Sidhu Moosewala: ಕೆನಡಾ ವಾಂಟೆಂಡ್ ಲಿಸ್ಟ್‌ನಲ್ಲಿ ಸಿಧು ಮೂಸೆವಾಲಾ ಹತ್ಯೆ ಆರೋಪಿ ಗೋಲ್ಡಿ ಬ್ರಾರ್
ಚಂಡೀಗಡ ಮೇ 2: ಜನಪ್ರಿಯ ಪಂಜಾಬಿ ಗಾಯಕ ಸಿಧು ಮೂಸ್ ವಾಲಾ ಅವರ ಹತ್ಯೆಯ ಪ್ರಮುಖ ಸಂಚುಕೋರ ಎಂದು ಹೇಳಲಾದ ಗ್ಯಾಂಗ್‌ಸ್ಟರ್ ಗೋಲ್ಡಿ ಬ್ರಾರ್ ಅವರನ್ನು ಕೆನಡಾದ ಟಾಪ್ 25 ಮೋಸ್ಟ್ ವಾಂಟೆಡ್ ಪರಾರಿಯಾದವರ ಪಟ್ಟಿಗೆ ಸೇರಿಸಲಾಗಿದೆ.
ಸಿಧು ಮೂಸೆವಾಲಾ ಹತ್ಯೆಯ ಆರೋಪಪಟ್ಟಿಯಲ್ಲಿ ನಮೂದಿಸಿರುವ 15 ಶೂಟರ್‌ಗಳು, ಮಾಸ್ಟರ್‌ಮೈಂಡ್‌ಗಳು ಮತ್ತು ಇತರರಲ್ಲಿ ಗೋಲ್ಡಿ ಬ್ರಾರ್ ಹೆಸರು ಸೇರಿದೆ. ಈತನನ್ನು ಪಂಜಾಬ್ ಪೊಲೀಸರು ಹುಡುಕುತ್ತಿದ್ದಾರೆ.

ಸಿಧು ಮೂಸೆವಾಲಾ ಎಂಬ ಹೆಸರಿನಿಂದ ಜನಪ್ರಿಯರಾಗಿದ್ದ ಗಾಯಕ ಶುಭದೀಪ್ ಸಿಂಗ್ ಸಿಧು ಅವರನ್ನು ಪಂಜಾಬ್‌ನ ಮನ್ಸಾ ಜಿಲ್ಲೆಯಲ್ಲಿ ಮೇ 29ರಂದು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಮೂಸೆವಾಲ (29) ತನ್ನ ಇಬ್ಬರು ಸ್ನೇಹಿತರೊಂದಿಗೆ ಜೀಪಿನಲ್ಲಿ ಪ್ರಯಾಣಿಸುತ್ತಿದ್ದಾಗ ಗ್ರಾಮದ ಜವಾಹರ್ ಕೆ ಎಂಬಲ್ಲಿ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ. ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ತಂಡದ ಸದಸ್ಯ ಸತೀಂದರ್ಜಿತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ಸಿಧು ಹತ್ಯೆಯ ಹೊಣೆ ಹೊತ್ತಿದ್ದಾನೆ.
ಗೋಲ್ಡಿ ಬ್ರಾರ್ ಕೆನಡಾದಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು ಸಾರ್ವಜನಿಕ ಸುರಕ್ಷತೆಗೆ ಅಪಾಯವನ್ನು ಸೂಚಿಸುತ್ತದೆ ಎಂದು ಒಟ್ಟಾವಾ ಇಂಟರ್‌ಪೋಲ್ ಹೇಳಿದೆ. ಭಾರತದಲ್ಲಿ ಅವರು ಮಾಡಿದ ಅಪರಾಧಗಳು ತುಂಬಾ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ತಪ್ಪಿಸಿಕೊಂಡ ಸಿಧು ಮೂಸೆವಾಲಾ ಹತ್ಯೆ ಆರೋಪಿ ಗೋಲ್ಡಿ ಬ್ರಾರ್ ಅವರ ಪತ್ತೆಗೆ ರಾಯಲ್ ಕೆನಡಿಯನ್ ಮೌಂಟೆಡ್ ಪೋಲೀಸ್ (RCMP) ತನಿಖೆ ನಡೆಸಿದ್ದಾರೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಈ ಹತ್ಯಗೆ ಸಂಬಂಧಿಸಿದಂತೆ ಹಲವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪೈಕಿ ಇಬ್ಬರನ್ನು ಫೆಬ್ರವರಿಯಲ್ಲಿ ಬಂಧಿಸಲಾಗಿತ್ತು. ಆದರೆ ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾಗಿದ್ದ ಇಬ್ಬರು ದರೋಡೆಕೋರರಾದ ಮನದೀಪ್ ತೂಫಾನ್ ಮತ್ತು ಮನಮೋಹನ್ ಸಿಂಗ್ ಅವರನ್ನು ಗೋಯಿಂಡ್ವಾಲ್ ಸಾಹಿಬ್ ಜೈಲಿನಲ್ಲಿ ಹತ್ಯೆ ಮಾಡಲಾಗಿದೆ.

