ನಮ್ಮ ಆದ್ಯತೆ ರಾಷ್ಟ್ರ ಮತ್ತು ಮಹಾರಾಷ್ಟ್ರ: ಶಿವಸೇನೆ
ನವದೆಹಲಿ, ಜನವರಿ 24: "ನನ್ನ ಮೊದಲು ಗುರಿ ದೇಶದ ಕಲ್ಯಾಣ ಮತ್ತು ಮಹಾರಾಷ್ಟ್ರದ ಉದ್ಧಾರ" ಎಂದು ಶಿವಸೇನೆ ಹೇಳಿದೆ.
ನಿನ್ನೆ(ಜ.23) ತಾನೇ ಎನ್ ಡಿಎ ಮೈತ್ರಿಕೂಟದೊಂದಿಗೆ ಹೊರಬಂದ ಶಿವಸೇನೆ ತನ್ನ ಉದ್ದೇಶಗಳನ್ನು, ಶಿವಸೇನಾ ಮುಖವಾಣಿ ಸಾಮ್ನಾಕ್ಕೆ ತಿಳಿಸಿದೆ. 'ನಮ್ಮ ಮೊದಲ ಆದ್ಯತೆ ರಾಷ್ಟ್ರ ಮತ್ತು ಮಹಾರಾಷ್ಟ್ರ. ಶಿವಸೇನೆ ಎಂದಿಗೂ ಹಿಂದುತ್ವದ ಉದ್ಧಾರಕ್ಕಾಗಿ ಶ್ರಮಿಸುತ್ತದೆ. ಇದಕ್ಕಾಗಿಯೇ ಶಿವಸೇನೆ ಎಲ್ಲಾ ಆಮಿಷಗಳನ್ನೂ ಬಿಟ್ಟು ಜನರಿಗೋಸ್ಕರ ಕೆಲಸ ಮಾಡಲು ಸಿದ್ಧವಾಗಿದೆ' ಎಂದು ಸಾಮ್ನಾದಲ್ಲಿ ಹೇಳಲಾಗಿದೆ.

ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದ ಶಿವಸೇನೆ, ಜ.23 ರಂದು ಈ ಒಕ್ಕೂಟದಿಂದ ಹೊರಬಂದು 2019 ರ ಲೋಕಸಭಾ ಚುನಾವಣೆ ಮತ್ತು ವಿಧಾನಸಭೆ ಚುನಾವಣೆಯನ್ನೂ ತಾನು ಏಕಾಂಗಿಯಾಗಿ ಎದುರಿಸುವುದಾಗಿ ಹೇಳಿದೆ. ಶಿವಸೇನೆ ಸಂಸ್ಥಾಪಕ ಬಾಳ್ ಠಾಕ್ರೆ ಅವರ ಜನ್ಮದಿನದಂದೇ ಬಿಜೆಪಿಯೊಂದಿಗಿನ ಮೈತ್ರಿಯನ್ನು ಕಡಿದುಕೊಂಡಿದ್ದು ವಿಶೇಷ.












Click it and Unblock the Notifications