ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಪ್ಪಲಿ ಏಟು ಪ್ರಕರಣ: ಸಂಸದನಿಗೆ ಶಿವಸೇನೆ ನೋಟಿಸ್

ನವದೆಹಲಿಯಲ್ಲಿ ಗುರುವಾರ ಬೆಳಗ್ಗೆ ಸುಮಾರು 10:30ರ ಹೊತ್ತಿಗೆ ಏರ್ ಇಂಡಿಯಾ ಸಿಬ್ಬಂದಿಯೊಂದಿಗೆ ಜಗಳವಾಡಿದ್ದ ಸಂಸದ ರವೀಂದ್ರ, ಆ ಸಂಸ್ಥೆಯ ಸಿಬ್ಬಂದಿ ಸುಕುಮಾರ್ ಎಂಬುವರಿಗೆ ಚಪ್ಪಲಿಯಿಂದ ಹೊಡೆದಿದ್ದರು.

|
Google Oneindia Kannada News

ಮುಂಬೈ, ಮಾರ್ಚ್ 23: ಏರ್ ಇಂಡಿಯಾ ವಿಮಾನ ಸಿಬ್ಬಂದಿ ಸುಕುಮಾರ್ ಎಂಬುವರಿಗೆ ಚಪ್ಪಲಿಯಿಂದ ಹೊಡೆದು ರಂಪಾಟ ಮಾಡಿರುವ ಶಿವಸೇನಾ ಸಂಸದ ರವೀಂದ್ರ ಗಾಯಕ್ವಾಡ್ ಅವರಿಗೆ ನೋಟಿಸ್ ನೀಡಿರುವ ಶಿವಸೇನೆ, ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಿದೆ.

ಗುರುವಾರ (ಮಾರ್ಚ್ 23) ಬೆಳಗ್ಗೆ ಪುಣೆಯಿಂದ ದೆಹಲಿಗೆ ಏರ್ ಇಂಡಿಯಾ ವಿಮಾನದಲ್ಲಿ ಬಂದಿಳಿದ ಮಹಾರಾಷ್ಟ್ರದ ಒಸ್ಮಾನಾಬಾದ್ ಕ್ಷೇತ್ರದ ಸಂಸದ ರವೀಂದ್ರ ಗಾಯಕ್ವಾಡ್, ಏರ್ ಇಂಡಿಯಾದಿಂದ ತಮಗಾಗುತ್ತಿರುವ ಕೆಲವಾರು ತೊಂದರೆಗಳ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ವಿಮಾನ ಬಿಟ್ಟು ಇಳಿಯದೇ ಪಟ್ಟಾಗಿ ಕುಳಿತಿದ್ದರು.[ಚಪ್ಪಲಿಯೇಟು ಪ್ರಕರಣ: ಶಿವಸೇನಾ ಸಂಸದ ವಿರುದ್ಧ ಎಫ್ಐಆರ್]

Shiv Sena sends notice to MP Ravindra Gayakwad over his slapping controversy

ಅವರನ್ನು ಎಬ್ಬಿಸಲು ಬಂದ ಸಿಬ್ಬಂದಿಯೊಡನೆ ವಾಗ್ವಾದ ನಡೆಸಿದ್ದ ಅವರು, ಆ ಸಂದರ್ಭದಲ್ಲಿ ತಾಳ್ಮೆ ಕಳೆದುಕೊಂಡು ಸಿಬ್ಬಂದಿಯೊಬ್ಬರಿಗೆ ಚಪ್ಪಲಿಯಿಂದ ಹೊಡೆದಿದ್ದರು.

ಆನಂತರ ,ಸುದ್ದಿಗಾರರೊಂದಿಗೆ ಮಾತನಾಡಿ, ''ಬಾಯಿಗೆ ಬಂದಂತೆ ಮಾತನಾಡಿದ್ದರಿಂದಾಗಿ ಏರ್ ಇಂಡಿಯಾ ಸಿಬ್ಬಂದಿಗೆ 25 ಬಾರಿ ಚಪ್ಪಲಿಯಿಂದ ಹೊಡೆದಿದ್ದೇನೆ'' ಎಂದೂ ಹೇಳಿಕೊಂಡಿದ್ದರು.

ರವೀಂದ್ರ ಈ ನಡೆ ದೇಶದಾದ್ಯಂತ ಭಾರೀ ವಿವಾದಕ್ಕೆ ಕಾರಣವಾಗಿದೆ. ಅತ್ತ, ನವದೆಹಲಿಯ ಠಾಣೆಯೊಂದರಲ್ಲಿ ಎಫ್ ಐ ಆರ್ ಕೂಡ ದಾಖಲಾಗಿದೆ. ಇದಲ್ಲದೆ, ಏರ್ ಇಂಡಿಯಾ ಸಂಸ್ಥೆಯು ರವೀಂದ್ರ ಅವರನ್ನು ಪ್ರಯಾಣಿಕರ ಕಪ್ಪುಪಟ್ಟಿಗೆ ಸೇರಿಸಿದೆ.

English summary
Shiv Sena sends notice to its MP Ravindra Gayakwad who slapped Air India staff Sukumar on Thursday in New Delhi which lead to huge controversy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X