ಅಪ್ರಾಪ್ತ ಪತ್ನಿ ಜತೆ ಲೈಂಗಿಕ ಸಂಪರ್ಕ ಅಪರಾಧ: ಸುಪ್ರೀಂ
ನವದೆಹಲಿ, ಅಕ್ಟೋಬರ್ 11 : ಅಪ್ರಾಪ್ತ ಪತ್ನಿ ಜತೆ ಲೈಂಗಿಕ ಸಂಪರ್ಕ ಅಪರಾಧವೆಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ.

15 ರಿಂದ 18 ವರ್ಷದೊಳಗಿನ ಪತ್ನಿ ಜತೆ ಲೈಂಗಿಕ ಸಂಪರ್ಕವನ್ನು ಅತ್ಯಾಚಾರವೆಂದು ಪರಿಗಣಿಸಲಾಗುತ್ತದೆ ಎಂದು ಬುಧವಾರ (ಅ,11) ಸುಪ್ರೀಂ ಕೋರ್ಟ್ ಹೇಳಿದೆ.
ಲೈಂಗಿಕ ಸಂಪರ್ಕಕ್ಕೆ ವಯಸ್ಸಿನ ಮಿತಿ ಇಳಿಸಲು ಆಗಲ್.ಲ ಹಾಗೂ ಅತ್ಯಾಚಾರವಾದ ಒಂದು ವರ್ಷದೊಳಗೆ ಅಪ್ರಾಪ್ತೆ ದೂರು ನೀಡಬೇಕು. 1 ವರ್ಷದ ನಂತರ ದೂರು ನೀಡಿದರೇ ಅದನ್ನು ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ತನ್ನ ಆದೇಶಲ್ಲಿ ಸ್ಪಷ್ಟವಾಗಿ ತಿಳಿಸಿದೆ.
ಬಾಲ್ಯವಿವಾಹ ತಡೆ ಕಾನೂನುಗಳನ್ನು ಮತ್ತಷ್ಟು ಬಿಗಿಗೊಳಿಸಲು ಸುಪ್ರೀಂ ಕೋರ್ಟ್ ಈ ಮಹತ್ವದ ಆದೇಶವನ್ನು ನೀಡಿದೆ.












Click it and Unblock the Notifications