ರಾಮ್ ರಹೀಮ್ ಕಾಮ ಗುಹೆಯಿಂದ ಹೊರಬರುತ್ತಿರುವ ನಿಗೂಢ ರಹಸ್ಯಗಳು

Posted By: ವಿಕಾಸ್ ನಂಜಪ್ಪ
Subscribe to Oneindia Kannada

ಹರಿಯಾಣದ ಸಿರ್ಸಾದಲ್ಲಿರುವ ಡೇರಾ ಸಚ್ಛಾ ಸೌಧ ಮುಖ್ಯ ಸ್ಥಾನದಿಂದ ಲಖನೌದಲ್ಲಿರುವ ಜಿಸಿಆರ್ ಜಿ ಇನ್ ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಗೆ ಹದಿನಾಲ್ಕು ದೇಹಗಳನ್ನು ಕಳಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ತಿಳಿಸಿದೆ.

"ಅಗತ್ಯ ಅನುಮತಿ ಅಥವಾ ಮರಣ ಪ್ರಮಾಣ ಪತ್ರವೂ ಸಮಸ್ಯೆಗಳು ಇರುವಂತೆ ಕಾಲೇಜಿನವರು ಆ ಹದಿನಾಲ್ಕು ಶವಗಳನ್ನು ಡೇರಾ ಸಚ್ಛಾ ಸೌಧದಿಂದ ಪಡೆದಿದ್ದಾರೆ" ಎಂಬುದನ್ನು ಕೂಡ ಉಲ್ಲೇಖ ಮಾಡಲಾಗಿದೆ.

ಹನಿಪ್ರೀತ್ 'ಬೇಗೆ'ಯಲ್ಲಿ ಪತ್ನಿಯನ್ನೇ ಮರೆತ ರಾಮ್ ರಹೀಂ!

ಗುರ್ಮೀತ್ ರಾಮ್ ರಹೀಮ್ ಸಿಂಗ್ ಮಹಿಳೆಯರ ಮೇಲೆ ಅತ್ಯಾಚಾರ ಮಾಡಲು ಬಳಸುತ್ತಿದ್ದ ಎಂದು ಆರೋಪಿಸಿರುವ, ಡೇರಾ ಸಚ್ಛಾ ಸೌಧದಲ್ಲಿ ಗುಹೆ ಎನಿಸಿಕೊಂಡಿರುವ ಸ್ಥಳವನ್ನು ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ.

ರೂರ್ಕಿಯ ಐಐಟಿ ತಜ್ಞರು ಗುಹೆಯನ್ನು ಪರಿಶೀಲಿಸಿದ್ದಾರೆ ಎಂದು ಹರಿಯಾಣ ಸರಕಾರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅತ್ಯಾಚಾರ ಸಂತ್ರಸ್ತೆಯ ಮಾಹಿತಿ ಪ್ರಕಾರ, ಗುಹೆ ಎಂದೇ ಕರೆಸಿಕೊಳ್ಳುವ ರಾಮ್ ರಹೀಮ್ ಉಳಿದುಕೊಳ್ಳುತ್ತಿದ್ದ ಸ್ಥಳದಲ್ಲೇ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದವು.

ರಾಮ್ ರಹೀಂ ಬಾಬಾ ಆಶ್ರಮದಿಂದ ಶಸ್ತ್ರಾಸ್ತ್ರ ವಶ

ಆದರೆ, ಡೇರಾ ಸಚ್ಛಾ ಸೌಧದ ಅನುಯಾಯಿಗಳು ಹೇಳುವ ಪ್ರಕಾರ, ಮುಖ್ಯಸ್ಥ ರಾಮ್ ರಹೀಮ್, ಆತನ ಕೆಲ ನಿಕಟವರ್ತಿಗಳು ಬಿಟ್ಟರೆ ಉಳಿದವರಿಗೆ 'ಗುಹೆ' ಹಾಗೂ ಇತರ ಖಾಸಗಿ ಸ್ಥಳಗಳಿಗೆ ಪ್ರವೇಶ ಇರಲಿಲ್ಲ.

ಸತೀಶ್ ಮೆಹ್ರಾಗೆ ಅಧಿಕೃತ ಅಧಿಕಾರ

ಸತೀಶ್ ಮೆಹ್ರಾಗೆ ಅಧಿಕೃತ ಅಧಿಕಾರ

"ಈಗಾಗಲೇ ಡೇರಾ ಸಚ್ಛಾ ಸೌಧದಲ್ಲಿ ಶೋಧ ಕಾರ್ಯಾಚರಣೆ ನಡೆಸುತ್ತಿರುವ ಇತರ ತಂಡಗಳ ಜತೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಸಂಪರ್ಕದಲ್ಲಿದ್ದಾರೆ" ಎಂದು ಹರಿಯಾಣದ ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕ ಸತೀಶ್ ಮೆಹ್ರಾ ಮಾಹಿತಿ ನೀಡಿದ್ದಾರೆ. ಮಾಧ್ಯಮಗಳಿಗೆ ಮಾಹಿತಿ ಒದಗಿಸಲು ಸರಕಾರ ಮೆಹ್ರಾಗೆ ಅಧಿಕೃತವಾಗಿ ಅಧಿಕಾರ ನೀಡಿದೆ.

