ಹೆಸರು, ಚಿಹ್ನೆ ಖರೀದಿಗೆ 2,000 ಕೋಟಿ: ಉದ್ಧವ್ ತಂಡದ 2,000 ಕೋಟಿ ಆರೋಪಕ್ಕೆ, ಶಿಂಧೆ ಬಣದ ಉತ್ತರ
ಚುನಾವಣಾ ಆಯೋಗವು ಶುಕ್ರವಾರ ಏಕನಾಥ್ ಶಿಂಧೆ ನೇತೃತ್ವದ ಬಣ ನಿಜವಾದ ಶಿವಸೇನೆ ಎಂದಿದ್ದು, ಅದಕ್ಕೆ 'ಬಿಲ್ಲು ಮತ್ತು ಬಾಣ' ಚುನಾವಣಾ ಚಿಹ್ನೆ ಎಂದು ಆದೇಶಿಸಿದೆ.
ಮುಂಬೈ, ಫೆಬ್ರವರಿ. 19: ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ನಾಯಕ ಸಂಜಯ್ ರಾವತ್ ಅವರು ಶಿವಸೇನೆ ಪಕ್ಷದ ಹೆಸರು ಮತ್ತು ಅದರ 'ಬಿಲ್ಲು ಮತ್ತು ಬಾಣ'ದ ಚಿಹ್ನೆಯನ್ನು ಖರೀದಿಸಲು ಇಲ್ಲಿಯವರೆಗೆ 2000 ಕೋಟಿ ರೂಪಾಯಿಗಳ ಒಪ್ಪಂದ ನಡೆದಿದೆ ಎಂದು ಭಾನುವಾರ ಗಂಭೀರ ಆರೋಪ ಮಾಡಿದ್ದಾರೆ.
ಆದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಬಣದ ಶಾಸಕ ಸದಾ ಸರ್ವಂಕರ್ ಅವರು ಈ ಆರೋಪವನ್ನು ತಳ್ಳಿಹಾಕಿದ್ದು, ಸಂಜಯ್ ರಾವತ್ ಕ್ಯಾಷಿಯರ್...? ಎಂದು ಪ್ರಶ್ನಿಸಿದ್ದಾರೆ.
ಸಂಜಯ್ ರಾವತ್ ಟ್ವೀಟ್‌ನಲ್ಲಿ, " ಪಕ್ಷದ ಹೆಸರು, ಬಿಲ್ಲು ಮತ್ತು ಬಾಣಗಳ ಗುರುತಿಗಾಗಿ 2,000 ಕೋಟಿ ಅವ್ಯವಹಾರ ನಡೆದಿದೆ ಎಂಬುದು ಪ್ರಾಥಮಿಕ ಅಂಕಿ ಅಂಶವಾಗಿದೆ. ಇದು 100 ಪ್ರತಿಶತ ಸತ್ಯ. ಇದಕ್ಕೆ ಪೂರಾವೆಗಳಿವೆ. ಆಡಳಿತ ಮಂಡಳಿಯ ಆಪ್ತರಾಗಿರುವ ಬಿಲ್ಡರ್ ಒಬ್ಬರು ಈ ಮಾಹಿತಿಯನ್ನು ತಮ್ಮೊಂದಿಗೆ ಹಂಚಿಕೊಂಡಿದ್ದಾರೆ" ಎಂದು ತಿಳಿಸಿದ್ದಾರೆ.

ಚುನಾವಣಾ ಆಯೋಗವು ಶುಕ್ರವಾರ ಏಕನಾಥ್ ಶಿಂಧೆ ನೇತೃತ್ವದ ಬಣವನ್ನು ನಿಜವಾದ ಶಿವಸೇನೆ ಎಂದು ಗುರುತಿಸಿದ್ದು, ಅದಕ್ಕೆ 'ಬಿಲ್ಲು ಮತ್ತು ಬಾಣ' ಚುನಾವಣಾ ಚಿಹ್ನೆಯನ್ನು ನಿಗದಿಪಡಿಸಲು ಆದೇಶಿಸಿದೆ.
ಸಂಘಟನೆಯ ನಿಯಂತ್ರಣಕ್ಕಾಗಿ ಸುದೀರ್ಘ ಹೋರಾಟದ ಕುರಿತು 78 ಪುಟಗಳ ಆದೇಶದಲ್ಲಿ, ಉದ್ಧವ್ ಠಾಕ್ರೆ ಬಣವು ರಾಜ್ಯದಲ್ಲಿ ವಿಧಾನಸಭಾ ಉಪಚುನಾವಣೆ ಪೂರ್ಣಗೊಳ್ಳುವವರೆಗೆ ತನಗೆ ನಿಗದಿಪಡಿಸಿದ "ಪ್ರಜ್ವಲಿಸುತ್ತಿರುವ ಜ್ಯೋತಿ" ಚುನಾವಣಾ ಚಿಹ್ನೆಯನ್ನು ಇಟ್ಟುಕೊಳ್ಳಲು ಚುನಾವಣಾ ಆಯೋಗ ಅನುಮತಿಸಿದೆ.
ಶಿವಸೇನೆ ಹೆಸರನ್ನು ಖರೀದಿಸಲು 2,000 ಕೋಟಿ ಎಂಬುದು ಸಣ್ಣ ಮೊತ್ತವಲ್ಲ ಎಂದು ಸಂಜಯ್ ರಾವತ್ ಭಾನುವಾರ ಹೇಳಿದ್ದು, ಚುನಾವಣಾ ಆಯೋಗದ ನಿರ್ಧಾರವು ಒಪ್ಪಂದವಾಗಿದೆ ಎಂದು ಆರೋಪಿಸಿದ್ದಾರೆ.

"ಶಿವಸೇನೆ ಹೆಸರು ಮತ್ತು ಅದರ ಚಿಹ್ನೆಯನ್ನು ಪಡೆಯಲು 2000 ಕೋಟಿ ರೂಪಾಯಿ ಡೀಲ್ ನಡೆದಿರುವ ಬಗ್ಗೆ ನನಗೆ ವಿಶ್ವಾಸಾರ್ಹ ಮಾಹಿತಿ ಇದೆ. ಇದು ಪ್ರಾಥಮಿಕ ಅಂಕಿ ಅಂಶವಾಗಿದ್ದು, 100 ಪ್ರತಿಶತ ಸತ್ಯವಾಗಿದೆ. ಶೀಘ್ರದಲ್ಲೇ ಹಲವು ವಿಷಯಗಳು ಬಹಿರಂಗಗೊಳ್ಳಲಿವೆ. ದೇಶದ ಇತಿಹಾಸದಲ್ಲಿ ಹಿಂದೆಂದೂ ಈ ರೀತಿ ನಡೆದಿಲ್ಲ" ಎಂದು ಸಂಜಯ್ ರಾವುತ್ ಟ್ವೀಟ್ ಮಾಡಿದ್ದಾರೆ.
ಏಕನಾಥ್ ಶಿಂಧೆ ಬಂಡಾಯವೆದ್ದ ನಂತರ ಕಳೆದ ವರ್ಷ ಜೂನ್‌ನಲ್ಲಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಪತನವಾಗಿತ್ತು. ಬಳಿಕ ಶಿಂಧೆ ಬಣ ಬಿಜೆಪಿ ಜೊತೆಗೆ ಸೇರಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿದೆ.












Click it and Unblock the Notifications