ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಧವಾರದ ಭಾರತ ಬಂದ್‌ನ 12 ಚಿತ್ರಗಳು?

|
Google Oneindia Kannada News

ನವದೆಹಲಿ, ಸೆ.02 : ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ದೇಶದ ಹತ್ತು ಪ್ರಮುಖ ಕಾರ್ಮಿಕ ಸಂಘಟನೆಗಳು ಬುಧವಾರ ಕರೆ ನೀಡಿದ್ದ ಭಾರತ ಬಂದ್ ಗೆ ದೇಶಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪಶ್ಚಿಮಬಂಗಾಳ, ಕೇರಳ, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣದಲ್ಲಿ ಉತ್ತಮ ಪ್ರತಿಕ್ರಿತಯೆ ವ್ಯಕ್ತವಾಗಿದ್ದು ನಾಗರಿಕರು ಸ್ವಯಂ ಪ್ರೇರಿತವಾಗಿ ಬಂದ್ ಗೆ ಬೆಂಬಲ ನೀಡಿದ್ದರು.

ಪಶ್ಚಿಮಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಕಾರ್ಯತರ್ಯರ ನಡುವೆ ಗಲಾಟೆ ನಡೆದಿದೆ. ದೇಶಾದ್ಯಂತ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಉಳಿದಂತೆ ಬ್ಯಾಂಕ್, ವಿಮೆ, ಅಂಚೆಕಚೇರಿ ಬಂದ್ ಆಗಿದ್ದವು. ಉಳಿದಂತೆ ಟ್ಯಾಕ್ಸಿ, ಆಟೋ, ಮೆಟ್ರೋ, ರೈಲು ಸಂಚಾರ ಎಂದಿನಂತೆ ಮುಂದುವರಿದಿತ್ತು.[ಬೆಂಗಳೂರಲ್ಲಿ ಬಸ್ ಇಲ್ಲ, ಬಾಕಿ ಎಲ್ಲ ಎಂದಿನಂತೆ]

ಬೆಂಗಳೂರು ಮತ್ತು ಮುಂಬೈ, ಅಹಮ,ದಾಬಾದ್ ಗಳಲ್ಲಿ ಜನ ಜೀವನದ ಮೇಲೆ ಬಂದ್ ಯಾವ ಪರಿಣಾಮವನ್ನು ಉಂಟುಮಾಡಲಿಲ್ಲ. ದೇಶದ ಅನೇಕ ಕಡೆ ರೈಲು ತಡೆದ ಕಾರ್ಮಿಕ ಸಂಘಟನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.(ಪಿಟಿಐ ಚಿತ್ರಗಳು)

ಮಾರಾಮಾರಿ

ಮಾರಾಮಾರಿ

ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಕಾರ್ಯಕರ್ಯರ ನಡುವೆ ಮಾರಾಮಾರಿ ನಡೆದಿದ್ದು ಪೊಲೀಸರು ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಕಾರ್ಯಕರ್ತರ ಬಂಧನ

ಕಾರ್ಯಕರ್ತರ ಬಂಧನ

ಗುಹವಾಟಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಐಟಿಯು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರಲ್ಲಿ ಪ್ರತಿಭಟನೆ

ಬೆಂಗಳೂರಿನ ಪುರಭವನದ ಎದುರು ಪ್ರತಿಭಟನೆ ನಡೆಸಿದ ವಿವಿಧ ಕಾರ್ಮಿಕ ಸಂಘಟನೆ ಕಾರ್ಯಕರ್ತರು.

ಕೋಲ್ಕತ್ತಾದಲ್ಲಿ ಉತ್ತಮ ಪ್ರತಿಕ್ರಿಯೆ

ಕೋಲ್ಕತ್ತಾದಲ್ಲಿ ಉತ್ತಮ ಪ್ರತಿಕ್ರಿಯೆ

ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಬಂದ್ ಗೆ ಕೋಲ್ಕತ್ತಾದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬುಧವಾರ ಜನರಿಲ್ಲದೇ ಬಿಕೋ ಎನ್ನುತ್ತಿದ್ದ ಕೋಲ್ಕತ್ತಾದ ರಸ್ತೆಗಳು.

ಆಟೋ ಇಲ್ಲ, ಟ್ಯಾಕ್ಸಿ ಇಲ್ಲ

ಆಟೋ ಇಲ್ಲ, ಟ್ಯಾಕ್ಸಿ ಇಲ್ಲ

ರಾಜಧಾನಿ ನವದೆಹಲಿಯಲ್ಲಿ ಮನೆಗೆ ತೆರಳಲು ಆಟೋ ಮತ್ತು ಟ್ಯಾಕ್ಸಿ ಸಿಗದೇ ಪರದಾಡಿದ ಮಹಿಳೆ ಕಾಲ್ನಡಿಗೆಯಲ್ಲೇ ತೆರಳಿದರು.

