ಚುನಾವಣಾ ಆಯೋಗದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ: ಉದ್ಧವ್‌ಗೆ ಮತ್ತೆ ಮುಖಭಂಗ!
ಚುನಾವಣಾ ಆಯೋಗದ ನಿರ್ಧಾರವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದ್ದು ಉದ್ಧವ್ ಠಾಕ್ರೆಗೆ ಮತ್ತೆ ಭಾರೀ ಮುಖಭಂಗವಾಗಿದೆ.
ಏಕನಾಂಥ ಶಿಂಧೆ ಬಣವೇ ನಿಜವಾದ ಶಿವಸೇನೆ ಹಾಗೂ 'ಬಿಲ್ಲು ಮತ್ತು ಬಾಣ' ಚಿಹ್ನೆ ಅವರ ಬಣಕ್ಕೇ ಸೇರಿದ್ದು ಎನ್ನುವ ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಉದ್ಧವ್ ಠಾಕ್ರೆ ಅರ್ಜಿಯನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿದೆ.
ವಿಚಾರಣೆ ಬಳಿಕ ಕೋರ್ಟ್ ಚುನಾವಣಾ ಆಯೋಗದ ನಿರ್ಧಾರ ನಿರಾಕರಿಸಲು ಸಾಧ್ಯವಿಲ್ಲ ಎಂದಿದೆ. ಹೀಗಾಗಿ ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಬಣಕ್ಕೆ ಭಾರೀ ಹಿನ್ನಡೆಯಾಗಿದೆ.

ಅವರು (ಶಿಂಧೆ ಬಣ) ಈಗಾಗಲೇ ಚುನಾವಣಾ ಆಯೋಗದ ಮುಂದೆ ಯಶಸ್ವಿಯಾಗಿದೆ. ನಾವು ಈಗ ಆದೇಶವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡೈ ಚಂದ್ರಚೂದ್ ಹೇಳಿದರು. ಇದರಿಂದಾಗಿ ಉದ್ಧವ್ ಠಾಕ್ರೆ ಬಣಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ.
ಚುನಾವಣಾ ಆಯೋಗದ ನಿರ್ಧಾರ ಎತ್ತಿ ಹಿಡಿದ ಸುಪ್ರೀಂ
ಕಳೆದ ವಾರ ಚುನಾವಣಾ ಆಯೋಗ ಏಕನಾಥ್ ಶಿಂಧೆ ಬಣವೇ ನಿಜವಾದ ಶಿವಸೇನೆ ಎಂದು ಘೋಷಿಸಿತು. ಚುನಾವಣಾ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಉದ್ಧವ್ ಠಾಕ್ರೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಕಳೆದ ದಿನ ಸುಪ್ರೀಂ ಕೋರ್ಟ್ ಉದ್ಧವ್ ಠಾಕ್ರೆ ಅರ್ಜಿ ವಿಚಾರಣೆಯನ್ನು ಇಂದು ಕೈಗೆತ್ತುಕೊಂಡಿತ್ತು. ಬುಧವಾರ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂದ್ ನೇತೃತ್ವದ ಸುಪ್ರೀಂ ಕೋರ್ಟ್ ನ್ಯಾಯಪೀಠ ಮಧ್ಯಾಹ್ನ 3: 30 ಕ್ಕೆ ಈ ವಿಷಯವನ್ನು ಕೇಳಲು ಒಪ್ಪಿಕೊಂಡಿತು. ವಿಚಾರಣೆ ವೇಳೆ ಕೋರ್ಟ್ ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಿಕೊಂಡಿದೆ.

ಉದ್ದಾವ್ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದ ಎಕಾದಾಥ್ ಶಿಂಧೆ ಅವರು ಜೂನ್ 2022 ರಲ್ಲಿ ಪಕ್ಷದಿಂದ ದಂಗೆ ಎದ್ದರು. ಇವರೊಂದಿಗೆ ಕೆಲ ಶಾಸಕರು ಬಂಡಾಯವೆದ್ದರು. ಈ ವೇಳೆ ಉದ್ಧವ್ ಠಾಕ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಮಹಾರಾಷ್ಟ್ರದಲ್ಲಿ ಸರ್ಕಾರ ವಿಭಜನೆಯಾಗಿ ಬಿಜೆಪಿ ಸಹಕಾರದೊಂದಿಗೆ ಏಕನಾಥ ಶಿಂಧೆ ಬಣವೇ ಸರ್ಕಾರವನ್ನು ರಚನೆ ಮಾಡಿದೆ. ಇದಕ್ಕೆ ತದ್ವಿರುದ್ಧವಾಗಿ ಮಾಜಿ ಸಿಎಂ ಉದ್ಧವ್ ಠಾಕ್ರೆ ಧ್ವನಿ ಎತ್ತಿದ್ದಾರೆ.
ಉದ್ಧವ್ ಠಾಕ್ರೆಗೆ ಹಿನ್ನಡೆ
ಜುಲೈ 8, 2022 ರಂದು ವಿಭಜನೆಯ ನಂತರ ಉದ್ದವ್ ಠಾಕ್ರೆ ಅವರು ಶಿವಸೇನೆಯ ಹಾಗೂ 'ಬಿಲ್ಲು ಮತ್ತು ಬಾಣ' ಚಿಹ್ನೆಯು ಕಾನೂನಿನ ಪ್ರಕಾರ ತನ್ನ ಬಣದೊಂದಿಗೆ ಉಳಿಯುತ್ತದೆ ಎಂದು ಹೇಳಿದರು. ಅಕ್ಟೋಬರ್ 8 ರಂದು, ಅಧಿಕೃತ ಮಾನ್ಯತೆ ಘೋಷಿಸುವವರೆಗೆ ಶಿವಸೇನೆ ಹೆಸರು ಅಥವಾ ಅದರ ಚಿಹ್ನೆಯನ್ನು ಬಳಸುವುದನ್ನು ತಡೆಯಲು ಇಸಿಐ ಠಾಕ್ರೆ ಮತ್ತು ಎಕ್ನಾಥ್ ಶಿಂಧೆ ಇಬ್ಬರಿಗೂ ನಿರ್ದೇಶನ ನೀಡಿತು. ಚಿಹ್ನೆಯನ್ನು ಎರಡೂ ಕಡೆಯವರು ಬಳಸಲಾಗಲಿಲ್ಲ.
ತರುವಾಯ ಇಸಿಐ 'ಶಿವ ಸೇನಾ-ಈಧಾವ್ ಬಾಲಸಾಹೇಬ್ ಠಾಕ್ರೆ' ಅನ್ನು ಠಾಕ್ರೆ ಬಣ ಮತ್ತು 'ಬಾಲಸಾಹೆಬಾಂಚಿ ಶಿವಸೇನೆ' (ಬಾಲಾಸಾಹೆಬ್ ಅವರ ಶಿವಸೇನೆ) ಪಕ್ಷದ ಹೆಸರಾಗಿ ಶಿಂಧೆ ಗುಂಪು ಬಳಸುವಂತೆ ಹಂಚಿತು. ಇದರಿಂದ ಬೇಸರಗೊಂಡ ಉದ್ಧವ್ ಠಾಕ್ರೆ ಚುನಾವಣಾ ಆಯೋಗದ ನಿರ್ಧಾರವನ್ನು ಒಪ್ಪಲಿಲ್ಲ. ಇದನ್ನು ಪ್ರಶ್ನಿಸಿದ ಸುಪ್ರೀಂ ಮೆಟ್ಟಿಲೇರಿದ್ದರು. ಆದರೆ ಇಂದು ಸುಪ್ರೀಂಕೋರ್ಟ್ ಕೂಡ ಶಿಂಧೆ ಬಣದ ಪರವಾಗಿ ತೀರ್ಪು ನೀಡಿದ್ದು ಉದ್ಧವ್ ಠಾಕ್ರೆಗೆ ಭಾರೀ ಮುಖಭಂಗವಾಗಿದೆ.












Click it and Unblock the Notifications