ಪ್ರಧಾನಿ ನಿವಾಸಕ್ಕಿಂತ ಸೋನಿಯಾ ಗಾಂಧಿ ಬಂಗಲೆಯೇ ದೊಡ್ಡದು!

By: ವಿಕಾಸ್ ನಂಜಪ್ಪ
Subscribe to Oneindia Kannada

ನವದೆಹಲಿ, ನವೆಂಬರ್ 2: ಕಾಂಗ್ರೆಸ್ ನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ವಾಸವಿರುವ ಬಂಗಲೆ ಈ ದೇಶದ ಪ್ರಧಾನಿಯ ಅಧಿಕೃತ ನಿವಾಸಕ್ಕಿಂತ ವಿಶಾಲವಾಗಿದೆ. ಇದೀಗ ಹಲವಾರು ಮಂದಿ ಪ್ರಶ್ನೆ ಏನೆಂದರೆ, ಕಾಂಗ್ರೆಸ್ ಅಧ್ಯಕ್ಷೆ ಈ ದೇಶದ ಪ್ರಧಾನಮಂತ್ರಿ ವಾಸವಿರುವುದಕ್ಕಿಂತ ದೊಡ್ಡ ಬಂಗಲೆಯಲ್ಲಿ ಯಾಕಿರಬೇಕು?

ಅಂದಹಾಗೆ, 10-ಜನಪಥ್ ಸೋನಿಯಾ ಗಾಂಧಿಯವರ ಅಧಿಕೃತ ನಿವಾಸ. ಇತ್ತೀಚೆಗೆ ಮಾಹಿತಿ ಹಕ್ಕು ಕಾಯ್ದೆ ಅಡಿ ಸಲ್ಲಿಸಿದ್ದ ಅರ್ಜಿಗೆ ನೀಡಿದ ಉತ್ತರದಲ್ಲಿ ಈ ವಿಚಾರ ಬಹಿರಂಗವಾಗಿದೆ. ದೆಹಲಿಯ ರೇಸ್ ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಮಂತ್ರಿ ನಿವಾಸಕ್ಕಿಂತ 10-ಜನ ಪಥ್ ವಿಶಾಲವಾಗಿದೆ ಎಂಬುದು ಗೊತ್ತಾಗಿದೆ.[ಸೋನಿಯಾ ಗಾಂಧಿ ಅಸ್ವಸ್ಥ, ಮತ್ತೆ ಆಸ್ಪತ್ರೆಗೆ ದಾಖಲು]

ಸೋನಿಯಾ ಗಾಂಧಿ ಅವರ ನಿವಾಸ 15,181 ಚದರ ಮೀಟರ್ ನಲ್ಲಿ ವ್ಯಾಪಿಸಿದ್ದರೆ, ಪ್ರಧಾನಿ ನಿವಾಸ 14,101 ಚದರ ಮೀಟರ್ ನಲ್ಲಿದೆ. ತೆರಿಗೆದಾರರ ಹಣವನ್ನು ಅಧಿಕೃತವಾಗಿ ಯಾವುದೇ ಸ್ಥಾನ ಮಾನ ಹೊಂದದವರಿಗೆ ಬಳಕೆ ಮಾಡುವುದು ಸರಿಯೇ? ಎಂಬ ಪ್ರಶ್ನೆಯೂ ಉದ್ಭವಿಸಿದೆ.

Should Sonia Gandhi live in a bigger house than the PM?

