ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಏರಿಕೆ ಬಂಪರ್!
ನವದೆಹಲಿ, ನ.20: ಕೇಂದ್ರ ಸರ್ಕಾರಿ ನೌಕರರ ವೇತನ ಏರಿಕೆ ಭಾಗ್ಯ ಸಿಗಲಿದೆ. ನ್ಯಾಯಮೂರ್ತಿ ಎ.ಕೆ.ಮಾಥುರ್ ನೇತೃತ್ವದ ಆಯೋಗ 900 ಪುಟಗಳ ವರದಿಯನ್ನು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರಿಗೆ ಸಲ್ಲಿಸಿದ್ದಾರೆ. ಆಯೋಗದ ಶಿಫಾರಸಿನ ಪ್ರಕಾರ ನೌಕರರ ಒಟ್ಟಾರೆ ವೇತನದಲ್ಲಿ ಶೇ.23.5ರಷ್ಟು (ಮೂಲವೇತನ + ತುಟ್ಟಿಭತ್ಯೆ + ಉಳಿದ ಭತ್ಯೆ) ಏರಿಕೆಯಾಗಲಿದೆ.
ನೌಕರರ ಮೂಲವೇತನದಲ್ಲಿ ಶೇ.16ರಷ್ಟು ಏರಿಕೆ ಜತೆಗೆ ವಾರ್ಷಿಕ ವಾಗಿಯೂ ಶೇ.3ರಷ್ಟು ವೇತನ ಹೆಚ್ಚಿಸಬೇಕು. ಇದಲ್ಲದೆ, ಮನೆಬಾಡಿಗೆ ಭತ್ಯೆ ಏರಿಸಬೇಕು ಎಂದು ಶಿಫಾರಸಿನಲ್ಲಿ ಹೇಳಲಾಗಿದೆ.

ನೌಕರರ ಒಟ್ಟಾರೆ ವೇತನದಲ್ಲಿ ಶೇ.23.5ರಷ್ಟು (ಮೂಲವೇತನ + ತುಟ್ಟಿಭತ್ಯೆ + ಉಳಿದ ಭತ್ಯೆ) ಏರಿಕೆಯಾಗಲಿದೆ. ನೌಕರರ ಕನಿಷ್ಠ ವೇತನ 18 ಸಾವಿರ ರು. ಇರಬೇಕೆಂದೂ ಆಯೋಗ ಅಭಿಪ್ರಾಯಪಟ್ಟಿದೆ. ಉಳಿದಂತೆ ಪಿಂಚಣಿದಾರರಿಗೂ ಶೇ.24ರಷ್ಟು ಏರಿಕೆ ಭಾಗ್ಯ ಸಿಗಲಿದೆ.












Click it and Unblock the Notifications