School Holiday: ಜೂನ್ 30ರ ವರೆಗೆ ಶಾಲಾ ರಜೆ ವಿಸ್ತರಣೆ

School Holiday: ಈ ವರ್ಷದ ಆರಂಭದಿಂದಲೂ ಇಲ್ಲಿಯವರೆಗೂ ಹಲವೆಡೆ ಶಾಲಾ-ಕಾಲೇಜುಗಳಿಗೆ ಸಾಲು ರಜೆಗಳೇ ಸಿಕ್ಕಿವೆ. ಈ ನಡುವೆಯೇ ಇದೀಗ ಈ ಭಾಗದಲ್ಲಿ ಶಾಲಾ ರಜೆಯನ್ನು ವಿಸ್ತರಣೆ ಮಾಡಲಾಗಿದೆ. ಹಾಗಾದ್ರೆ ಎಲ್ಲಿ ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಕರ್ನಾಟಕದಲ್ಲಿ ಈಗಾಗಲೇ ಬೇಸಿಗೆ ರಜೆ ಮುಗಿದು ಶಾಲಾ-ಕಾಲೇಜುಗಳು ಕೂಡ ಆರಂಭವಾಗಿವೆ. ಹಲವು ಜಿಲ್ಲೆಗಳಲ್ಲಿ ಮಾತ್ರ ಭಾರೀ ಮಳೆ ಮುಂದುವರೆದ ಕಾರಣ ಮಕ್ಕಳ ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿ, ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ರಾಜ್ಯದಲ್ಲಿ ಈ ಬಾರಿ ಸರ್ಕಾರಿ ರಜೆಗಳನ್ನು ಹೊರತುಪಡಿಸಿ ಹಲವು ಕಾರಣಗಳಿಂದ ಕೆಲವೆಡೆ ಸಾಲು ರಜೆಗಳನ್ನೇ ನೀಡಲಾಗಿದೆ.

School holidays extended in This state

ಇನ್ನೂ ಕರ್ನಾಟಕ ಹೊರತುಪಡಿಸಿ ಈಗಾಗಲೇ ಕೆಲವು ರಾಜ್ಯಗಳಲ್ಲಿ ಭಾರೀ ಬಿಸಿಲು ಮುಂದುವರೆದ ಕಾರಣ ಮಕ್ಕಳ ಹಿತದೃಷ್ಟಿಯಿಂದ ತಿಂಗಳುಗಟ್ಟಲೇ ರಜೆ ನೀಡಲಾಗಿತ್ತು. ಇದರಿಂದ ವಿದ್ಯಾರ್ಥಿಗಳಿಗೆ ರಜೆಗಳ ಹಬ್ಬದೂಟವನ್ನೇ ಬಡಿಸಿದಂತಾಗಿತ್ತು. ಇದೀಗ ಮತ್ತೆ ಕೆಲ ರಾಜ್ಯಗಳಲ್ಲಿ ರಣಬಿಸಿಲು ಮುಂದುವರೆದ ಕಾರಣ ರಜೆ ವಿಸ್ತರಣೆ ಮಾಡಲಾಗಿದೆ.

ಶಾಲಾ ರಜೆ ವಿಸ್ತರಣೆ: ಉತ್ತರ ಪ್ರದೇಶದಲ್ಲಿ ಜೂನ್ 16ರಿಂದ ಪ್ರಾಥಮಿಕ ಶಾಲೆಗಳು ಆರಂಭ ಆಗಬೇಕಿತ್ತು. ಆದರೆ, ರಣಬಿಸಿಲು ಮುಂದುವರೆದ ಕಾರಣ ರಜೆ ವಿಸ್ತರಿಸಬೇಕೆಂದು ಶಿಕ್ಷಕರು ಮತ್ತು ಪೋಷಕರ ಬೇಡಿಕೆ ಇಟ್ಟಿದ್ದು, ಇದಕ್ಕೆ ಸರ್ಕಾರ ಕೂಡ ಒಪ್ಪಿಗೆ ಸೂಚಿಸಿದೆ. ಈ ಪ್ರಕಾರ ರಜೆಯನ್ನು ಇನ್ನೂ 15 ದಿನಗಳವರೆಗೆ ವಿಸ್ತರಿಸಲಾಗಿದ್ದು, ಇಲ್ಲಿನ ಶಾಲೆಗಳು ಜೂನ್ 30ರ ವರೆಗೆ ಮುಚ್ಚಲ್ಪಡುತ್ತವೆ.