ಕಣ್ಣೀರಿಡುತ್ತಾ ಬರುತ್ತಿದ್ದ ಹೆಣ್ಣುಮಕ್ಕಳು

ಕಣ್ಣೀರಿಡುತ್ತಾ ಬರುತ್ತಿದ್ದ ಹೆಣ್ಣುಮಕ್ಕಳು

ಇನ್ನು ರಾಮ್ ರಹೀಮ್ ವಿರುದ್ಧ ದೂರು ನೀಡಿದ ಮಹಿಳೆಯು ಹೇಳುವುದು ಏನೆಂದರೆ, ಬಾಬಾ ಲೈಂಗಿಕವಾಗಿ ದೌರ್ಜನ್ಯ ನಡೆಸಿದ ಸ್ಥಳ ಅದೇ. ಅದಕ್ಕೂ ಮುಂಚೆ ಕೂಡ ಆ ಗುಹೆಯಿಂದ ಹೆಣ್ಣುಮಕ್ಕಳು ಕಣ್ಣೀರು ಇಡುತ್ತಾ ಬರುವುದನ್ನು ನೋಡಿದ್ದರಂತೆ. ಇನ್ನು ಗುಹೆಯ ಪ್ರವೇಶದಲ್ಲಿ ಹೆಣ್ಣುಮಕ್ಕಳು ಕಾವಲಿರುತ್ತಿದ್ದರಂತೆ.

ಅಪ್ರಾಪ್ತರು ಸಿಕ್ಕಿದರು

ಅಪ್ರಾಪ್ತರು ಸಿಕ್ಕಿದರು

ಡೇರಾ ಸಚ್ಛಾ ಸೌಧದ ಶೋಧ ಕಾರ್ಯಾಚರಣೆ ವೇಳೆಯಲ್ಲಿ ಐವರು ಬಾಲಕರು ಪತ್ತೆಯಾಗಿದ್ದಾರೆ. ಅವರ ಪೈಕಿ ಇಬ್ಬರು ಅಪ್ರಾಪ್ತರು. "ಇಬ್ಬರು ಅಪ್ರಾಪ್ತರು ಹರಿಯಾಣ ಹಾಗೂ ಉತ್ತರಪ್ರದೇಶದವರು. ಇಬ್ಬರನ್ನೂ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಸುಪರ್ದಿಗೆ ಒಪ್ಪಿಸಲಾಗಿದೆ" ಎಂದು ಮೆಹ್ರಾ ತಿಳಿಸಿದ್ದಾರೆ.

ವಸ್ತುಗಳು ಜಿಲ್ಲಾಡಳಿತದ ವಶಕ್ಕೆ

ವಸ್ತುಗಳು ಜಿಲ್ಲಾಡಳಿತದ ವಶಕ್ಕೆ

ಡೇರಾದ ಒಳಗೆ ಇದ್ದ ವಾಕಿ ಟಾಕಿ ವಶಪಡಿಸಿಕೊಂಡಿರುವುದಾಗಿ ಮಾಹಿತಿ ಸಿಕ್ಕಿದೆ. "ಒಳಗೆ ಏನೆಲ್ಲ ವಸ್ತುಗಳು ಸಿಗುತ್ತವೋ ಅವುಗಳನ್ನು ಜಿಲ್ಲಾಡಳಿತಕ್ಕೆ ನೀಡಲಾಗುವುದು. ಆ ನಂತರ ಕೋರ್ಟ್ ಆಯುಕ್ತರು ನೀಡಿದ ಆದೇಶವನ್ನು ಪಾಲಿಸಲಾಗುವುದು" ಎಂದು ಮೆಹ್ರಾ ಮಾಹಿತಿ ನೀಡಿದ್ದಾರೆ.

ಪೊಲೀಸ್, ಪ್ಯಾರಾ ಮಿಲಿಟರಿ ಬಂದೋಬಸ್ತ್

ಪೊಲೀಸ್, ಪ್ಯಾರಾ ಮಿಲಿಟರಿ ಬಂದೋಬಸ್ತ್

ಪೊಲೀಸ್, ಪ್ಯಾರಾ ಮಿಲಿಟರಿ ಬಂದೋಬಸ್ತ್ ನಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸರಕಾರದ ವಿವಿಧ ಇಲಾಖೆ ಅಧಿಕಾರಿಗಳು ಕೂಡ ಹಾಜರಿದ್ದಾರೆ. ಶನಿವಾರ ಬೆಳಗ್ಗೆ ಎಂಟು ಗಂಟೆ ಹೊತ್ತಿಗೆ ಆರಂಭಿಸಿದ್ದಾರೆ. ಈ ಇಡೀ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತಿದೆ. ಈ ಬಗ್ಗೆ ನಿವೃತ್ತ ನ್ಯಾ.ಎ.ಕೆ.ಎಸ್. ಪವಾರ್ ನಿಗಾ ವಹಿಸುತ್ತಿದ್ದಾರೆ.

ನ್ಯಾಯಾಂಗದ ಮೇಲುಸ್ತುವಾರಿ

ನ್ಯಾಯಾಂಗದ ಮೇಲುಸ್ತುವಾರಿ

ಸದ್ಯಕ್ಕೆ ಗುರ್ಮೀತ್ ರಾಮ್ ರಹೀಮ್ ಸಿಂಗ್ ರೋಹ್ಟಕ್ ಜೈಲಿನಲ್ಲಿದ್ದಾನೆ. ನ್ಯಾಯಾಂಗದ ಮೇಲುಸ್ತುವಾರಿಯಲ್ಲಿ ಡೇರಾ ಸಚ್ಛಾ ಸೌಧದ ಶೋಧಕ್ಕಾಗಿ ಅನುಮತಿ ನೀಡಬೇಕು ಎಂದು ಹರಿಯಾಣ ಸರಕಾರ ಶುಕ್ರವಾರ ಅರ್ಜಿ ಹಾಕಿಕೊಂಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
As many as 14 bodies were sent from the Dera Sacha Sauda headquarters in Sirsa to the GCRG institute of Medical Sciences in Lucknow, a Union Health Ministry note has said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