ಪ್ರತಿಭಟನಾಕಾರರ ಬಂಧನ

ಪ್ರತಿಭಟನಾಕಾರರ ಬಂಧನ

ಕೋಲ್ಕತ್ತಾದಲ್ಲಿ ರಸ್ತೆ ತಡೆಯಲು ಯತ್ನಿಸಿದ ಮಹಿಳಾ ಕಾರ್ಯಕರ್ತರನ್ನು ಬಂಧಿಸುವಾಗ ಕಂಡು ಬಂದ ದೃಶ್ಯ.

ಬ್ಯಾಂಕ್ ನಲ್ಲಿ ಗ್ರಾಹಕರಿಲ್ಲ

ಬ್ಯಾಂಕ್ ನಲ್ಲಿ ಗ್ರಾಹಕರಿಲ್ಲ

ಬಂದ್ ಹಿನ್ನೆಲೆಯಲ್ಲಿ ಎಲ್ಲ ಬ್ಯಾಂಕ್ ಗಳು ಬುಧವಾರ ಕಾರ್ಯ ನಿರ್ವಹಿಸಲಿಲ್ಲ. ಬಿಕೆನಾರ್ ನ ಬ್ಯಾಂಕ್ ವೊಂದು ಗ್ರಾಹಕರಿಲ್ಲದೇ ಖಾಲಿ ಹೊಡೆಯುತ್ತಿತ್ತು.

ಆಟೋ ನಿಲ್ದಾಣ ಹೀಗಿತ್ತು

ಆಟೋ ನಿಲ್ದಾಣ ಹೀಗಿತ್ತು

ಸದಾ ಜನರಿಂದ ಕಿಕ್ಕಿರಿದು ತುಂಬಿರುತ್ತಿದ್ದ ದೆಹಲಿಯ ಆಟೋ ನಿಲ್ದಾಣ ಜನರಿಲ್ಲದೇ ಬಣಗುಡುತ್ತಿತ್ತು.

ರೈಲು ತಡೆದು ಪ್ರತಿಭಟನೆ

ರೈಲು ತಡೆದು ಪ್ರತಿಭಟನೆ

ಸಿಐಟಿಯು ಮತ್ತು ಎಐಟಿಯುಸಿ ಕಾರ್ಯಕರ್ತರು ಗುಹವಾಟಿಯಲ್ಲಿ ರೈಲು ತಡೆದು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಬೆಂಗಳೂರಲ್ಲಿ ಕಾರ್ಮಿಕ ಶಕ್ತಿ ಪ್ರದರ್ಶನ

ಬೆಂಗಳೂರಲ್ಲಿ ಕಾರ್ಮಿಕ ಶಕ್ತಿ ಪ್ರದರ್ಶನ

ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ತೆರಳಿದ ಕಾರ್ಮಿಕ ಸಂಘಟನೆ ಕಾರ್ಯಕರ್ತರು ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು.

ಮನೆಗೆ ಹೋಗೋದು ಹೇಗೆ?

ಮನೆಗೆ ಹೋಗೋದು ಹೇಗೆ?

ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದ ಬಸ್ ಸಂಚಾರ ಸ್ಥಗಿತವಾಗಿತ್ತು. ಮನೆಗೆ ತೆರಳಬೇಕಿದ್ದ ಪ್ರಯಾಣಿಕರು ಸಂಚಾರಕ್ಕೆ ವಾಹನವಿಲ್ಲದೇ ಪರದಾಡಿದರು.

ಪ್ರತಿಭಟನಾ ಮೆರವಣಿಗೆ

ಪ್ರತಿಭಟನಾ ಮೆರವಣಿಗೆ

ಬಂದ್ ಹಿನ್ನೆಲೆಯಲ್ಲಿ ಕೋಲ್ಕತ್ತಾದ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡ ಕಾರ್ಮಿಕ ಸಂಘಟನೆ ಪ್ರಮುಖರಾದ ಬೀಮೇನ್ ಬೋಸ್ ಮತ್ತಿತರರು.

English summary
Normal life was affected in many states, especially in West Bengal, Kerala, Bihar, Himachal Pradesh. The nation-wide general strike, Bharat Bandh, was called by 11 central trade unions against the policies of the BJP-led NDA government at the Centre. Train services were hit as bandh supporters blocked railways tracks at many places. Buses and autos did not ply at most of the cities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X