ಶಾಲಾ ಶಿಕ್ಷಕರಿಗೆ ಸರ್ಕಾರದಿಂದ ಪ್ರಮುಖ ಸೂಚನೆ: ರಾಜ್ಯದಲ್ಲಿ ಬಿಸಿಲಿನ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯಿಂದ ರಜೆ ವಿಸ್ತರಣೆ ಮಾಡಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ. ಆದರೆ ಶಿಕ್ಷಕರು ಮಾತ್ರ ಜೂನ್ 16 ರಿಂದಲೇ ಶಾಲೆಗೆ ಹೋಗಬೇಕಾಗುತ್ತದೆ ಅಂತಲೂ ತಿಳಿಸಿದೆ.

ಬರೀ ಉತ್ತರ ಪ್ರದೇಶ ಅಷ್ಟೇ ಅಲ್ಲದೆ ದೇಶದ ಹಲವು ರಾಜ್ಯಗಳಲ್ಲಿ ಮಳೆಗಾಲದ ನಡುವೆಯೂ ತಾಪಮಾನದ ಪ್ರಮಾಣ ಹೆಚ್ಚಾಗುತ್ತಲಿದೆ. ಉತ್ತರ ಪ್ರದೇಶದಲ್ಲಿ ತಾಪಮಾನ ಪ್ರಮಾಣ 45 ಡಿಗ್ರಿ ಸೆಲ್ಸಿಯಸ್ ದಾಟುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಹೇಗೆ ಶಾಲೆಗೆ ಕಳುಹಿಸುವುದು ಎಂಬುದು ಪೋಷಕರ ಆತಂಕವಾಗಿತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಶಿಕ್ಷಕರ ಸಂಘಟನೆಗಳು ಬೇಸಿಗೆ ರಜೆಯನ್ನು ಜೂನ್ 30ರ ವರೆಗೆ ವಿಸ್ತರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದವು.

ಈ ಹಿಂದೆ ಘೋಷಿಸಲಾದ ವೇಳಾಪಟ್ಟಿಯ ಪ್ರಕಾರ, ರಾಜ್ಯದಲ್ಲಿನ ಜೂನ್ 16ರಂದು ತೆರೆಯಬೇಕಿತ್ತು. ಆದರೆ ತಾಪಮಾನ ಏರಿಕೆ ಆಗುತ್ತಿರುವ ಕಾರಣ ಶಾಲಾ ರಜೆ ವಿಸ್ತರಣೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಉತ್ತರ ಪ್ರದೇಶ ಪ್ರಾಥಮಿಕ ಶಾಲಾ ಶಿಕ್ಷಕ ಸಂಘ ಹಾಗೂ ಪೋಷಕರು ಶಿಕ್ಷಣ ಸಚಿವರು ಮತ್ತು ಇಲಾಖಾ ಅಧಿಕಾರಿಗಳನ್ನು ಭೇಟಿ ಮಾಡಿ ರಜೆ ವಿಸ್ತರಣೆ ಮಾಡುವಂತೆ ಮನವಿ ಪತ್ರವನ್ನು ಸಲ್ಲಿಸಿದ್ದರು. ಇದಕ್ಕೆ ಸ್ಪಂದಿಸಿದ ಶಿಕ್ಷಣೆ ಇಲಾಖೆ ಜೂನ್ 30ರ ವರೆಗೆ ರಜೆ ವಿಸ್ತರಣೆಗೆ ಒಪ್ಪಿಗೆ ಸೂಚಿಸಿತು.

ಈ ಸಂದರ್ಭದಲ್ಲಿ ಶಿಕ್ಷಕ ಸಂಘಟನೆಗಳು ಸರ್ಕಾರ ಮುಂದೆ ಮತ್ತೊಂದು ಬೇಡಿಕೆ ಇಟ್ಟವು. ಸರ್ಕಾರವು ವರ್ಗಾವಣೆ ನೀತಿಯಲ್ಲಿ ಕೇವಲ 15 ಜಿಲ್ಲೆಗಳನ್ನು ಮಾತ್ರ ಸೇರಿಸಿಕೊಂಡಿದೆ. ಆದರೆ ಶಿಕ್ಷಕರಿಗೆ ಇತರ ಜಿಲ್ಲೆಗಳಲ್ಲಿ ವರ್ಗಾವಣೆಗೆ ಅವಕಾಶ ಸಿಗಬೇಕೆಂದು ಮನವಿ ಪತ್ರ ಸಲ್ಲಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+