ಶಾಲೆಗಳಲ್ಲಿ ಬಾಂಬ್? ಓಡಿ ಓಡಿ ಅಂತಾ ಹೇಳಿದ್ದು ಯಾರು?

ಶಾಲೆಗೆ ಹೊರಟಿದ್ದ ಮಕ್ಕಳೆಲ್ಲಾ ಓಡೋಡಿ ಬಂದು ಮನೆ ಸೇರಿಕೊಂಡರು, ಹಾಗೇ ಶಾಲೆಯ ಒಳಗೆ ಇದ್ದ ಮಕ್ಕಳನ್ನ ತಕ್ಷಣ ಹೊರಗಡೆ ಕಳುಹಿಸಿ ಬಾಂಬ್ ಇರುವ ಜಾಗವನ್ನು ಪೊಲೀಸ್ ಸಿಬ್ಬಂದಿ ಹುಡುಕಲು ಶುರು ಮಾಡಿದರು. ಇರಿ.. ಇರಿ.. ಕೂಲ್.. ಕೂಲ್.. ತುಂಬಾ ಟೆನ್ಷನ್ ಮಾಡ್ಕೋಬೇಡಿ ಮಾರಾಯಾರೆ, ಇದು ಯಾವುದೋ ಸಿನಿಮಾ ಸೀನ್ ಅಲ್ಲ. ಆದರೆ ಯಾರೋ ಕೆಲವು ಕಿಡಿಗೇಡಿ ಕಿರಾತಕ ಮನೆಹಾಳರು ಮಾಡಿದ ಕೆಲಸದಿಂದ, ಸ್ಕೂಲ್‌ನಲ್ಲಿ ಬಾಂಬ್ ಇದೆ ಅನ್ನೋ ಭಯ ಆವರಿಸಿ ಮಕ್ಕಳು ಶಾಲೆಗಳಿಂದ ಓಡೋಡಿ ಹೊರಗೆ ಬರುವಂತೆ ಆಗಿತ್ತು.

ಅಂದಹಾಗೆ ಶಾಲೆಗಳಿಗೆ ದಿಢೀರ್ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ ಕೆಲವು ಕಿರಾತಕರು ಭಯದ ವಾತಾವರಣ ಸೃಷ್ಟಿಸಿದ್ದರು. ಒಂದಲ್ಲ.. ಎರಡಲ್ಲ.. ಬರೋಬ್ಬರಿ 100ಕ್ಕೂ ಹೆಚ್ಚು ಶಾಲೆಗಳಿಗೆ ಇದೇ ರೀತಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿರುವ ಆರೋಪ ಕೇಳಿಬಂದಿದೆ. ಅಷ್ಟಕ್ಕೂ ಈ ಘಟನೆ ನಡೆದಿರುವುದು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ. ಹಾಗಾದರೆ ಇಲ್ಲಿ, ಆಗಿದ್ದಾದರೂ ಏನು? ಬಾಂಬ್ ಸ್ಕ್ವಾಡ್ ಬಂದಾಗ ಶಾಲೆಗಳಲ್ಲಿ ಬಾಂಬ್ ಪತ್ತೆ ಆಯ್ತಾ? ಆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಮುಂದೆ ಓದಿ.

Several Schools In National Capital Delhi Receives Bomb Threat

ಬಾಂಬ್ ಇದೆ ಓಡಿ.. ಓಡಿ..

