ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Covid Wave In India: ಸರ್ಕಾರಕ್ಕೆ 20 ಮಿಲಿಯನ್ ಕೋವಿಶೀಲ್ಡ್ ಡೋಸ್ ನೀಡಿದ ಸಿರಮ್ ಇನ್‌ಸ್ಟಿಟ್ಯೂಟ್

|
Google Oneindia Kannada News

ನವದೆಹಲಿ, ಡಿಸೆಂಬರ್ 30: ಪುಣೆ ಮೂಲದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಕೇಂದ್ರ ಸರ್ಕಾರಕ್ಕೆ 20 ಮಿಲಿಯನ್ ಡೋಸ್ ಕೋವಿಶೀಲ್ಡ್ ಲಸಿಕೆಯನ್ನು ಉಚಿತವಾಗಿ ನೀಡಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಬ್ರಿಟಿಷ್ ಫಾರ್ಮಾ ಕಂಪನಿ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಮತ್ತು ಎಸ್‌ಐಐ ಉತ್ಪಾದನೆಗೆ ಪರವಾನಗಿ ಪಡೆದ ಲಸಿಕೆಯ ಉಚಿತ ಡೋಸ್‌ಗಳನ್ನು ನೀಡುವುದಾಗಿ ಕಂಪನಿಯ ಸರ್ಕಾರ ಮತ್ತು ನಿಯಂತ್ರಣ ವ್ಯವಹಾರಗಳ ನಿರ್ದೇಶಕ ಪ್ರಕಾಶ್ ಕುಮಾರ್ ಸಿಂಗ್ ಅವರು ಕೇಂದ್ರ ಆರೋಗ್ಯ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.

 ಫೆಬ್ರವರಿ ಒಳಗೆ 2-3 ವರ್ಷ ವಯಸ್ಸಿನ ಮಕ್ಕಳಿಗೆ ಕೋವೋವಾಕ್ಸ್ ಲಭ್ಯ: ಎಸ್‌ಐಐ ಸಿಇಒ ಫೆಬ್ರವರಿ ಒಳಗೆ 2-3 ವರ್ಷ ವಯಸ್ಸಿನ ಮಕ್ಕಳಿಗೆ ಕೋವೋವಾಕ್ಸ್ ಲಭ್ಯ: ಎಸ್‌ಐಐ ಸಿಇಒ

ಭಾರತದಲ್ಲಿ ಕೊರೊನಾ ಓಮ್ರಿಕ್ರಾನ್ ಉಪತಳಿ ಬಿಎಫ್7 ಸೋಂಕಿನ ಭೀತಿ ಹೆಚ್ಚಾಗಿದ್ದರಿಂದ ಬೂಸ್ಟರ್ ಡೋಸ್‌ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ. ಬೇಡಿಕೆ ಹೆಚ್ಚಳದ ಹಿನ್ನೆಲೆಯಲ್ಲಿ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.

Serum Institute Of India Was Provided 20 Million Covishield Vaccine To Central Health Dept.

ಉಚಿತವಾಗಿ ನೀಡಲಾಗುತ್ತಿರುವ ಲಸಿಕೆ ಪರಿಮಾಣದ ವೆಚ್ಚ ಸುಮಾರು ರೂ.410 ಕೋಟಿ ಎಂದು ಹೇಳಲಾಗುತ್ತಿದೆ. ರಾಷ್ಟ್ರೀಯ ಕೋವಿಡ್ ನಿಯಂತ್ರಣ ಇಲ್ಲವೆ ತಡೆಯುವ ನಿಟ್ಟಿನ ಕಾರ್ಯಕ್ರಮಗಳಲ್ಲಿ ಎಸ್‌ಐಐ ಈವರೆಗೆ ಕನಿಷ್ಠ 1.7 ಬಿಲಿಯನ್ ಡೋಸ್ ಕೋವಿಶೀಲ್ಡ್ ಅನ್ನು ಕೇಂದ್ರಕ್ಕೆ ಒದಗಿಸಿದೆ. ಈ ಕೋವಿಶೀಲ್ಡ್ ಅನ್ನು ದೇಶದಲ್ಲಿ ಹೆಚ್ಚು ಬಳಕೆ ಆಗಿದೆ.

