ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ರಕ್ತದೋಕಳಿ: ಬೆಳ್ಳಂಬೆಳಗ್ಗೆ ಮಹಾನಾಯಕನ ಮೇಲೆ ಭೀಕರ ಗುಂಡಿನ ದಾಳಿ
ಅಮೃತಸರ ಡಿಸೆಂಬರ್ 4: ಅಮೃತಸರದ ಗೋಲ್ಡನ್ ಟೆಂಪಲ್‌ನಲ್ಲಿ ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಮುಖಂಡ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಗುಂಡಿನ ದಾಳಿ ಮಾಡಿ ಹತ್ಯೆಗೆ ಯತ್ನಸಿದ ಘಟನೆ ನಡೆದಿದೆ. ಗೋಲ್ಡನ್ ಟೆಂಪಲ್‌ನ ಪ್ರವೇಶದ್ವಾರದಲ್ಲಿ ಗಾಲಿಕುರ್ಚಿಯಲ್ಲಿ ಕುಳಿತಿದ್ದ ಸುಖ್‌ಬೀರ್ ಸಿಂಗ್ ಬಾದಲ್ ಮೇಲೆ ವ್ಯಕ್ತಿಯೊಬ್ಬ ಹಾರಿಸಿದ ಗುಂಡು ಗೋಡೆಗೆ ತಗುಲಿದೆ. ಹೀಗಾಗಿ ಬಾದಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬುಧವಾರ ಬೆಳಗ್ಗೆ ನರೇನ್ ಸಿಂಗ್ ಎಂಬ ವ್ಯಕ್ತಿ ಗುಂಡು ಹಾರಿಸಿದ್ದಾನೆ. ಗುಂಡು ಹಾರಿಸಿದ ಬಳಿಕ ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಟೆಂಪಲ್ ಹೊರಗಡೆ ಇದ್ದ ಜನ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ದಾಳಿಕೋರನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆದರೆ ದಾಳಿಯ ಉದ್ದೇಶ ಇನ್ನೂ ತಿಳಿದುಬಂದಿಲ್ಲ.

62 ವರ್ಷದ ಸುಖ್ಖೀರ್ ಸಿಂಗ್ ಬಾದಲ್ ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಕೂಡ ಆಗಿದ್ದರು. ಸಿಖ್ ಧರ್ಮ ಗ್ರಂಥ, 'ಗುರು ಗ್ರಂಥ ಸಾಹೀಬ್'ವನ್ನು ಅವಮಾನಿಸಿದ್ದ ವಿವಾದಿತ ಸಂತ ರಾಮ್ ರಹೀಂಗ್ ಕ್ಷಮೆ ನೀಡಿದ್ದ ಕಾರಣಕ್ಕೆ ಸಿಖ್ ಧಾರ್ಮಿಕ ಮಂಡಳಿ ಅಕಾಲ್ ತಖ್ತ್‌ನಿಂದ ಶಿಕ್ಷೆಗೊಳಗಾಗಿದ್ದರು. ಗೋಲ್ಡನ್ ಟೆಂಪಲ್ ಆವರಣದಲ್ಲಿ ಈ ಶಿಕ್ಷೆಯನ್ನು ಪೂರೈಸುತ್ತಿದ್ದ ವೇಲೆ ಈ ಗುಂಡಿನ ದಾಳಿ ನಡೆದಿದೆ.












Click it and Unblock the Notifications