ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿದ್ದ ಯೋಧರ ಸಾವು

Posted By:
Subscribe to Oneindia Kannada

ನವದೆಹಲಿ, ಫೆಬ್ರವರಿ 04 : ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿರುವ ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಸಂಭವಿಸಿದ ಹಿಮಪಾತದಲ್ಲಿ ಸಿಲುಕಿದ್ದ 10 ಭಾರತೀಯ ಯೋಧರು ಅಸುನೀಗಿದ್ದಾರೆ. ಸಹಸ್ರಾರು ಜನರ ಪ್ರಾರ್ಥನೆಯ ನಡುವೆ ಯೋಧರ ಸಾವು ಬರಸಿಡಿಲಿನಂತೆ ಬಂದೆರಗಿದೆ.

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು "ಸಿಯಾಚಿನ್ ನಲ್ಲಿ ಯೋಧರು ಸಾವನ್ನಪ್ಪಿದ್ದು ನಿಜಕ್ಕೂ ದುರಂತ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ನನ್ನ ಸೆಲ್ಯೂಟ್. ಯೋಧರ ಕುಟುಂಬಕ್ಕೆ ಸಾಂತ್ವನ ನೀಡಲು ಬಯಸುತ್ತೇನೆ" ಎಂದು ಟ್ವೀಟಿಸಿ ವಿಷಾದ ವ್ಯಕ್ತಪಡಿಸಿದ್ದಾರೆ.


ಅತ್ಯಾಧುನಿಕ ಸಲಕರಣೆಗಳನ್ನು ಹಿಡಿದುಕೊಂಡು ಯೋಧರ ಶೋಧಕ್ಕೆ ತಜ್ಞರ ತಂಡ ಲೇಹ್‌ಗೆ ಗುರುವಾರ ಧಾವಿಸಿತ್ತು. ಶ್ವಾನ ದಳದ ಸಹಾಯದಿಂದ ಯೋಧರ ಹುಡುಕಾಟ ನಡೆಸಲಾಯಿತಾದರೂ, ಮೈನಸ್ 60 ಡಿಗ್ರಿ ತಾಪಮಾನದಲ್ಲಿ ಅವರು ಬದುಕುಳಿಯುವುದು ಕಷ್ಟಕರ ಎಂದು ಸೇನಾಧಿಕಾರಿಗಳು ಹೇಳಿದ್ದರು.

"ಇದು ದುರಂತದ ಸಂಗತಿ. ವಿಷಮ ಪರಿಸ್ಥಿತಿಗಳನ್ನು, ಅಸಾಧ್ಯ ಸವಾಲುಗಳನ್ನು ಎದುರಿಸುತ್ತ ಕರ್ತವ್ಯದಲ್ಲಿರುವಾಗಲೇ ದೇಶವನ್ನು ರಕ್ಷಿಸುತ್ತ ಸಾವನ್ನಪ್ಪಿದ ಯೋಧರಿಗೆ ನಾವು ಸಲಾಂ ಮಾಡುತ್ತೇವೆ" ಎಂದು ಉತ್ತರ ಕಮಾಂಡ್‌ನ ಸೇನಾ ಕಮಾಂಡರ್ ಲೆ.ಜ. ಡಿ.ಎಸ್. ಹೂಡಾ ಅವರು ಸಂದೇಶ ರವಾನಿಸಿದ್ದಾರೆ. [ಹಿಮದಡಿ ಸಿಕ್ಕ ವೀರ ಯೋಧರ ಜೀವಕ್ಕಾಗಿ ಪ್ರಾರ್ಥಿಸಿ]

Siachen Avalanche : 10 Indian soldiers meet tragic death

19 ಸಾವಿರ ಅಡಿಗಳ ಎತ್ತರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ, ಮದ್ರಾಸ್ ರೆಜಿಮೆಂಟ್‌ಗೆ ಸೇರಿದ 10 ಯೋಧರು ಬುಧವಾರ ಬೆಳಗಿನ ಜಾವ ಭಾರೀ ಹಿಮಪಾತದಲ್ಲಿ ಸಿಲುಕಿದ್ದರು. ಅವರು ಜೀವಂತವಾಗಿ ವಾಪಸ್ ಬರಲೆಂದು ಸಹಸ್ರಾರು ಭಾರತೀಯರು ಸಾಮಾಜಿಕ ತಾಣದಲ್ಲಿ ನಿರಂತರವಾಗಿ ಪ್ರಾರ್ಥಿಸುತ್ತಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Siachen Avalanche tragedy. The 10 soldiers, who were hit by massive avalanche in Siachen glacier area on Wednesday morning, meet the tragic death. Prime minister Narendra Modi has expressed deep condolences to the family of soldiers.
Please Wait while comments are loading...