Shubman Gill: ಡೇಟಿಂಗ್ ವದಂತಿಗಳ ನಡುವೆ ಸಾರಾ ತೆಂಡೂಲ್ಕರ್ ಮತ್ತು ಶುಭ್‌ಮನ್ ಗಿಲ್ ಐಷಾರಾಮಿ ನಿವಾಸಗಳು ಸಖತ್ ಟ್ರೆಂಡಿಂಗ್

Shubman Gill: ಭಾರತೀಯ ಕ್ರಿಕೆಟ್‌ನ ಸ್ಟಾರ್ ಬ್ಯಾಟರ್ ಶುಭ್‌ಮನ್ ಗಿಲ್ ಮತ್ತು ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ನಡುವೆ ಪ್ರೇಮಾಂಕುರವಾಗಿದೆ ಎಂಬ ಗಾಸಿಪ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಸದಾ ಹರಿದಾಡುತ್ತಲಿರುತ್ತವೆ. ಆದರೆ ಇಬ್ಬರೂ ತಮ್ಮ ಡೇಟಿಂಗ್ ವದಂತಿಗಳ ಕುರಿತು ಅಧಿಕೃತವಾಗಿ ಎಲ್ಲೂ ಬಾಯಿಬಿಡದಿದ್ದರೂ, ಅಭಿಮಾನಿಗಳು ಮಾತ್ರ ಈ ಜೋಡಿಯ ಪ್ರತಿಯೊಂದು ನಡೆಯನ್ನೂ ಅತ್ಯಂತ ಕುತೂಹಲದಿಂದ ಗಮನಿಸುತ್ತಾರೆ. ಈ ನಡುವೆಯೇ ಇದೀಗ ಇವರ ಐಷಾರಾಮಿ ನಿವಾಸಗಳ ಕುರಿತ ಸುದ್ದಿಯೊಂದು ಸಖತ್ ಟ್ರೆಂಡಿಂಗ್‌ನಲ್ಲಿದೆ.

ಒಂದೆಡೆ ಟೀಮ್ ಇಂಡಿಯಾ ಏಕದಿನ, ಟೆಸ್ಟ್‌ ಕ್ರಿಕೆಟ್‌ ತಂಡದ ನಾಯಕ ಶುಭ್‌ಮನ್ ಗಿಲ್ ಅವರು ಚಂಡೀಗಢದಲ್ಲಿ ಸುಮಾರು 3.2 ಕೋಟಿ ರೂಪಾಯಿ ಮೌಲ್ಯದ ಅತ್ಯಾಕರ್ಷಕ ವಿಲ್ಲಾ ಹೊಂದಿದ್ದರೆ, ಮತ್ತೊಂದೆಡೆ ಸಾರಾ ತೆಂಡೂಲ್ಕರ್ ಅವರು ಮುಂಬೈನ ಬಾಂದ್ರಾದಲ್ಲಿರುವ ಸಚಿನ್ ತೆಂಡೂಲ್ಕರ್ ಅವರ ಸುಮಾರು 100 ಕೋಟಿ ರೂಪಾಯಿ ಮೌಲ್ಯದ ಬಂಗಲೆಯಲ್ಲಿ ನೆಲೆಸಿದ್ದಾರೆ. ವಿಚಿತ್ರ ಅಂದ್ರೆ ಪ್ರತ್ಯೇಕ ನಗರಗಳಲ್ಲಿದ್ದರೂ ಈ ಇಬ್ಬರ ನಿವಾಸಗಳ ಆಂತರಿಕ ವಿನ್ಯಾಸ ಮತ್ತು ಶೈಲಿಯಲ್ಲಿ ಅಚ್ಚರಿಯ ಹೋಲಿಕೆಗಳು ಕಂಡುಬರುತ್ತವೆ.

Shubman Gill and Sara Tendulkar s Luxury Homes Villas Gardens and Royal Interiors Huge Viral

ಪ್ರಕೃತಿ ಪ್ರೇಮ ಮತ್ತು ಆಕರ್ಷಕ ಉದ್ಯಾನವನಗಳು..

ಶುಭ್‌ಮನ್ ಗಿಲ್: ಈ ಎರಡೂ ಆಸ್ತಿಗಳಲ್ಲಿ ಕಂಡುಬರುವ ಪ್ರಮುಖ ನಂಟು ಎಂದರೆ ಪ್ರಕೃತಿಗೆ ನೀಡಿರುವ ಆದ್ಯತೆ. ಚಂಡೀಗಢದಲ್ಲಿರುವ ಗಿಲ್ ಅವರ ನಿವಾಸವು ಬೃಹತ್ ಹಸಿರು ಗಾರ್ಡನ್‌ನಿಂದ ಕೂಡಿದೆ. ಅಲ್ಲದೆ, ಸಾಕುಪ್ರಾಣಿಗಳು ಕೂಡ ಇದ್ದು, ಅವುಗಳೊಂದಿಗೆ ಸಮಯ ಕಳೆಯಬಹುದಾಗಿದೆ. ಅಂತಹ ವಾತಾವರಣರವನ್ನು ಕಾಣಬಹುದು.

