2ನೇ ದಿನ ಪ್ಯಾಸೆಂಜರ್ ರೈಲಿಗೆ 1,69,039 ಪ್ರಯಾಣಿಕರಿಂದ ಬುಕ್ಕಿಂಗ್!

ನವದೆಹಲಿ, ಮೇ.12: ಭಾರತ ಸಂಪರ್ಕ ಕೊಂಡಿ ಎನಿಸಿರುವ ರೈಲುಗಳಲ್ಲಿ ಸೀಟ್ ರಿಸರ್ವೇಶನ್ ಗೆ ಪ್ರಯಾಣಿಕರು ಮುಗಿ ಬೀಳುತ್ತಿದ್ದಾರೆ. ಭಾರತ ಲಾಕ್ ಡೌನ್ ನಡುವೆ ಪ್ಯಾಸೆಂಜರ್ ರೈಲುಗಳಲ್ಲಿ ರಿಸರ್ವೇಶನ್ ಮಾಡುವುದಕ್ಕೆ ಭಾರತೀಯ ರೈಲ್ವೆ ಅನುಮತಿ ನೀಡಿದ ಹಿನ್ನೆಲೆ ಎರಡನೇ ದಿನ 1,69,039 ಪ್ರಯಾಣಿಕರು ಸೀಟ್ ರಿಸರ್ವ್ ಮಾಡಿದ್ದಾರೆ.

ಮಂಗಳವಾರದಿಂದ ಭಾರತದಲ್ಲಿ ಪ್ಯಾಸೆಂಜರ್ ರೈಲು ಸಂಚಾರ ಆರಂಭವಾಗಿದ್ದು, ಇದಕ್ಕೂ ಮುನ್ನ ದಿನ 54,000ಕ್ಕೂ ಅಧಿಕ ಪ್ರಯಾಣಿಕರು ಆನ್ ಲೈನ್ ನಲ್ಲಿಯೇ ಸೀಟ್ ರಿಸರ್ವ್ ಮಾಡಿದ್ದರು. 30,000ಕ್ಕೂ ಅಧಿಕ ಪ್ರಯಾಣಿಕರು ಪಿಎನ್ಆರ್ ಜನರೇಟ್ ಮಾಡಿಕೊಂಡಿದ್ದರು.

ಎರಡನೇ ದಿನವಾದ ಮಂಗಳವಾರ ದೇಶದಲ್ಲಿ 90,331 ಪ್ರಯಾಣಿಕರಿಗೆ ಪಿಎನ್ಆರ್ ಜನರೇಟ್ ಮಾಡಿಕೊಂಡಿದ್ದಾರೆ. ಒಂದೇ ದಿನದಲ್ಲಿ 30 ರೈಲುಗಳಿಗೆ ಬರೋಬ್ಬರಿ 1,69,039 ಪ್ರಯಾಣಿಕರು ಆನ್ ಲೈನ್ ನಲ್ಲಿ ಟಿಕೆಟ್ ಬುಕ್ ಮಾಡಿದ್ದಾರೆ.

 Second Day IRCTC Reservations Were Issued 1,69,039 Passengers

ದೇಶದಲ್ಲಿ 30 ರೈಲುಗಳ ಸಂಚಾರಕ್ಕೆ ಅನುಮತಿ:

ಭಾರತ ಲಾಕ್ ಡೌನ್ ನಡುವೆಯೇ ದೇಶದ ಸಂಪರ್ಕ ಕೊಂಡಿ ರೈಲ್ವೆ ಸಂಚಾರಕ್ಕೆ ಮೇ.12ರಿಂದ ಅನುಮತಿ ನೀಡಲಾಗಿತ್ತು. ಪ್ಯಾಸೆಂಜರ್ ರೈಲುಗಳ ಸಂಚಾರಕ್ಕಾಗಿ ಆನ್ ಲೈನ್ ಗಳಲ್ಲಿ ಟಿಕೆಟ್ ಬುಕ್ಕಿಂಗ್ ಆರಂಭಿಸಲಾಗಿದ್ದು, ಬುಕ್ಕಿಂಗ್ ಆರಂಭಗೊಂಡು ಕೆಲಗಂಟೆಗಳಲ್ಲೇ ಎಲ್ಲ ಟಿಕೆಟ್ ಗಳು ಬುಕ್ ಆಗುತ್ತಿವೆ.

ರಾಷ್ಟ್ರ ರಾಜಧಾನಿ ನವದೆಹಲಿ, ದಿಬ್ರುಘರ್, ಅಗರ್ತಲಾ, ಹೌರಾ, ಪಾಟ್ನಾ, ಬಿಸಲ್ ಪುರ್, ರಾಂಚಿ, ಭುವನೇಶ್ವರ್, ಸಿಕಂದರಾಬಾದ್, ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮಡಗಾವ್, ಕೇಂದ್ರ ಮುಂಬೈ, ಅಹ್ಮದಾಬಾದ್ ಹಾಗೂ ಜಮ್ಮುವಿನಲ್ಲಿ ರೈಲ್ವೆ ಸೇವೆ ಆರಂಭವಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+