Holiday: ಜುಲೈ 7 ಸೋಮವಾರ ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜು, ಬ್ಯಾಂಕ್‌, ಸರ್ಕಾರಿ ಕಚೇರಿಗಳಿಗೆ ರಜೆ..

ದೇಶದಲ್ಲಿ ಈಗಾಗಲೇ ಹಲವೆಡೆ ಶಾಲಾ-ಕಾಲೇಜು, ಬ್ಯಾಂಕ್‌ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಕಾರಣಾಂತರಗಳಿಂದ ಸಾಲು ರಜೆಗಳನ್ನೇ ನೀಡಲಾಗಿದೆ. ಹಾಗೆಯೇ ಇದೀಗ ಜುಲೈ 7ರ ಸೋಮವಾರ ದೇಶಾದ್ಯಂತ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಜುಲೈ 7 ಸೋಮವಾರ ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜು, ಬ್ಯಾಂಕ್‌, ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಈಗಾಗಲೇ ಹಲವು ರಾಜ್ಯಗಳಲ್ಲಿ ಕಾರಣಾಂತರಗಳಿಂದ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳನ್ನೇ ನೀಡಲಾಗಿತ್ತು. ಇದೀಗ ಮತ್ತೆ ಮುಂಬರಲಿರುವ ಸೋಮವಾರದಂದು ರಜೆ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿದೆ.

Holiday Will All Schools Colleges Banks and Government Offices remain closed on Monday July 7

ಮತ್ತೊಂದೆಡೆ ಕರ್ನಾಟಕದಲ್ಲಿ ಬೇಸಿಗೆ ರಜೆ ಮುಕ್ತಾಯ ಆಗಿದ್ದು, ಶಾಲೆಗಳು ಕೂಡ ಆರಂಭವಾಗಿ ತರಗತಿಗಳು ನಡೆಯುತ್ತಿವೆ. ಈ ನಡುವೆಯೇ ಈಗಾಗಲೇ ಭಾರೀ ಮಳೆ ಮುಂದುವರೆದ ಹಿನ್ನೆಲೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಇದೀಗ ಮತ್ತೆ ಮೊಹರಂ ದಿನ ಹಿನ್ನೆಲೆ ಜುಲೈ 7ರಂದು ಎಲ್ಲಾ ಕಡೆಗಳಲ್ಲೂ ರಜೆ ನೀಡಲಾಗಿದೆ.

ಇಸ್ಲಾಮಿಕ್ ಹೊಸ ವರ್ಷದ ಆರಂಭದ ಸಂಕೇತ ಆಗಿರುವ ಮೊಹರಂ ಅನ್ನು ದೇಶದಲ್ಲಿ ಜುಲೈ 6 ಅಥವಾ 7ರಂದು ಆಚರಣೆ ಮಾಡಲಾಗುತ್ತದೆ. ಮೊಹರಂ ಚಂದ್ರನ ದರ್ಶನದ ಮೇಳೆ ನಿರ್ಧಾರ ಆಗಿರುತ್ತದೆ. ಜುಲೈ 6ರಂದು ಮೊಹರಂ ಎಂದು ಹೇಳಲಾಗುತ್ತಿದೆ. ಆದರೆ, ಅಂದು ಚಂದ್ರ ದರ್ಶನ ಆಗದಿದ್ದರೆ, ರಜಾದಿನವು ಜುಲೈ 7ಕ್ಕೆ ಮುಂದೂಡಿಕೆ ಆಗಲಿದೆ. ಮೊಹರಂ ಆಚರಣೆಯ ದಿನ ದೇಶಾದ್ಯಂತ ಎಲ್ಲಾ ಶಾಲಾ-ಕಾಲೇಜು, ಬ್ಯಾಂಕ್‌ಗಳು, ಸರ್ಕಾರಿ ಕಚೇರಿಗಳು ಮತ್ತು ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ.

ಮೊಹರಂ ಹಬ್ಬ ಹಿನ್ನೆಲೆ ದೇಶಾದ್ಯಂತ ಶಾಲಾ-ಕಾಲೇಜು, ಬ್ಯಾಂಕುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ರಜೆ ಘೋಷಣೆ ಮಾಡಲಾಗುತ್ತದೆ. ಆದ್ದರಿಂದ ಈ ಬರಿ ಮೊಹರಂ ಜುಲೈ 6ರ ಬದಲು 7ರಂದು ಬಂದ್ರೆ, ಆ ದಿನವನ್ನು ಸಾರ್ವಜನಿಕ ರಜೆ ಎಂದು ಘೋಷಣೆ ಮಾಡಲಾಗುತ್ತದೆ.

ಇನ್ನು ಮೊಹರಂ ಹಬ್ಬದ ದಿನದಂದು ಷೇರು ಮಾರುಕಟ್ಟೆಗಳು ಮುಚ್ಚಲ್ಪಡುತ್ತವೆ. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಮತ್ತು ಬಾಂಬೆ ಷೇರು ವಿನಿಮಯ ಕೇಂದ್ರ ಮುಚ್ಚಲಿವೆ. ಇದರಲ್ಲಿ ಷೇರು, ಷೇರು ಉತ್ಪನ್ನಗಳು, ಎಸ್‌ಎಲ್‌ಬಿ ಮತ್ತು ಕರೆನ್ಸಿ ಉತ್ಪನ್ನಗಳು ಮತ್ತು ಬಡ್ಡಿದರ ಉತ್ಪನ್ನಗಳ ವ್ಯಾಪಾರಗಳು ಕೂಡ ಸೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+