ಎರಡು ದಿನ ರಸ್ತೆಗೆ ಇಳಿಯಲ್ಲ ಸ್ಕೂಲ್ ಬಸ್, ಎಲ್ಲಿ & ಯಾಕೆ ಇಲ್ಲಿದೆ ಡೀಟೆಲ್ಸ್
ನವೆಂಬರ್‌ನಲ್ಲಿ ಎರಡು ದಿನಗಳ ಶಾಲಾ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಎರಡು ದಿನ ಶಾಲಾ ವಾಹನಗಳನ್ನು ರಸ್ತೆಗೆ ಇಳಿಸದೆ ಇರಲು ಮಹಾರಾಷ್ಟ್ರದಲ್ಲಿ ನಿರ್ಧರಿಸಲಾಗಿದೆ. ಇದರಿಂದ ಈ ರಾಜ್ಯದ ಶಾಲಾ ಮಕ್ಕಳಿಗೆ ಎರಡು ದಿನಗಳ ಕಾಲ ಸಮಸ್ಯೆ ಆಗುವ ಸಾಧ್ಯತೆ ಇದೆ. ಈ ವಿಷಯ ಇದೀಗ ಮಹಾರಾಷ್ಟ್ರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಎರಡು ದಿನ ಶಾಲಾ ಬಸ್‌ಗಳು ಯಾಕೆ ರಸ್ತೆಗೆ ಇಳಿಯುತ್ತಿಲ್ಲ ಎನ್ನುವ ವಿವರ ಇಲ್ಲಿದೆ.
ಮಹಾರಾಷ್ಟ್ರ ಚುನಾವಣೆಗೆ ಇನ್ನು 10 ದಿನ ಮಾತ್ರ ಬಾಕಿ ಉಳಿದಿದೆ. ಹೀಗಾಗಿ, ಮಹಾರಾಷ್ಟ್ರದಲ್ಲಿ ಮತದಾನ ದಿನಕ್ಕೆ ಭರ್ಜರಿ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ನವೆಂಬರ್ 20ಕ್ಕೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆಯಲಿದೆ. ಹೀಗಾಗಿ, ಈ ರಾಜ್ಯದಲ್ಲಿ ಮತದಾನಕ್ಕೆ ಈಗಾಗಲೇ ಸಾಕಷ್ಟು ಕೆಲಸಗಳನ್ನು ಮಾಡಿಕೊಳ್ಳಲಾಗಿದೆ. ಇದೀಗ ಚುನಾವಣೆ ಕೆಲಸಗಳಿಗೆ ಮಹಾರಾಷ್ಟ್ರದ ಪ್ರವಾಸಿ ಹಾಗೂ ಶಾಲಾ ವಾಹನಗಳ ಬಳಕೆಯನ್ನು ಕಡ್ಡಾಯ ಮಾಡಲಾಗಿದೆ. ಹೀಗಾಗಿ, ಎರಡು ದಿನ ಶಾಲಾ ವಾಹನಗಳ ಬಳಕೆಯನ್ನು ಮಹಾರಾಷ್ಟ್ರದಲ್ಲಿ ನಿಷೇಧಿಸಲಾಗಿದೆ.

ಮಹಾರಾಷ್ಟ್ರ ಚುನಾವಣೆ ಹಿನ್ನೆಲೆಯಲ್ಲಿ ಅಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆಯು ಈ ರೀತಿಯ ಸೂಚನೆ ನೀಡಿದೆ. ಇದೇ 20ರಂದು ಅಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿ, ನವೆಂಬರ್ 19 ಹಾಗೂ 20ರಂದು ಇಲ್ಲಿ ಯಾವುದೇ ಬಸ್‌ಗಳು ರಸ್ತೆಗೆ ಇಳಿಯುವುದಿಲ್ಲ. ಮುಂಬೈ ಹಾಗೂ ಮಹಾರಾಷ್ಟ್ರದ ಹಲವು ಭಾಗದಲ್ಲಿ ಈ ಬದಲಾವಣೆಯನ್ನು ಮಾಡಿಕೊಳ್ಳಲಾಗುತ್ತಿದೆ.
ಮೋದಿ ವಾಗ್ದಾಳಿ: ಇನ್ನು ಮಹಾರಾಷ್ಟ್ರದಲ್ಲಿ ಸರಣಿ ಚುನಾವಣೆ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುತ್ತಿದ್ದು, ಇಲ್ಲಿ ಕಾಂಗ್ರೆಸ್ ಹಾಗೂ ಮಿತ್ರ ಪಕ್ಷಗಳ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ. ಇಲ್ಲಿ ವಿರೋಧ ಪಕ್ಷಗಳು ಅಧಿಕಾರಕ್ಕೆ ಬಂದರೆ ನಿಮ್ಮ ರೊಟ್ಟಿಯನ್ನೂ ಕಸಿದುಕೊಳ್ಳಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದಕ್ಕೆ ಕಾಂಗ್ರೆಸ್ ಸಹ ತಿರುಗೇಟು ಕೊಟ್ಟಿದೆ. ಪ್ರಧಾನಿ ಮೋದಿ ಅವರು, ಲೋಕಸಭೆ ಚುನಾವಣೆಯ ಸಮಯದಲ್ಲಿ ಮಹಿಳೆಯರ ಮಾಂಗಲ್ಯದ ಬಗ್ಗೆ ಮಾತನಾಡಿದ್ದರು. ಇದೀಗ ಅವರ ಭಾಷಣ ಮಾಡುವ ಹಂತ ಇನ್ನಷ್ಟು ಕೆಳಗೆ ಇಳಿದಿದೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ರಂಗೇರಿದ ಚುನಾವಣೆ: ಮಹಾರಾಷ್ಟ್ರದಲ್ಲಿ 288 ವಿಧಾನಸಭಾ ಕ್ಷೇತ್ರಗಳಿದ್ದು ಇದೇ 20ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಇಲ್ಲಿ ಈಗಾಗಲೇ ಪ್ರಚಾರ ಕಾರ್ಯಗಳು ಕೊನೆಯ ಹಂತ ತಲುಪಿಯಾಗಿದೆ. ಈ ರಾಜ್ಯದಲ್ಲಿ ಬಹುಮತ 145 ಆಗಿದೆ.
ಇಲ್ಲಿ ನೇರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಹಣಾಹಣಿ ಇದೆಯಾದರೂ, ಹಲವು ಮಿತ್ರ ಪಕ್ಷಗಳು ಹಾಗೂ ಸಣ್ಣ ಪಕ್ಷಗಳು ರಾಜ್ಯದಲ್ಲಿ ಇವೆ. ಶಿವಸೇನಾ ಹಾಗೂ ನ್ಯಾಶನಲಿಷ್ಟ್ ಕಾಂಗ್ರೆಸ್ ಇಬ್ಭಾಗವಾಗಿ ಇದೇ ಮೊದಲು ಚುನಾವಣೆಗೆ ಮತದಾರರ ಮುಂದೆ ಹೋಗುತ್ತಿದೆ. ಹೀಗಾಗಿ, ಇಲ್ಲಿ ಜನ ಹೇಗೆ ಪ್ರತಿಕ್ರಿಯಿಸಲಿದ್ದಾರೆ ಎನ್ನುವ ಕೂತುಹಲ ಈಗ ಎದುರಾಗಿದೆ.












Click it and Unblock the Notifications