ಸೆಕ್ಸ್ ರಾಕೆಟ್ ಕೇಸ್ : ಪೊಲೀಸ್ ಕಸ್ಟಡಿಯಲ್ಲಿ ಮೇಘಾಲಯ ಶಾಸಕ

Posted By:
Subscribe to Oneindia Kannada

ಶಿಲ್ಲಾಂಗ್, ಜನವರಿ 08: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಹೊತ್ತು, ಅಸ್ಸಾಂನಲ್ಲಿ ಬಚ್ಚಿಟ್ಟುಕೊಂಡಿದ್ದ ಮೇಘಾಲಯದ ಪಕ್ಷೇತರ ಶಾಸಕ ಜ್ಯೂಲಿಯಸ್ ಕೆ. ಡ್ರೊಪಾಂಗ್​ ನನ್ನು ಗುವಾಹಟಿ ಪೊಲೀಸರು ಬಂಧಿಸಿದ್ದಾರೆ. ಐದು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಜ್ಯೂಲಿಯಸ್ ವಿರುದ್ಧ ಅತ್ಯಾಚಾರ ಪ್ರಕರಣದ ದಾಖಲಾಗಿತ್ತು. ಪರಾರಿಯಾಗಿದ್ದ ಜ್ಯೂಲಿಯನ್ ವಿರುದ್ಧ ಮೇಘಾಲಯ ಪೊಲೀಸರು, ಲುಕ್​ಔಟ್ ನೋಟಿಸ್ ಹೊರಡಿಸಿದ್ದರು. ಗುವಾಹತಿಯಲ್ಲಿ ಸೆರೆ ಸಿಕ್ಕ ಜ್ಯೂಲಿಯನ್ ನನ್ನು ಶಿಲ್ಲಾಂಗಿ​ಗೆ ಕರೆತರಲಾಯಿತು.

Sex racket case: Meghalaya MLA remanded in police custody

ಈ ಬಗ್ಗೆ ಸ್ಪೀಕರ್ ಅಬು ಅತಾಹೇರ್ ಮೊಂಡಲ್ ವರಿಗೆ ವಿಷಯ ತಿಳಿಸಲಾಯಿತು. ನಂತರ ಶನಿವಾರ (ಜನವರಿ 07) ಕೋರ್ಟಿಗೆ ಹಾಜರುಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ಕಳೆದ ವರ್ಷ ಡಿಸೆಂಬರ್ 15 ರಂದು 14 ವರ್ಷ ವಯಸ್ಸಿನ ಬಾಲಕಿಯ ಮೇಲೆ ಜ್ಯೂಲಿಯಸ್ ಅತ್ಯಾಚಾರ ಎಸಗಿದ್ದ. ಶಾಸಕ ಜ್ಯೂಲಿಯನ್ ವಿರುದ್ಧ ಡಿಸೆಂಬರ್ 24 ರಂದು ಎಫ್​ಐಆರ್ ದಾಖಲಾಗಿತ್ತು. ಪೋಸ್ಕೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಅನ್ವಯ ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಈ ಸೆಕ್ಸ್ ರಾಕೆಟ್ ನಲ್ಲಿ ಸಹಕರಿಸಿದ ಚಾಲಕ ಸಂದೀಪ್ ಬಿಸ್ವಾನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.(ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Meghalaya legislator Julius Dorphang, who was wanted for sexually assaulting a 14-year-old girl, was arrested from his hideout in neighbouring Assam and remanded today(January 07) in police custody for 5 days.
Please Wait while comments are loading...