ಷೇರು ಮಾರುಕಟ್ಟೆಗೆ ಶುಕ್ರದೆಸೆ. 500 ಅಂಕ ಜಿಗಿತ
ಮುಂಬೈ, ಆಗಸ್ಟ್.14: ಇಳಿಕೆಯ ಹಾದಿಯಲ್ಲಿ ಸಾಗುತ್ತಿದ್ದ ಷೇರು ಮಾರುಕಟ್ಟಗೆ ಶುಕ್ರವಾರ ಶುಕ್ರ ದೆಸೆ. ಒಂದೇ ದಿನ 517 ಅಂಕ ಏರಿಕೆ ದಾಖಲಿಸಿದ ಮಾರುಕಟ್ಟೆ ಬಂಡವಾಳ ಹೂಡಿಕೆದಾರರಿಗೆ ಪ್ರಿಯವಾಗಿ ಪರಿಣಮಿಸಿತು. ನಿಫ್ಟಿ ಸಹ 162 ಅಂಕ ಗಳಿಕೆ ಮಾಡಿಕೊಂಡಿತು.
ಹಣದುಬ್ಬರದಲ್ಲಿ ಆದ ಬದಲಾವಣೆಗಳು, ರೂಪಾಯಿ ಮೌಲ್ಯದ ಏರಿಕೆ ಮತ್ತು ಇಳಿಕೆ ನಡುವೆಯೂ ಷೇರು ಮಾರುಕಟ್ಟೆ ಮೇಲ್ಮುಖವಾಗಿ ಹೊರಟಿದ್ದು ಬಂಡವಾಳದಾರರಲ್ಲಿ ಆಶಾವಾದ ಮೂಡಿಸಿತು.[ಚೀನಾ ಎಫೆಕ್ಟ್: 69 ಪೈಸೆ ಕಳೆದುಕೊಂಡ ರುಪಾಯಿ]

ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳು ಗಳಿಕೆ ಸಾಧಿಸಿದವು. ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ ಮತ್ತು ಕೆನರಾ ಬ್ಯಾಂಕ್ ಸಹ ಉತ್ತಮ ಅಂಶಗಳನ್ನು ದಾಖಲು ಮಾಡಿಕೊಂಡವು. [ಷೇರುಪೇಟೆ ಸೂಚ್ಯಂಕ ಏರಿಳಿತ ಸಮಗ್ರ ಅಂಕಿ ಅಂಶ]
ಖಾಸಗಿ ವಲಯದ ಐಸಿಐಸಿಐ ಮತ್ತು ಇಂಡಸ್ ಲೆಂಡ್ ಬ್ಯಾಂಕ್ ನ ಷೇರುಗಳು ಸಹ ಏರಿಕೆ ಕಂಡವು. ಶುಕ್ರವಾರ ಯುರೋಪಿನ ಮಾರುಕಟ್ಟೆ ಏರಿಕೆಯಲ್ಲಿ ಸಾಗಿದ್ದು ಏಷ್ಯಾ ಮಾರುಕಟ್ಟೆ ಮೇಲೆ ವ್ಯಾಪಕ ಪ್ರಭಾವ ಉಂಟುಮಾಡಿತು.
ಈ ವಾರ ಚೀನಾ ಮಾರುಕಟ್ಟೆಯಲ್ಲಾದ ಕೆಲ ಬದಲಾವಣೆಗಳು ಭಾರತದ ರೂಪಾಯಿ ಕುಸಿಯಲು ಕಾರಣವಾಗಿತ್ತು. ಒಂದೇ ದಿನ ರೂಪಾಯಿ 69 ಪೈಸೆ ಕಳೆದುಕೊಂಡಿತ್ತು. ಶುಕ್ರವಾರ 65.03 ರು. ನಲ್ಲಿ ಅಂತ್ಯವಾಯಿತು.












Click it and Unblock the Notifications