ರಾಷ್ಟ್ರ ರಾಜಧಾನಿ ದೆಹಲಿಯ ಚಾಣಕ್ಯಪುರಿಯಲ್ಲಿ ಇರುವ, ಸಂಸ್ಕೃತಿ ಸ್ಕೂಲ್‌, ಮಯೂರ್‌ ವಿಹಾರ್‌ ಪ್ರದೇಶದ ಮದರ್‌ ಮೇರಿ ಸ್ಕೂಲ್‌ ಹಾಗೂ ದ್ವಾರಕಾದಲ್ಲಿರುವ ಡೆಲ್ಲಿ ಪಬ್ಲಿಕ್‌ ಸ್ಕೂಲ್‌ ಸೇರಿ ಭರ್ಜರಿ 100ಕ್ಕೂ ಹೆಚ್ಚು ಶಾಲೆಗಳಿಗೆ ಈ ರೀತಿ ಬಾಂಬ್ ಬೆದರಿಕೆ ಸಂದೇಶ ಕಳುಹಿಸಿದ್ದಾರೆ ಎಂದು ಆರೋಪ ಮಾಡಲಾಗಿದೆ. ಬೆಳ್ಳಂಬೆಳಗ್ಗೆ ಮೇಲ್ ಮಾಡಿದ್ದ ಮನೆ ಹಾಳರು, ಪಾಪ ಪುಟಾಣಿ ಮಕ್ಕಳ ಪೋಷಕರ ನೆಮ್ಮದಿ ಹಾಳು ಮಾಡಿದ್ದರು. ಮೊದಲಿಗೆ 3-4 ಶಾಲೆಗೆ ಹೀಗೆ ಬಾಂಬ್ ಬೆದರಿಕೆ ಮೇಲ್ ಬಂದಿತ್ತು ಎನ್ನಲಾಗಿದೆ. ಆದರೆ ಕಿರಾತಕರು ಆ ನಂತರ ಮತ್ತಷ್ಟು ಶಾಲೆಗಳಿಗೆ ಇದೇ ರೀತಿಯಾಗಿ ಬಾಂಬ್ ಬೆದರಿಕೆ ಮೇಲ್ ಕಳುಹಿಸಿದ್ದಾರೆ. ಈ ಮೂಲಕ 100ಕ್ಕೂ ಹೆಚ್ಚು ಶಾಲೆಗಳಿಗೆ ಇದೇ ರೀತಿ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎನ್ನಲಾಗಿದೆ.

Several Schools In National Capital Delhi Receives Bomb Threat

ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳು ಮನೆಗೆ

ಬಾಂಬ್ ಬೆದರಿಕೆ ಇಮೇಲ್‌ನಲ್ಲಿ ಶಾಲೆಗಳ ಕ್ಯಾಂಪಸ್‌ನಲ್ಲಿ ಸ್ಫೋಟಕ ಇದೆ ಎಂದು ಹೆದರಿಸಿ ವಿಕೃತಿ ಮೆರೆದಿದ್ದಾರೆ. ಇನ್ನು ಈ ಸುದ್ದಿ ತಿಳಿದ ತಕ್ಷಣವೇ ಅಲರ್ಟ್ ಆದ ಬಾಂಬ್ ನಿಷ್ಕ್ರಿಯ ದಳದ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಅಧಿಕಾರಿಗಳು, ಶಾಲೆಗಳಿಗೆ ಓಡೋಡಿ ಹೋಗಿದ್ದಾರೆ. ಅಲ್ಲಿ ಪರಿಶೀಲನೆ ಪ್ರಗತಿಯಲ್ಲಿ ಇದ್ದು, ದೆಹಲಿಯ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಶಾಲಾ ಆವರಣದಲ್ಲಿ ಪರಿಶೀಲನೆ ನಡೆಸುತ್ತಿದ್ದು ಅಗ್ನಿಶಾಮಕ ಸಿಬ್ಬಂದಿ ಕೂಡ ಜೊತೆಯಲ್ಲಿ ಇದ್ದಾರೆ. ಹಾಗೇ ಹಲವು ಶಾಲೆಗಳಲ್ಲಿ ನಡೆಯುತ್ತಿದ್ದ ಪರೀಕ್ಷೆಯನ್ನು ಇದೀಗ, ಬಾಂಬ್ ಬೆದರಿಕೆಯ ಮೇಲ್ ಬಂದ ನಂತರ ನಿಲ್ಲಿಸಿ ಮಕ್ಕಳನ್ನು ಮನೆಗೆ ಕಳುಹಿಸಲಾಗಿದ್ದು. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+