School Holiday: ನಾಳೆ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ
School Holiday: ದೇಶದ ಹಲವೆಡೆ ಇಲ್ಲಿವರೆಗೂ ಶಾಲೆಗಳಿಗೆ ಕಾರಣಾಂತರಗಳಿಂದ ಸಾಲು ರಜೆಗಳೇ ಸಿಕ್ಕಿವೆ. ಹಾಗೆಯೇ ನಾಳೆ ಅಂದ್ರೆ ಆಗಸ್ಟ್ 18ರ ಸೋಮವಾರ ಎಲ್ಲಾ ಶಾಲೆಗಳು ಮುಚ್ಚಲ್ಪಡಲಿವೆ ಎಂದು ಘೋಷಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಹಲವೆಡೆ ಇಲ್ಲಿವರೆಗೂ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ವಿಶೇಷ ಕಾರ್ಯಗಳು, ಭಾರೀ ಮಳೆಯಂತಹ ಸಂದರ್ಭಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಜೆಗಳನ್ನು ಘೋಷಣೆ ಮಾಡಲಾಗಿದೆ. ಹಾಗೆಯೇ ಇದೀಗ ಆಗಸ್ಟ್ 18ರಂದು ಈ ಭಾಗದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಆಗಸ್ಟ್ 18ರ ಸೋಮವಾರ ಚಂಡೀಗಢದಲ್ಲಿನ ಎಲ್ಲಾ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಸಂಸ್ಥೆಗಳ ಶಾಲೆಗಳು ಮುಚ್ಚಲ್ಪಡುತ್ತವೆ ಎಂದು ಪಂಜಾಬ್ ರಾಜ್ಯಪಾಲ ಮತ್ತು ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿ ಗುಲಾಬ್ ಚಂದ್ ಕಟಾರಿಯಾ ಘೋಷಣೆ ಮಾಡಿದ್ದಾರೆ.
ಶುಕ್ರವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ರಾಜ್ಯಪಾಲ ಕಟಾರಿಯಾ ಅವರು ಸಭೆಯನ್ನುದ್ದೇಶಿಸಿ ಮಾತನಾಡುವ ವೇಳೆ ಶಾಲೆಗಳಿಗೆ ರಜೆ ಘೋಷಣೆ ಮಾಡಿದರು. ಈ ನಿರ್ಧಾರವು ನಗರದಾದ್ಯಂತ ಎಲ್ಲಾ ವಿದ್ಯಾರ್ಥಿಗಳು ಮತ್ತು ಬೋಧನಾ ಸಿಬ್ಬಂದಿಗೆ ಅನ್ವಯ ಆಗಲಿದೆ ಅಂತಲೂ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಹಾಗೂ ಶಾಲೆಗಳ ಅನುಕೂಲಕ್ಕಾಗಿ ಈ ರಜೆಯನ್ನು ಘೋಷಣೆ ಮಡಲಾಗಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ. ಆದರೆ, ಈ ರಜೆ ಘೋಷಣೆಗೆ ಯಾವುದೇ ನಿರ್ದಿಷ್ಟ ಕಾರಣವನ್ನು ವಿವರವಾಗಿ ಉಲ್ಲೇಖಿಸಿಲ್ಲ. ಆದರೂ, ಚಂಡೀಗಢದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ಹಬ್ಬದೂಟವೇ ಬಡಿಸಿದಂತಾಗಿದೆ.
79ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ರಾಜ್ಯಪಾಲ ಕಟಾರಿಯಾ ರಾಷ್ಟ್ರಧ್ವಜಾರೋಹಣ ಮಾಡಿ ಏಕತೆ, ದೇಶಭಕ್ತಿ ಮತ್ತು ಪ್ರಗತಿ ಮೌಲ್ಯಗಳ ಬಗ್ಗೆ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ದೇಶಭಕ್ತಿ ಗೀತೆಗಳು ಮತ್ತು ಶಾಲಾ ಮಕ್ಕಳಿಂದ ಭಾರತದ ಪರಂಪರೆ ಮತ್ತು ಇತಿಹಾಸವನ್ನು ಪ್ರತಿಬಿಂಬಿಸುವ ಪ್ರದರ್ಶನಗಳು ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಶಾಲಾ ರಜೆಯಿಂದಾಗಿ ಆಗಸ್ಟ್ 18ರಂದು ಎಲ್ಲಾ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಸ್ಥಗಿತಗೊಂಡಿರುತ್ತವೆ. ಇನ್ನು ಆಗಸ್ಟ್ 19, ಮಂಗಳವಾರದಿಂದ ಎಂದಿನಂತೆ ಶಾಲೆಗಳು ಆರಂಭವಾಗಲಿದ್ದು, ಕಾರ್ಯಚಟುವಟಿಕೆಗಳು ಪುನರಾರಂಭ ಆಗುತ್ತವೆ ಅಂತಲೂ ಮಾಹಿತಿ ನೀಡಿದ್ದಾರೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಾರಣಾಂತರಗಳಿಂದ ಸಾಲು ರಜೆಗಳನ್ನು ಘೋಷಣೆ ಮಾಡಲಾಗಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.
ಅದರಲ್ಲೂ, ಭಾರೀ ಮಳೆಯಿಂದ ಜಲಪ್ರಳಯ ಹಿನ್ನೆಲೆ ಕೆಲ ರಾಜ್ಯಗಳಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸಾಲು ರಜೆಗಳನ್ನೇ ಘೋಷಣೆ ಮಾಡಲಾಗಿದೆ. ಇನ್ನೂ ಕೆಲವೆಡೆ ಆಯಾ ಜಿಲ್ಲಾಡಳಿತಗಳು ವಿಶೇಷ ಕಾರ್ಯಕ್ರಮಗಳು, ಪ್ರತಿಭಟನೆಯಂತಹ ಸಂದರ್ಭಗಳಲ್ಲಿ ರಜೆ ಘೋಷಣೆ ಮಾಡಿವೆ. ಕರ್ನಾಟಕದ ಕೆಲ ರಾಜ್ಯಗಳಲ್ಲಿ ಮಾತ್ರ ಭಾರೀ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ನೀಡಲಾಗಿದ್ದರೂ ಸಹ ಆ ರಜೆಗಳನ್ನು ಸರಿದೂಗಿಸಲು ಶನಿವಾರ ಪೂರ್ತಿ ತರಗತಿಗಳನ್ನು ನಡೆಸುವ ಕಾರ್ಯಗಳು ನಡೆದಿವೆ.












Click it and Unblock the Notifications