ಫೇಸ್ ಬುಕ್ಕಿನಲ್ಲಿ ಮುಸ್ಲಿಂವಿರೋಧಿ ಪೋಸ್ಟ್ ಹಾಕಿದ ಕಾಪ್ ಸಸ್ಪೆಂಡ್

Posted By:
Subscribe to Oneindia Kannada

ಗುವಾಹಟಿ, ಫೆ. 14: ಸಾಮಾಜಿಕ ಜಾಲ ತಾಣಗಳಲ್ಲಿ ಹೇಗೆ ಕಾರ್ಯನಿರ್ವಹಿಸಬೇಕು ಎಂದು ಸಾರ್ವಜನಿಕರಿಗೆ ಪಾಠ ಹೇಳಿಕೊಡಬೇಕಾದ ಪೊಲೀಸರೆ ಧರ್ಮ ವಿರೋಧಿ ಪೋಸ್ಟ್ ಹಾಕಿದ ಘಟನೆ ನಡೆದಿದೆ. ಅಸ್ಸಾಂನ ಪೊಲೀಸ್ ಉಪಾಧೀಕ್ಷ ಅಂಜನ್ ಬೋರಾ ಅವರು ಫೇಸ್ ಬುಕ್ ಪೋಸ್ಟ್ ನಿಂದಾಗಿ ಸಸ್ಪೆಂಡ್ ಆಗಿದ್ದಾರೆ.

ಫೇಸ್ ಬುಕ್ ನಲ್ಲಿ ಮುಸ್ಲಿಮ್ ವಿರೋಧಿ ಹೇಳಿಕೆಯನ್ನು ಪ್ರಕಟಿಸಿದ ಕಾರಣಕ್ಕೆ ಅಸ್ಸಾಮ್ ನ ಕರ್ಬಿ ಅಂಗ್ ಲಾಂಗ್ ಜಿಲ್ಲೆಯ ಪೊಲೀಸ್ ಅಧಿಕಾರಿ ಅಂಜನ್ ಬೋರಾ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಿ ಅಲ್ಲಿನ ಸರ್ಕಾರ ಆದೇಶ ಹೊರಡಿಸಿದೆ.

Senior Assam cop suspended for anti-Muslim rant on Facebook

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾಂಗ್ರೆಸ್ ಕಾರ್ಯಕರ್ತ ರಫಿಕುಲ್ ಇಸ್ಲಾಮ್ ಸೇರಿದಂತೆ ಅನೇಕ ಮಂದಿಯನ್ನು ನಾನು ಕೊಂದಿದ್ದೇನೆ. ಮಸೀದಿಯಲ್ಲಿ ಪ್ರಾರ್ಥನೆಗಾಗಿ ಮೊಳಗುವ ಅಝಾನ್ ಕರೆ ಕೇಳಲಾಗದು. ಜೈ ಶ್ರೀರಾಮ್, ಜೈ ಹಿಂದೂಸ್ತಾನ್, ಜೈ ಜೈ ಶ್ರೀರಾಮ ಜೈ, ಹಿಂದೂಭೂಮಿ, ಹಿಂದೂಸ್ತಾನದಿಂದ ಮುಸ್ಲಿಮರನ್ನು ತೊಲಗಿಸಲು ಹಿಂದೂಗಳು ಕೈಜೋಡಿಸಬೇಕು ಎಂದು ಫೇಸ್ ಬುಕ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದರು.

ಇತ್ತೀಚೆಗೆ ಬೋಡೋಲ್ಯಾಂಡ್ ಅಲ್ಪಸಂಖ್ಯಾತ ಘಟಕದ ಪತ್ರಿಕಾ ಕಾರ್ಯದರ್ಶಿ ಕೆ ಅಲಿ ಅವರು ಡಿವೈಎಸ್ಪಿ ಬೋರಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A senior Assam police officer Anjan Bora was suspended on Saturday for posting comments against Muslims on Facebook.
Please Wait while comments are loading...