ಈಗಾಗಲೇ ಕೆಲವು ರಾಜ್ಯಗಳು ಕೋವಿಡ್ ಲಸಿಕೆಗಳ ಅಗತ್ಯ ದಾಸ್ತಾನು ಇಲ್ಲ ಎನ್ನಲಾಗಿತ್ತು. ಅದಕ್ಕೆ ಸಾಕ್ಷಿ ಎಂಬಂತೆ ಬುಧವಾರ ದೆಹಲಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡೋಸ್‌ಗಳಿಗೆ ಲಭ್ಯತೆ ಇರಲಿಲ್ಲ ಎಂದು ತಿಳಿದು ಬಂದಿದೆ.

ಫಾರ್ಮಾ ಕಂಪನಿ ಮುಖ್ಯಸ್ಥರ ಭೇಟಿ, ಔಷಧ ಪರಿಶೀಲನೆ

ಕೊರೊನಾ ಲಸಿಕೆ ಸಂಬಂಧ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಪ್ರತ್ಯೇಕವಾಗಿ ಫಾರ್ಮಾ ಕಂಪನಿಗಳ ಮುಖ್ಯಸ್ಥರನ್ನು ಭೇಟಿ ಮಾಡಿದ್ದಾರೆ. ಚೀನಾದಲ್ಲಿ ಪ್ರಕರಣಗಳ ಹೆಚ್ಚಳದಿಂದ ಉಂಟಾಗುವ ಕಳವಳಗಳ ನಡುವೆ ದೇಶದಲ್ಲಿ ಅಗತ್ಯ ಔಷಧಿಗಳ ಲಭ್ಯತೆಯನ್ನು ಅವರು ಖುದ್ದು ಪರಿಶೀಲಿಸಿದ್ದಾರೆ.

Serum Institute Of India Was Provided 20 Million Covishield Vaccine To Central Health Dept.

ಫಾರ್ಮಾ ಕಂಪನಿಗಳ ಪ್ರತಿನಿಧಿಗಳೊಂದಿಗೆ ಕೋವಿಡ್ ನಿರ್ವಹಣಾ ಔಷಧಿಗಳ ಸ್ಥಿತಿ, ಸಮರ್ಪಕತೆ ಮತ್ತು ಉತ್ಪಾದನಾ ಸಾಮರ್ಥ್ಯ ಹಾಗೂ ಪೂರೈಕೆ ಬಗ್ಗೆ ಮಾಹಿತಿ ಪಡೆದರು. ಇದರಿಂದಾಗಿ ಭಾರತವು ಯಾವುದೇ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಸಜ್ಜಾಗಿದೆ ಎಂಬುದನ್ನು ಖಾತರಿಪಡಿಸಿಕೊಂಡರು. ವಿಶ್ವಾದ್ಯಂತ ಕೆಲವು ದೇಶಗಳಲ್ಲಿ ಕೋವಿಡ್ -19 ಪ್ರಕರಣಗಳ ಹೆಚ್ಚುತ್ತಲೇ ಇದ್ದು, ಆರೋಗ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಭಾರತದಲ್ಲಿ ಔಷಧೀಯ ಉದ್ಯಮವು ದೃಢವಾದ, ಚೇತರಿಸಿಕೊಂಡಿದೆ. ಆದರೆ ಸಾಂಕ್ರಾಮಿಕ ಸಮಯದಲ್ಲಿ ಬೇಡಿಕೆಯಷ್ಟು ಲಸಿಕೆ ಪೂರೈಸಲು ಆಗಿರಲಿಲ್ಲ. ಆದರೆ ಈಗ 150 ದೇಶಗಳಿಗೆ ಔಷಧಿ ಪೂರೈಸುವ ಸ್ಥಿತಿಯಲ್ಲಿ ಭಾರತವಿದೆ ಎಂದು ಕೇಂದ್ರ ಸಚಿವರು ತಿಳಿಸಿದರು.

English summary
Serum Institute of India of Pune was provided 20 million Covishield vaccine to central health department.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X