OMG! ದೈವಿಕ ಸೆಕ್ಸ್, ಅಲ್ಲಾ ಮಾ ಸೋಫಿಯಾ ಆವಿಷ್ಕಾರ
ನಟನೆಗಿಂತ ಹೆಚ್ಚು ಮೈಮಾಟ, ಕಿತ್ತಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ ಬ್ರಿಟನ್ ಮೂಲದ ನಟಿ ಸೋಫಿಯಾ ಹಯಾತ್ ಅವರ ಹೊಸ ಅವತಾರ ಕಂಡರೆ ಬೆಚ್ಚು ಬೀಳುತ್ತೀರಿ, ಅಲ್ಲಾ ಮಾ ಅವತಾರದಲ್ಲಿ ನೀಡಿರುವ ಬೋಧನೆ ಇಲ್ಲಿದೆ
ಬೆಂಗಳೂರು, ಮೇ 17: ನಟನೆಗಿಂತ ಹೆಚ್ಚು ಮೈಮಾಟ, ಕಿತ್ತಾಟದಿಂದಲೇ ಹೆಚ್ಚು ಜನಪ್ರಿಯತೆ ಗಳಿಸಿದ ಬ್ರಿಟನ್ ಮೂಲದ ನಟಿ ಸೋಫಿಯಾ ಹಯಾತ್ ಅವರ ಹೊಸ ಅವತಾರ ಕಂಡರೆ ಬೆಚ್ಚು ಬೀಳುತ್ತೀರಿ, ಅಲ್ಲಾ ಮಾ ಅವತಾರದಲ್ಲಿ ನೀಡಿರುವ ಬೋಧನೆ ಇಲ್ಲಿದೆ
ಒಂದು ಕಾಲದಲ್ಲಿ ರೋಹಿತ್ ಶರ್ಮ ಹಾಗೂ ವಿರಾಟ್ ಕೊಹ್ಲಿ ಅವರ ಜತೆ ಲೇಟ್ ನೈಟ್ ಪಾರ್ಟಿಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸಲುಗೆಯಿಂದ ಕಾಣಿಸಿಕೊಂಡಿದ್ದ ಸೋಫಿಯಾ ಹಯಾತ್ ನಂತರ ಭಾರತಕ್ಕೆ ಬಂದು ಬಾಲಿವುಡ್ ಗೂ ಕಾಲಿಟ್ಟರು.
ಸೋಫಿಯಾ ಡೈರೀಸ್ ಆಫ್ ಎ ಬಟರ್ ಫ್ಲೈ, ಸೂಪರ್ ಸ್ಟಡ್ ರಿಯಾಲಿಟಿ ಶೋ, ಬಿಗ್ ಬಾಸ್ ನಲ್ಲಿ ಕಾಣಿಸಿಕೊಂಡಿದ್ದ ಸೋಫಿಯಾ ನಂತರ ಗ್ಲಾಮರ್ ಜಗತ್ತಿಗೆ ವಿದಾಯ ಹೇಳಿ ಕಣ್ಮರೆಯಾದರು.

ಮದರ್(ಕ್ರೈಸ್ತ್ರ ಸನ್ಯಾಸಿನಿ)ಆಗಿ ಕಾಣಿಸಿಕೊಂಡ ಸೋಫಿಯಾ ಬಹುಶಃ, ತನ್ನ ಮದುವೆಗೆ ದೇವರನ್ನು(ಆಕೆಯೇ ಹೇಳುವಂತೆ) ಅತಿಥಿಯಾಗಿ ಕರೆಸಿಕೊಂಡ ಏಕೈಕ 'ನನ್'.
ಈಗ ಇಡೀ ಜಗತ್ತಿಗೆ ತಿಳಿಯದ, ನಿಮ್ಮ ತಾತ ಮುತ್ತಾತ, ಅಜ್ಜಿ, ಅಮ್ಮ ಹೇಳಿಕೊಡದ ಜೀವನ ರಹಸ್ಯವನ್ನು ಸೋಫಿಯಾ ಹಯಾತ್ ನಿಮ್ಮ ಮುಂದಿಡುತ್ತಿದ್ದಾರೆ. ಅದುವೇ ದೈವಿಕ ಸೆಕ್ಸ್. ನಾನು ನೀನು ಬೇರೆ ಅಲ್ಲಾ ಎಂದು ಸಂಗಾತಿಗಳು ಒಂದಾಗುವ ಲೈಂಗಿಕ ಪ್ರಕ್ರಿಯೆಗೆ ದೈವಿಕ ಅಂಶಗಳಿವೆ ಎಂದು ಸೋಫಿಯಾ ಬೋಧಿಸಿದ್ದಾರೆ.
ಲವ್ ಎಂಬುದನ್ನು ಮಾರಾಟ ವಸ್ತುವಿನಿಂತೆ ಕಾಣಬೇಡಿ. ಇದು ಮೋಕ್ಷದ ಮಾರ್ಗ ತೋರಿಸುವ ವಿಧಾನ. ಇದರ ಶಕ್ತಿ ತಿಳಿಯಲು ಅಚರಣೆಯೊಂದೇ ಮಾರ್ಗ. ದೈಹಿಕ ಕಾಮನೆ ತೀರಿಸಿಕೊಳ್ಳುವುದಷ್ಟೇ ಅಲ್ಲ, ಇದು ಮುಕ್ತಿಗೆ ದಾರಿ ತೋರಿಸುವುದು ಎಂದು ಇನ್ಸ್ಟಾಗ್ರಾಮ್ ನಲ್ಲಿ ಹೇಳಿಕೊಂಡಿದ್ದಾರೆ.












Click it and Unblock the Notifications