ಜುಲೈ ತನಕ ಭಾರತದಲ್ಲಿ ಕೋವಿಡ್ ವಿರುದ್ಧದ ಲಸಿಕೆ ಕೊರತೆ
ನವದೆಹಲಿ, ಮೇ 02; ಭಾರತದಲ್ಲಿ ಕೋವಿಡ್ 2ನೇ ಅಲೆ ಆತಂಕವನ್ನು ಉಂಟು ಮಾಡಿದೆ. ಸೋಂಕಿನ ವಿರುದ್ಧ ನೀಡುವ ಲಸಿಕೆ ಸಂಗ್ರಹವಿಲ್ಲ ಎಂದು ವಿವಿಧ ರಾಜ್ಯಗಳು ಹೇಳುತ್ತಿವೆ. ಜುಲೈನ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂಬ ವರದಿಯೂ ಬಂದಿದೆ.
ಸೆರಂ ಇನ್ಸಿಟಿಟ್ಯೂಟ್‌ನ ಮುಖ್ಯಸ್ಥ ಆಧಾರ್ ಪೂನಾವಾಲ ಅವರು ಜುಲೈ ತನಕ ಇದೇ ಪರಿಸ್ಥಿತಿ ಮುಂದುವರೆಯಲಿದೆ ಎಂದು ಹೇಳಿದ್ದಾರೆ. ಫೈನಾಷಿಯಲ್ ಎಕ್ಸ್‌ಪ್ರೆಸ್ ಈ ಕುರಿತು ವರದಿ ಮಾಡಿದೆ.
"ಜುಲೈನಲ್ಲಿ ತಿಂಗಳ ಬಳಿಕ ಪ್ರತಿ ತಿಂಗಳು 100 ಮಿಲಿಯನ್ ಡೋಸ್ ಲಸಿಕೆಯನ್ನು ಉತ್ಪಾದನೆ ಮಾಡಲಾಗುತ್ತದೆ" ಎಂದು ಆಧಾರ್ ಪೂನಾವಾಲ ಹೇಳಿದ್ದಾರೆ ಪತ್ರಿಕೆ ವರದಿ ಮಾಡಿದೆ. ಮೇ 1ರಿಂದ 18-44 ವರ್ಷದ ಎಲ್ಲರಿಗೂ ಲಸಿಕೆ ನೀಡಲಾಗುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

"ಲಸಿಕೆ ಉತ್ಪಾದನೆ ಕಡಿಮೆಯಾಗುತ್ತಿದೆ ಎಂದು ರಾಜಕೀಯ ನಾಯಕರು, ವಿವಿಧ ನಾಯಕರು ಸೆರಂ ಇನ್ಸಿಟಿಟ್ಯೂಟ್ ಮತ್ತು ನನ್ನನ್ನು ಟೀಕಿಸುತ್ತಿದ್ದಾರೆ" ಎಂದು ಆಧಾರ್ ಪೂನಾವಾಲ ಹೇಳಿದ್ದಾರೆ ಪತ್ರಿಕೆ ವರದಿ ಮಾಡಿದೆ.
ಮೇ 1ರಂದು ಆಧಾರ್ ಪೂನಾವಾಲ ಅವರು ಟ್ವೀಟ್ ಮಾಡಿದ್ದರು. ಯುಕೆಯಲ್ಲಿರುವ ಜೊತೆ ಸಭೆ ಮಾಡಲಾಗಿದೆ. ಕೋವಿಶೀಲ್ಡ್ ಉತ್ಪಾದನೆ ಬಗ್ಗೆ ಚರ್ಚಿಸಲಾಗಿದೆ ಎಂದು ಹೇಳಿದ್ದರು.












Click it and Unblock the Notifications