ಸಾರಾ ತೆಂಡೂಲ್ಕರ್: ಮುಂಬೈನಲ್ಲಿರುವ ಸಾರಾ ತೆಂಡೂಲ್ಕರ್ ಅವರ ಬಂಗಲೆಯೂ ಸಹ ಎತ್ತರದ ತೆಂಗಿನ ಮರಗಳು ಹಾಗೂ ಹೂವಿನ ಗಿಡಗಳನ್ನು ಒಳಗೊಂಡ ಸುಂದರವಾದ ಖಾಲಿ ಜಾಗವನ್ನು ಹೊಂದಿದೆ. ಮೇಲ್ಛಾವಣಿಯಲ್ಲಂತೂ ವರ್ಟಿಕಲ್ ಗಾರ್ಡನ್ ಹಾಗೂ ಯೋಗ ಮಾಡಲು ಪ್ರತ್ಯೇಕ ಜಾಗವನ್ನು ವಿನ್ಯಾಸಗೊಳಿಸಲಾಗಿದೆ. ಹೀಗೆ ಈ ಇಬ್ಬರೂ ಹಸಿರು ವಾತಾವರಣಕ್ಕೆ ನೀಡುವ ಪ್ರೀತಿ ಇಲ್ಲಿ ಎದ್ದು ಕಾಣುತ್ತದೆ.

ಐಷಾರಾಮಿ ಮನೆಗಳ ವಿಶೇಷತೆ

ಮನೆಗಳ ಒಳಾಂಗಣ ವಿನ್ಯಾಸದ ವಿಷಯಕ್ಕೆ ಬಂದರೆ, ಎರಡೂ ನಿವಾಸಗಳಲ್ಲಿ 'ವುಡನ್ ಟಚ್' (ಮರಗಳಿಂದ ಮಾಡಿದ ವಸ್ತುಗಳು) ಪ್ರಮುಖ ಪಾತ್ರ ವಹಿಸಿದೆ. ಗಿಲ್ ಅವರ ಮನೆಯಲ್ಲಿ ಹೊಳೆಯುವ ಮರದ ಶೈಲಿಯ ಫ್ಲೋರಿಂಗ್ ಮತ್ತು ಗೋಲ್ಡನ್ ಲೈಟಿಂಗ್ ವಾತಾವರಣಕ್ಕೆ ಮೆರುಗು ನೀಡಿದ್ದರೆ, ಸಾರಾ ವಾಸಿಸುವ ತೆಂಡೂಲ್ಕರ್ ನಿವಾಸದಲ್ಲಿ ಟೀಕ್ ಮತ್ತು ಮಹಾಗನಿ ಮರದಿಂದ ಮಾಡಿದ ಪೀಠೋಪಕರಣಗಳು, ಎತ್ತರದ ಮರದ ಬಾಗಿಲುಗಳು ಹಾಗೂ ಕಪ್ಪು ಮಾರ್ಬಲ್ ಫ್ಲೋರಿಂಗ್ ಅನ್ನು ಕಾಣಬಹುದು. ರಾಜಮನೆತನದ ಮಾದರಿಯ ಕೊಠಡಿಗಳು ಮತ್ತು ಉತ್ತಮ ಬೆಳಕಿನ ಸಂಯೋಜನೆ ಎರಡೂ ಮನೆಗಳಿಗೆ ರಾಯಲ್ ಲುಕ್ ನೀಡಿದೆ.

ಆರೋಗ್ಯ ಹಾಗೂ ಫಿಟ್‌ನೆಸ್‌ಗೆ ಆದ್ಯತೆ

ಕ್ರೀಡಾ ಹಿನ್ನೆಲೆ ಹಾಗೂ ಫಿಟ್‌ನೆಸ್ ಕಾಳಜಿ ಹೊಂದಿರುವ ಕಾರಣ, ಇಬ್ಬರ ನಿವಾಸಗಳಲ್ಲೂ ದೇದಹ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಗಿಲ್ ತಮ್ಮ ಚಂಡೀಗಢದ ಮನೆಯಲ್ಲಿ ಪ್ರತ್ಯೇಕ 'ಪ್ರೈವೇಟ್ ಜಿಮ್' ಹೊಂದಿದ್ದರೆ, ಸಾರಾ ಅವರ ಬಾಂದ್ರಾ ಬಂಗಲೆಯಲ್ಲಿ ದೈಹಿಕ ದೃಢತೆ ಹಾಗೂ ಯೋಗ ಅಭ್ಯಾಸಕ್ಕಾಗಿ ವಿಶಾಲವಾದ ಜಾಗವನ್ನು ಮೀಸಲಿಡಲಾಗಿದೆ.

ಒಟ್ಟಾರೆಯಾಗಿ ಡೇಟಿಂಗ್ ಗಾಸಿಪ್‌ಗಳಿಂದ ಸದಾ ಸುದ್ದಿಯಲ್ಲಿರುವ ಈ ಯುವ ಜೋಡಿ, ತಮ್ಮ ವೈಯಕ್ತಿಕ ಜೀವನದ ಜೊತೆಗೆ ವಾಸ್ತು ಹಾಗೂ ಅತ್ಯುನ್ನತ ಜೀವನಶೈಲಿಯ ಆಯ್ಕೆಯಲ್ಲೂ ಕ್ರಿಕೆಟ್ ಅಭಿಮಾನಿಗಳ ಮನಸೆಳೆದಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಜೀವನ ಶೈಲಿಯೇ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+