ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು: ಚಿದಂಬರಂ

|
Google Oneindia Kannada News

ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳುವುದಕ್ಕೆ ಅಂತಲೇ ಅಪನಗದೀಕರಣ ಅನ್ನೋ ಯೋಜನೆ ಮಾಡಿದ್ದಾ ಎಂದು ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ವ್ಯಂಗ್ಯವಾಡಿದ್ದಾರೆ.

ಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐಅಪನಗದೀಕರಣ ನಂತರ ಶೇ 99ರಷ್ಟು ಹಣ ಬ್ಯಾಂಕ್ ಗೆ ಜಮೆ: ಆರ್ ಬಿಐ

ಬುಧವಾರ ತನ್ನ ವಾಅರ್ಷಿಕ ವರದಿಯನ್ನು ಬಿಡುಗಡೆ ಮಾಡಿದ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ, ಅಮಾನ್ಯವಾದ 15.44 ಲಕ್ಷ ಕೋಟಿ ಅಮಾನ್ಯ ನೋಟುಗಳ ಪೈಕಿ 15.28 ಲಕ್ಷ ಕೋಟಿ ರುಪಾಯಿ ಬ್ಯಾಂಕ್ ಗಳಿಗೆ ವಾಪಸ್ ಜಮೆಯಾಗಿದೆ. ಅಂದರೆ ಶೇ 99ರಷ್ಟು ಹಣ ಮರಳಿ ಬ್ಯಾಂಕ್ ಗೆ ಜಮೆಯಾಗಿದೆ.

Shame on RBI which 'recommended' demonetisation: P Chidambaram

ಶೇ 99ರಷ್ಟು ಕಾನೂನು ಪ್ರಕಾರ ಬದಲಾವಣೆಯಾಗಿದೆ! ಕಪ್ಪು ಹಣವನ್ನು ಸಕ್ರಮ ಮಾಡಿಕೊಳ್ಳುವ ಸಲುವಾಗಿಯೇ ಅಪನಗದೀಕರಣ ಅನ್ನೋ ಯೋಜನೆಯನ್ನು ರೂಪಿಸಿದ್ದೆ? ಎಂದು ಪಿ.ಚಿದಂಬರಂ ಟ್ವೀಟ್ ಮಾಡಿದ್ದಾರೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ 16000 ಕೋಟಿ ರುಪಾಯಿ ಇದರಿಂದ ಲಾಭವಾಗಿದೆ. ಆದರೆ ಹೊಸ ನೋಟು ಮುದ್ರಣಕ್ಕೆ 21000 ಕೋಟಿ ಖರ್ಚಾಗಿದೆ! ಈ ಆರ್ಥಿಕತಜ್ಞರಿಗೆ ನೊಬೆಲ್ ಬಹುಮಾನ ಸಿಗಬೇಕು ಎಂದು ಕೂಡ ಟ್ವೀಟ್ ನಲ್ಲಿ ವ್ಯಂಗ್ಯವಾಡಿದ್ದಾರೆ.

15.44 ಲಕ್ಷ ಕೋಟಿಯಲ್ಲಿ 16000 ಕೋಟಿ ರುಪಾಯಿ ಮರಳಿ ಜಮೆಯಾಗಿಲ್ಲ. ಅದು ಶೇ ಒಂದರಷ್ಟು. ಅಪನಗದೀಕರಣಕ್ಕೆ 'ಶಿಫಾರಸು' ಮಾಡಿದ ಆರ್ ಬಿಐಗೆ ನಾಚಿಕೆ ಆಗಬೇಕು ಎಂದು ಅವರು ಚಾಟಿ ಬೀಸಿದ್ದಾರೆ.

English summary
Congress leader and former finance minister P Chidambaram on Wednesday took a dig at the RBI and Modi government, asking whether demonetisation was a scheme designed to convert black money into white.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X