ಮಾರನ್ ಬಂಧನಕ್ಕೆ ಮುಂದಾದ ಸಿಬಿಐಗೆ ಸುಪ್ರೀಂ ತಡೆ
ನವದೆಹಲಿ, ಆಗಸ್ಟ್ 12: ಬಹುಕೋಟಿ ಟೆಲಿಕಾಂ ಹಗರಣದಲ್ಲಿ ಸಿಲುಕಿರುವ ಮಾಜಿ ಕೇಂದ್ರ ಟೆಲಿಕಾಂ ಸಚಿವ ದಯಾನಿಧಿ ಮಾರನ್ ಅವರಿಗೆ ಬಂಧನ ಭೀತಿ ದೂರಾಗಿದೆ. ಸಿಬಿಐ ತಂಡ ಸದ್ಯಕ್ಕೆ ಮಾರನ್ ಅವರನ್ನು ಬಂಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ ವಿಭಾಗೀಯ ಪೀಠ ವಿಚಾರಣೆಯನ್ನು ಮುಂದೂಡಿ, ಆಗಸ್ಟ್ 14 ರ ತನಕ ಬಂಧನ ಮಾಡದಂತೆ ನಿರ್ದೇಶಿಸಿದೆ. ಕೆಲ ದಿನಗಳ ಹಿಂದೆ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಮುಂದೆ ಶರಣಾಗುವಂತೆ ಮಾರನ್ ಗೆ ಮದ್ರಾಸ್ ಹೈಕೋರ್ಟ್ ಸೂಚಿಸಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟಿಗೆ ಮಾರನ್ ಮನವಿ ಸಲ್ಲಿಸಿದ್ದರು.
ಸುಮಾರು 440 ಕೋಟಿ ಮೌಲ್ಯದ ಟೆಲಿಕಾಂ ಹಗರಣದಲ್ಲಿ ತನ್ನ ಆಪ್ತ ಸಂಸ್ಥೆಗಳಿಗೆ ಡೀಲ್ ಕುದುರುವಂತೆ ಮಾಡಿದ ಮಾರನ್ ಅವರಿಂದ ಬಿಎಸ್ಎನ್ ಎಲ್ ಗೆ ಭಾರಿ ನಷ್ಟ ಉಂಟಾಗಿತ್ತು. ಕಳೆದ ನಾಲ್ಕು ವರ್ಷಗಳಿಂದ ತನಿಖೆ ನಡೆಸಿರುವ ಸಿಬಿಐ ಈಗ ಏಕಾಏಕಿ ಸನ್ ಟಿವಿ ನೆಟ್ವರ್ಕ್ ಮಾಲೀಕತ್ವ ಹೊಂದಿರುವ ಮಾರನ್ ಬ್ರದರ್ಸ್ ಮೇಲೆ ಎರಗಿದೆ.

ಸುಮಾರು 549,96,01,793 ಲಂಚ ರೂಪದಲ್ಲಿ ಪಡೆದು ಸನ್ ಡೈರೆಕ್ಟ್ ನಲ್ಲಿ ಬಂಡವಾಳ ರೂಪದಲ್ಲಿ ಹೂಡಲಾಗಿತ್ತು. ಆಸ್ಟ್ರೋ ಆಲ್ ಏಷ್ಯಾ ನೆಟ್ವರ್ಕ್ಸ್ ಒಡೆತನದ ಸೌಥ್ ಏಷ್ಯಾ ಎಂಟರ್ ಟ್ರೈನ್ ಮೆಂಟ್ ಹೋಲಿಂಗ್ಸ್ ಹಣ ಪಾವತಿಸಿರುವ ಬಗ್ಗೆ ಮಾಹಿತಿ, ಪುರಾವೆ ಸಿಕ್ಕಿತು












Click it and Unblock the Notifications