ಪ್ರವಾಸಕ್ಕೆ ಹೋದ ಬಾಲಕಿಗೆ ವೃದ್ಧಾಶ್ರಮದಲ್ಲಿ ಸಿಕ್ಕರು ಅಜ್ಜಿ: ಕಣ್ಣು ಒದ್ದೆ ಮಾಡುವ ಘಟನೆ
ಬೆಂಗಳೂರು, ಆಗಸ್ಟ್ 21: ಶಾಲಾ ಪ್ರವಾಸದ ಭಾಗವಾಗಿ ವೃದ್ಧಾಶ್ರಮವೊಂದಕ್ಕೆ ತೆರಳಿದ್ದ ಬಾಲಕಿಯೊಬ್ಬಳಿಗೆ ಅಲ್ಲಿ ತನ್ನ ಅಜ್ಜಿ ಪತ್ತೆಯಾದ ಹೃದಯಸ್ಪರ್ಶಿ ಘಟನೆ ವರದಿಯಾಗಿದೆ.
Recommended Video
ಶಾಲೆಯೊಂದರ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆಂದು ಕರೆದೊಯ್ಯಲಾಗಿತ್ತು. ಅದರ ಭಾಗವಾಗಿ ವೃದ್ಧಾಶ್ರಮವೊಂದಕ್ಕೂ ತೆರಳಿದ್ದರು. ಅಲ್ಲಿ ವಿದ್ಯಾರ್ಥಿನಿಯರ ಬಳಗದಲ್ಲಿದ್ದ 14 ವರ್ಷದ ಬಾಲಕಿಯೊಬ್ಬಳಿಗೆ ತನ್ನ ಅಜ್ಜಿ ಆಕಸ್ಮಿಕವಾಗಿ ಪತ್ತೆಯಾಗಿದ್ದಾರೆ.
ಅಜ್ಜಿಯನ್ನು ಕಂಡ ಕೂಡಲೇ ಬಾಲಕಿ ಅಚ್ಚರಿ ಮತ್ತು ಆಘಾತಕ್ಕೆ ಒಳಗಾಗಿದ್ದಾಳೆ. ಪ್ರೀತಿಯ ಅಜ್ಜಿ ಮತ್ತೆ ಸಿಗುತ್ತಿದ್ದಂತೆಯೇ ಬಾಲಕಿಯ ದುಃಖದ ಕಟ್ಟೆಯೊಡೆದುಬಂದಿದೆ. ಅಜ್ಜಿ-ಮೊಮ್ಮಗಳ ಪ್ರೀತಿಯ ಮರುಸೇರ್ಪಡೆಯ ಭಾವುಕ ಕ್ಷಣಗಳಿಗೆ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ವೃದ್ಧಾಶ್ರಮದ ನಿವಾಸಿಗಳು ಸಾಕ್ಷಿಯಾದರು.
ಈ ಮನಮಿಡಿಯುವ ದೃಶ್ಯ ಅಲ್ಲಿ ನೆರೆದಿದ್ದ ಜನರ ಕಣ್ಣಾಲಿಗಳಲ್ಲಿಯೂ ನೀರು ಜಿನುಗಿಸಿತು. ಅಜ್ಜಿಯ ಜತೆ ಜತೆ ಕುಳಿತ ಬಾಲಕಿ ಬಿಕ್ಕಿ ಅಳುತ್ತಿರುವ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಬಾಲಕಿಗೆ ತಿಳಿಯದಂತೆ ಆಕೆಯ ಪೋಷಕರು ಅಜ್ಜಿಯನ್ನು ವೃದ್ಧಾಶ್ರಮಕ್ಕೆ ಕರೆತಂದು ಸೇರಿಸಿ ಹೋಗಿದ್ದರು. ಬಾಲಕಿ ವಿಚಾರಿಸಿದಾಗ ತಮ್ಮ ಸಂಬಂಧಿಕರ ಮನೆಯಲ್ಲಿ ಅಜ್ಜಿ ವಾಸಿಸುತ್ತಿರುವುದಾಗಿ ಬಾಲಕಿಗೆ ಸುಳ್ಳು ಹೇಳಿದ್ದರು ಎನ್ನಲಾಗಿದೆ.
A school organised a tour to an old age home and this girl found her grandmother there. When she used to ask her parents about the whereabouts of grandma, she was told that she has gone to meet her relatives. This is the society we are creating...#Heart_touching.. pic.twitter.com/fHRFVFAFyx
— Anita Chauhan (@anita_chauhan80) 21 August 2018
ವಿದೇಶಿ ಸಂಸ್ಕೃತಿಯಿಂದ ಪ್ರೇರಣೆಗೊಂಡ ನಾವು ಸೃಷ್ಟಿಸುತ್ತಿರುವ ಸಮಾಜ ಇದಾಗಿದೆ. ಅವಿಭಕ್ತ ಕುಟುಂಬಗಳು ಕಣ್ಮರೆಯಾಗಿ ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಾ ಸಂಬಂಧಗಳ ಮೌಲ್ಯ ಮರೆತಿದ್ದೇವೆ. ಇದು ದುರದೃಷ್ಟಕರ ಎಂದು ಈ ಫೋಟೊವನ್ನು ಹಂಚಿಕೊಂಡಿರುವ ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆದರೆ, ಈ ಫೋಟೊ ಯಾವ ಊರಿನದು, ಬಾಲಕಿಯ ಪೋಷಕರು ಯಾರು ಮುಂತಾದ ಮಾಹಿತಿಗಳು ತಿಳಿದುಬಂದಿಲ್ಲ.
-
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
March 23 Horoscope: ಈ 3 ರಾಶಿಗಳಿಗೆ ಭಾರಿ ಲಾಭ! ಉಳಿದವರು ಜಾಗ್ರತೆ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
ಷೇರು ಪೇಟೆ ಧೂಳೀಪಟ: ಹೂಡಿಕೆದಾರರಿಗೆ 10 ಲಕ್ಷ ಕೋಟಿ ಲಾಸ್; ಸೆನ್ಸೆಕ್ಸ್, ನಿಫ್ಟಿ ಶೇ. 2.4ರಷ್ಟು ಇಳಿಕೆ! -
ಏ.1ರಿಂದ ಅರಣ್ಯ ಇಲಾಖೆ ಹೊರಗುತ್ತಿಗೆ ನೌಕರರಿಂದ ಮುಷ್ಕರ: ಈಶ್ವರ್ ಖಂಡ್ರೆ ಮಹತ್ವದ ಸೂಚನೆ -
'ಧುರಂಧರ್ 2' ರಣವೀರ್ ಸಿಂಗ್ ಎಂಟ್ರಿ ದೃಶ್ಯ ಮರುಸೃಷ್ಟಿಸಿದ ಯೂಟ್ಯೂಬರ್: 13 ಮಿಲಿಯನ್ ವೀಕ್ಷಣೆ ಪಡೆದ Viral Video -
Video: ಬೆಂಗಳೂರು ರಸ್ತೆಯಲ್ಲಿ ಯುವಕರ 'ಬಿಯರ್' ದರ್ಬಾರ್: ಬೈಕ್ನಲ್ಲೇ ಟ್ರಿಪಲ್ ರೈಡಿಂಗ್ ಜತೆ ಮದ್ಯಪಾನ












Click it and Unblock the Notifications