ಸುರಕ್ಷತಾ ಕಾರಣಗಳಿಗಾಗಿ ಸೋನಿಯಾಗಾಂಧಿ ಅವರಿಗೆ ಅಷ್ಟು ದೊಡ್ಡ ಬಂಗಲೆ ಅಗತ್ಯವಿದೆ ಹಾಗೂ ಅಂತರರಾಷ್ಟ್ರೀಯ ಗಣ್ಯರು ಅಲ್ಲಿಗೆ ಬರುತ್ತಾರೆ ಆದ್ದರಿಂದ ಇಂಥ ಬಂಗಲೆ ಅವರಿಗೆ ಬೇಕು ಎಂದು ಈ ಹಿಂದೆ ಹೇಳಲಾಗಿತ್ತು. ಆದರೆ ಈಗಿನ ಪರಿಸ್ಥಿತಿ ಬೇರೆ ಇದೆ.[ನ್ಯಾಷನಲ್ ಹೆರಾಲ್ಡ್ ಆರಂಭಕ್ಕೆ 'ಕೈ' ಮುಂದೆ, ಏನಿದೆ ಹಿಂದೆ?]

ಮೈ ವೋಟ್ ಟುಡೇ ಈ ಬಗ್ಗೆ ಸಮೀಕ್ಷೆಯೊಂದನ್ನು ಮಾಡಿತ್ತು. ನಲವತ್ನಾಲ್ಕು ಸಂಸದರನ್ನು ಹೊಂದಿರುವ, ಕಾಂಗ್ರೆಸ್ ಅಧ್ಯಕ್ಷೆ ಅಧಿಕೃತ ಬಂಗಲೆ ಭಾರತದ ಪ್ರಧಾನಿ ವಾಸಿಸುವ ಬಂಗಲೆಗಿಂತ ದೊಡ್ಡದಿರಬೇಕಾ? ಎಂದು ಕೇಳಲಾಗಿತ್ತು. ಈ ಸಮೀಕ್ಷೆಯಲ್ಲಿ ಬಂದ ಫಲಿತಾಂಶ ಏನೆಂದರೆ, ಶೇ 73ರಷ್ಟು ಮಂದಿ ಇಲ್ಲ ಅಂದರೆ, ಶೇ 26ರಷ್ಟು ಹೌದು ಎಂದಿದ್ದಾರೆ.

2013-14ರಲ್ಲಿ 10-ಜನಪಥ್ ನ ಎಲೆಕ್ಟ್ರಿಕಲ್ ಫಿಟ್ಟಿಂಗ್ ಗಳ ನಿರ್ವಹಣೆಗೆ 51.43 ಲಕ್ಷ ಖರ್ಚು ಮಾಡಲಾಗಿದೆ. ಈ ಹಣವನ್ನಿ ಅಭಿವೃದ್ಧಿ ಕಾರ್ಯಗಳಿಗೆ ಬಳಸಬಹುದಿತ್ತಲ್ಲವೇ ಎಂದು ಮೈ ವೋಟ್ ಟುಡೇಯ ದಾನೀಶ್ ಮಂಜೂರ್ ಪ್ರಶ್ನಿಸಿದ್ದಾರೆ. ಯಾವುದೇ ಅಧಿಕೃತ ಸ್ಥಾನ ಮಾನ ಇಲ್ಲದಿದ್ದರೂ ಅದು ಅವರ ಅಧಿಕೃತ ನಿವಾಸ ಹೇಗೆ ಆಗುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ.[ಸಂಜಯ್ ಸಮಾಧಿಗೆ ಸೋನಿಯಾ ಗಾಂಧಿ ನಮನ : ಏನಿದು ರಾಜಕೀಯ?]

3.75 ಎಕರೆ ಜಾಗ, 1600 ಕೋಟಿಗೂ ಹೆಚ್ಚು ಮೌಲ್ಯ. ಬೇರೆ ಯಾವ ಪಕ್ಷದ ರಾಷ್ಟ್ರೀಯ ಅಧ್ಯಕ್ಷರೂ ಇಂಥ ದೊಡ್ಡ ಬಂಗಲೆಯಲ್ಲಿ ವಾಸವಿದ್ದಾರೆ ಎಂದು ಮಂಜೂರ್ ಕೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The president of the Congress party, Sonia Gandhi lives in a house bigger than the Prime Minister's residence. A lot of people have been questioning how the Congress president lives in a house bigger than the Prime Minister of India's residence.
Please Wait while comments are loading...