Breaking: 2 ದಿನದಲ್ಲಿ 2ನೇ ಬಾರಿ ವಂದೇ ಭಾರತ್ ರೈಲು ಅಪಘಾತ
ಗಾಂಧಿನಗರ, ಅಕ್ಟೋಬರ್ 7: ಮುಂಬೈ ಸೆಂಟ್ರಲ್ ಮತ್ತು ಗಾಂಧಿನಗರ ನಡುವೆ ಓಡುತ್ತಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ಶುಕ್ರವಾರ ಜಾನುವಾರುಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಗುಜರಾತ್‌ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಹೊಸದಾಗಿ ಪರಿಚಯಿಸಲಾದ ಸೆಮಿ-ಹೈ ಸ್ಪೀಡ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ ಹೊಡೆದು ಸಣ್ಣ ಹಾನಿಗೊಳಗಾದ ಒಂದು ದಿನದ ಮರುದಿನವೇ ಅಂಥದ್ದೇ ಘಟನೆ ವರದಿಯಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ಗುಜರಾತ್‌ನ ಆನಂದ್ ನಿಲ್ದಾಣದ ಬಳಿ ಶುಕ್ರವಾರ ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಖಭಾಗಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ. ಈ ಘಟನೆಯಲ್ಲಿ ಫಲಕದಲ್ಲಿ ಸಣ್ಣ ಹಾನಿ ಹೊರತುಪಡಿಸಿದರೆ ಅರೆ-ಹೈ ಸ್ಪೀಡ್ ರೈಲಿಗೆ ಹೆಚ್ಚಿನ ಹಾನಿಯಾಗಿಲ್ಲ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತ ತಪ್ಪಿಸಲಾಗದು ಎಂದ ಸಚಿವರು:
ಹಳಿಗಳ ಮೇಲೆ ಜಾನುವಾರುಗಳ ಡಿಕ್ಕಿಯನ್ನು ತಪ್ಪಿಸಲಾಗದು ಮತ್ತು ಸೆಮಿ-ಹೈ ಸ್ಪೀಡ್ ರೈಲನ್ನು ವಿನ್ಯಾಸಗೊಳಿಸುವಾಗ ಇದನ್ನು ಮನಸ್ಸಿನಲ್ಲಿಟ್ಟುಕೊಳ್ಳಲಾಗಿದೆ ಎಂದು ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
ಶುಕ್ರವಾರ ಬೆಳಗ್ಗೆಯಷ್ಟೇ ರೈಲು ದುರಸ್ತಿ:
ಮುಂಬೈ ಸೆಂಟ್ರಲ್‌ನಿಂದ ಗಾಂಧಿನಗರ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಕೋನ್ ಅನ್ನು ಮುಂಬೈ ಸೆಂಟ್ರಲ್‌ನಲ್ಲಿರುವ ಕೋಚಿಂಗ್ ಕೇರ್ ಸೆಂಟರ್‌ನಲ್ಲಿ ದುರಸ್ತಿ ಮಾಡಲಾಗಿತ್ತು. ಗುಜರಾತ್‌ನ ವತ್ವಾ ಮತ್ತು ಮಣಿನಗರ ನಿಲ್ದಾಣಗಳ ನಡುವೆ ಬೆಳಿಗ್ಗೆ 11:18 ರ ಸುಮಾರಿಗೆ ಜಾನುವಾರುಗಳ ಹಿಂಡಿಗೆ ರೈಲು ಡಿಕ್ಕಿ ಹೊಡೆದು ರೈಲನ್ನು 20 ನಿಮಿಷಗಳ ಕಾಲ ನಿಲ್ಲಿಸಬೇಕಾಯಿತು. ಆದಾಗ್ಯೂ, ಯಾವುದೇ ರೀತಿಯ ಗಂಭೀರವಾದ ಕ್ರಿಯಾತ್ಮಕ ಭಾಗವು ಹಾನಿಗೊಳಗಾಗಿರಲಿಲ್ಲ












Click it and Unblock the Notifications