ವಿದ್ಯಾರ್ಥಿನಿ ನೀಡಿದ ಗೂಸಾಕ್ಕೆ ಬೆಚ್ಚಿ ಬಿದ್ದ ಬೀದಿ ಕಾಮಣ್ಣ
ನವದೆಹಲಿ, ಜು. 07: ಹುಡುಗಿಯರನ್ನು ಕಿಚಾಯಿಸುತ್ತಿದ್ದ ಬೀದಿ ಕಾಮಣ್ಣನಿಗೆ ಸರಿಯಾಗೇ ಮಾಂಜಾ ಬಿದ್ದಿದೆ. ಇಲ್ಲಿ ಧರ್ಮದೇಟು ಕೊಟ್ಟವರು ಪೊಲೀಸರಲ್ಲ ಅಥವಾ ಜನರೂ ಅಲ್ಲ.
ತನ್ನನ್ನು ಪೀಡಿಸುತ್ತಿದ್ದ ಕಾಮಣ್ಣನ್ನು ಪೊಲೀಸ್ ಸ್ಟೇಶನ್ ಗೆ ಕರೆದುಕೊಂಡು ಹೋಗಿ ಇನ್ನು ಹುಡುಗಿಯರ ಕಡೆ ತಲೆ ಹಾಕಿ ಮಲಗದಂತೆ ಏಟು ಕೊಟ್ಟವಳು 11ನೇ ತರಗತಿ ವಿದ್ಯಾರ್ಥಿನಿ ಸಂಜನಾ. ಇಂಥ ಪ್ರಕರಣಕ್ಕೆ ಉತ್ತರ ಪ್ರದೇಶದ ಪಿಲಿಭಿಟ್ ಜಿಲ್ಲೆ ಮಂಗಳವಾರ ಸಾಕ್ಷಿಯಾಯಿತು.[ಬೀದಿಕಾಮಣ್ಣ; ನಿನ್ನ ಕೈಗೆ ಬೇಡಿ ಬೀಳಬಹುದಣ್ಣ!]

ಮೊದಲ ಪಿಯುಸಿ ಓದುತ್ತಿರುವ ಸಂಜನಾ ಬೀದಿ ಕಾಮಣ್ಣನಿಗೆ ಕೊಟ್ಟಿರುವ ಏಟುಗಳು ಅಂತಿಂಥವಲ್ಲ. ಸಾಕ್ಷಾತ್ ಪೊಲೀಸರ ಏದುರೇ ಕಪಾಳಕ್ಕೆ ಎರಡೂ ಕೈಗಳಿಂದ ಬಿಗಿದಿದ್ದಾಳೆ, ಕಾಲಿನಿಂದ ಝಾಡಿಸಿದ್ದಾಳೆ. ತನ್ನ ಪಾದರಕ್ಷೆಯನ್ನು ಕೈಗೆ ತೆಗೆದುಕೊಂಡು ಹೊಡೆಯಲು ಆರಂಭಿಸಿದವಳು ಸಿಟ್ಟು ತಣ್ಣಗಾಗುವವರೆಗೂ ನಿಲ್ಲಿಸಿಲ್ಲ.
ವಿದ್ಯಾರ್ಥಿನಿ ನೀಡುತ್ತಿದ್ದ ಏಟುಗಳಿಂದ ತತ್ತರಿಸಿದ ಹುಡುಗ ಸಾರಿ ಸಾರಿ ಎಂದು ಬಡಬಡಿಸಿಕೊಂಡಿದ್ದಾನೆ. ನಂತರ ಆಕೆಯ ಕಾಲಿಗೂ ಬಿದ್ದು ಕ್ಷಮಾಪಣೆ ಕೇಳಿದ್ದಾನೆ.
ಅಂಕಿತ್ ಎಂಬ ಬೀದಿ ಕಾಮಣ್ಣ ದಾರಿಯಲ್ಲಿ ಹೋಗಿ ಬರೋ ಹುಡುಗಿಯರನ್ನು ಚುಡಾಯಿಸುತ್ತಿದ್ದ. ಸಂಜನಾ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಳು. ನಂತರ ತನ್ನ ಆಟ ಮುಂದುವರಿಸಿದ ಅಂಕಿತ್ ಸಂಜಳಾಳ ಬೆನ್ನು ಬಿದ್ದ. ಇದನ್ನು ಮನಗಂಡ ಆಕೆ ಆತನನ್ನು ಠಾಣೆಗೆ ಕರೆಸಿದ್ದಾಳೆ. ಪೊಲೀಸರ ಎದುರೇ ತನ್ನ ಸಿಟ್ಟನ್ನು ಹೊರಹಾಕಿದ್ದು ಹಿಗ್ಗಾ ಮುಗ್ಗಾ ಥಳಿಸಿದ್ದಾಳೆ. ಹುಡುಗಿಯ ಹೊಡೆತಕ್ಕೆ ಸಿಕ್ಕ ಬೀದಿ ಕಾಮಣ್ಣ ಇನ್ನು ಮುಂದೆ ತಲೆ ಎತ್ತಿ ತಿರುಗಾಡುವುದು ಅನುಮಾನವೇ!












Click it and Unblock the Notifications