್ಯ ಜನನ ಮತ್ತು ಮರಣ ನೋಂದಣಿ ನಿಯಮಗಳಿಗೆ ಅನುಗುಣವಾಗಿ ತಿದ್ದುಪಡಿ ಹಾಗೂ ಹೊಸ ಕೇಂದ್ರ ಸಿಆರ್‌ಎಸ್ ಪೋರ್ಟಲ್ ಅಭಿವೃದ್ಧಿಯನ್ನು ಸಹ ಮಾಡಲಾಗಿದೆ. ಇದೀಗ ತಾಯಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮುಂಚೆ ಶಿಶುವಿನ ಜನನ ಪ್ರಮಾಣ ಪತ್ರ ನೀಡಬೇಕು ಎಂದು ಸೂಚಿಸಲಾಗಿದೆ.
ಜನನ ಪ್ರಮಾಣಪತ್ರದ ಮಹತ್ವವನ್ನು ಗಮನದಲ್ಲಿ ಇರಿಸಿಕೊಂಡು ನವಜಾತ ಶಿಶುವಿನ ತಾಯಿ ಆಸ್ಪತ್ರೆಯಿಂದ ಬಿಡುಗಡೆಯಾಗುವ ಮೊದಲು ಪ್ರಮಾಣಪತ್ರವನ್ನು ಕೊಡಬೇಕು. ಮುಖ್ಯವಾಗಿ ದೇಶದಲ್ಲಿ ಶೇ 50 ಕ್ಕೂ ಹೆಚ್ಚು ಹೆರಿಗೆಗಳು ಆಗುವ ಅಥವಾ ಮಕ್ಕಳು ಜನಿಸುವ ಸರ್ಕಾರಿ (ದೇಶದ ಎಲ್ಲಾ ಸರ್ಕಾರಿ ಆಸ್ಪತ್ರೆಗಳು) ಆಸ್ಪತ್ರೆಗಳಲ್ಲೂ ಈ ನಿಯಮ ಅನುಸರಿಸಬೇಕು ಎಂದು ಹೇಳಲಾಗಿದೆ.
ಯಾಕೆ ಈ ಮಹತ್ವದ ಬದಲಾವಣೆ: ಇನ್ನು ಕೇಂದ್ರ ಸರ್ಕಾರವು ಜನನ ಪ್ರಮಾಣ ಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ಮಹತ್ವದ ಬದಲಾವಣೆಯನ್ನು ಮಾಡಿರುವ ಹಿಂದೆ ಮಹತ್ವದ ಉದ್ದೇಶವಿದೆ. ಒಂದು ಎಲ್ಲಾ ನವಜಾತ ಶಿಶುಗಳಿಗೂ ಜನನ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸುವುದು ಮತ್ತೊಂದು ಜನನ ರಿಜಿಸ್ಟ್ರೇಷನ್ ಕಡ್ಡಾಯ ಮಾಡುವುದು. ಇದೇ ವರ್ಷ ಅನೇಕ ವೈದ್ಯಕೀಯ ಸಂಸ್ಥೆಗಳು ಕಾನೂನನ್ನು ಉಲ್ಲಂಘಿಸುತ್ತಿರುವುದು ವರದಿಯಾಗಿತ್ತು.
ದೇಶದಲ್ಲಿ ಸುಮಾರು ಶೇ 10% ಶಿಶುಗಳ ಜನನ ನೋಂದಾಯಿಸಲ್ಪಡುತ್ತಿಲ್ಲ ಎಂದು ಹೇಳಲಾಗಿತ್ತು. ಈ ವಿಷಯ ಬೆಳಕಿಗೆ ಬಂದ ಮೇಲೆ ಆರ್‌ಜಿಐ ಮಹತ್ವದ ಆದೇಶ ಮಾಡಿದೆ. ದೇಶದ ಎಲ್ಲಾ ರಾಜ್ಯಗಳ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ಜನನ ಮತ್ತು ಮರಣಕ್ಕೆ ಸಂಬಂಧಿಸಿದಂತೆ 21 ದಿನಗಳ ಒಳಗೆ ವರದಿ ಮಾಡುವಂತೆ ಎಚ್ಚರಿಕೆ ನೀಡಲಾಗಿತ್ತು.












Click it and Unblock the Notifications