ಸಿಧು ಮೂಸೆವಾಲಾ ಯಾರು?
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅಲಿಯಾಸ್ ಶುಭದೀಪ್ ಸಿಂಗ್ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಜನಪ್ರಿಯತೆಯನ್ನು ಪಡೆದವರು. ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಮಾಡಿದ ಅವರು ಪಂಜಾಬಿ ಹಾಡುಗಾರಿಕೆಯಲ್ಲಿ ಕೇಳುಗರ ಹೃದಯವನ್ನು ಗೆದ್ದಿದ್ದರು. ಹಲವು ವಿವಾದಗಳಲ್ಲಿ ಸಿಲುಕ್ಕಿದ್ದ ಸಿಧು ಮೂಸೆವಾಲಾ ವಿರುದ್ಧ ಹಲವು ಕ್ರಿಮಿನಲ್ ಪ್ರಕರಣಗಳೂ ದಾಖಲಾಗಿದ್ದವು. ಆದರೆ ಅವರ ಜನಪ್ರಿಯತೆ ಮಾತ್ರ ಕಡಿಮೆಯಾಗಿರಲಿಲ್ಲ. ಹೀಗಾಗಿನೇ ಕಳೆದ ಪಂಜಾಬ್ ಚುನಾವಣೆಯಲ್ಲಿ ಕಾಂಗ್ರೆಸ್ ಅವರಿಗೆ ಚುನಾವಣಾ ಟಿಕೆಟ್ ನೀಡಿ ಗೆಲ್ಲುವ ಪಣತೊಟ್ಟಿತ್ತು. ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಅಪರಿಚಿತ ಹಂತಕರ ಗುಂಡಿಗೆ ಬಲಿಯಾದ ಸಿಧು ಮುಸೇವಾಲಾ ಯಾರು ಎಂದು ತಿಳಿಯಿರಿ.
17 ಜೂನ್ 1993 ರಂದು ಜನಿಸಿದ ಮೂಸೆವಾಲಾ ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿರುವ ಮೂಸೆವಾಲಾ ಗ್ರಾಮಕ್ಕೆ ಸೇರಿದವರು. ಮೂಸೆವಾಲಾ ಅವರ ತಾಯಿ ಚರಣ್ ಕೌರ್ ಪ್ರಸ್ತುತ ಜವಾಹರ್ಕೆ ಗ್ರಾಮದ ಮುಖ್ಯಸ್ಥರಾಗಿದ್ದಾರೆ. ಅವರ ನಿಜವಾದ ಹೆಸರು ಶುಭದೀಪ್ ಸಿಂಗ್. ಅವರು ಭಾರತೀಯ ಗಾಯಕ, rapper, ಗೀತರಚನೆಕಾರ ಮತ್ತು ಪಂಜಾಬಿ ಸಂಗೀತ ಮತ್ತು ಪಂಜಾಬಿ ಸಿನಿಮಾದೊಂದಿಗೆ ಸಂಬಂಧ ಹೊಂದಿರುವ ನಟ. ಮೂಸ್‌ವಾಲಾ ಅವರ ರಾಪ್ ಹಾಡುಗಳಿಗೆ ವ್ಯಾಪಕವಾಗಿ ಹೆಸರುವಾಸಿಯಾಗಿದ್ದಾರೆ. ಅವರ ವಿವಾದಾತ್ಮಕ ಹಾಡುಗಳ ಶೈಲಿಯಿಂದಾಗಿ ಅವರು ಚರ್ಚೆಯಲ್ಲಿದ್ದರು. ಆಗಾಗ್ಗೆ ಬಂದೂಕು ಸಂಸ್ಕೃತಿಗಳನ್ನು ಉತ್ತೇಜಿಸುತ್ತಿದ್ದರು ಮತ್ತು ಧಾರ್ಮಿಕ ಭಾವನೆಗಳನ್ನು ನೋಯಿಸುವ ಆರೋಪಗಳಿದ್ದವು.
ಸಿಧು ಮೂಸೆವಾಲಾ ಮೇಲೆ ಗುಂಡಿನ ದಾಳಿ
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಅವರು ಪಂಜಾಬ್ ವಿಧಾನಸಭಾ ಚುನಾವಣೆ ಘೋಷಣೆಯಾಗುವ ಮುನ್ನವೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದರು. ಅವರು ಕಳೆದ ಚುನಾವಣೆಯಲ್ಲಿ ಮಾನ್ಸಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು, ಆದರೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಡಾ ವಿಜಯ್ ಸಿಂಗ್ಲಾ ವಿರುದ್ಧ ಸೋತರು. ಸಿಂಗ್ಲಾ ಅವರು ಭಗವಂತ್ ಸಿಂಗ್ ಮಾನ್ ಸರ್ಕಾರದಲ್ಲಿ ಸಚಿವರಾದರು. ಆದರೆ ಇತ್ತೀಚೆಗೆ ಭ್ರಷ್ಟಾಚಾರದ ಆರೋಪದ ಮೇಲೆ ವಜಾಗೊಳಿಸಲಾಗಿದೆ.
ಮುಸೇವಾಲಾ ಅವರನ್ನು ಮಾನ್ಸಾ ಜಿಲ್ಲೆಯಲ್ಲಿಯೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಜನಪ್ರಿಯ ಪಂಜಾಬಿ ಗಾಯಕನನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು, ಆದರೆ ಅಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಲಾಯಿತು. ಅತ್ಯಂತ ಗಂಭೀರವಾದ ವಿಷಯವೆಂದರೆ ಪಂಜಾಬ್‌ನ ಆಮ್ ಆದ್ಮಿ ಪಕ್ಷವು ಒಂದು ದಿನದ ಹಿಂದೆ ಅವರ ಭದ್ರತೆಯನ್ನು ಕಸಿದುಕೊಂಡಿತ್ತು ಮತ್ತು ನಂತರದ ನಡೆದ ದಾಳಿಯಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.












Click it and Unblock the Notifications